ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೦೦ ಮಹಾರಾಣಾ ಪ್ರತಾಪಸಿಂಹ, ದೂರಿದ್ದು, ಅಸಂಖ್ಯ ಅನುಚರರಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳುತಲಿದ್ದನು; ಬೇರೊಂದು ಕಡೆಯಲ್ಲಿ ಪ್ರತಾಪನು ಇವನನ್ನು ಹುಡುಕುವದಕ್ಕಾಗಿ ಅಸಂಖ್ಯ ಶತ್ರುಗಳಿಂದ ವೇಷ್ಟಿತನಾಗಿ ಮಹಾ ವಿಪತ್ತಿನಲ್ಲಿ ಬಿದ್ದಿದ್ದನು; ಆದರೆ ರಾಠೋರ, ಚೌಹಾಣ, ಚಂದಾಯತ್, ಜಗಾಯತ್‌ ಮೊದಲಾದ ರಜಪೂತವೀರರು ನಿಶ್ಚಿಂತ ರಾಗಿರಲಿಲ್ಲ. ನೂರಾರು ರಜಪೂತವೀರರು ಸ್ವಾಮಿಗಾಗಿ ಆತ್ಮಯಜ್ಞವನ್ನು ಮಾಡಿ ಎರಡೂ ಸಾರೆ ಮಹಾರಾಣಾನನ್ನು ಸಂರಕ್ಷಿಸಿದರು-ಮೇವಾಡದ ಗೌರವವನ್ನು ಕಾಯ್ದ ರು. ಪ್ರತಾಪಸಿಂಹನು ಇಂದು ಅತ್ಯಂತ ಕ್ರುದ್ಧನೂ, ಚಪಲನೂ ಆಗಿದ್ದಾನೆ; ಮಧುಸಿಂಹನೊಡನೆ ಯುದ್ಧ ಮಾಡುತ್ತಿದ್ದಾನೆ, ವರ್ಷಾಕಾಲದ ವಾರಿಧಾರೆಯಂತೆ ಇವನ ಮೇಲೆ ಬಾಣಗಳ ಮಳೆಯಾಗುತ್ತಿದ್ದಿತು. ರಾಮದಾಸನ ಮರಣದ ತರು ವಾಯ ರಜಪೂತ ಸರದಾರರು ಭೀಷಣಪರಾಕ್ರಮದಿಂದ ಜಗನ್ನಾಥನೊಡನೆ ಯುದ್ಧ ಮಾಡುತ್ತಿದ್ದರು. ಇನ್ನು ಈ ರಜಪೂತರಿಂದ ಜಗನ್ನಾ ಧನು ಮೃತ್ಯುಮುಖ ದಲ್ಲಿ ಬೀಳತಕ್ಕವನಿದ್ದನು; ಇಷ್ಟರಲ್ಲಿ ಮಾನಸಿಂಹನು ಸ್ವತಃ ಯುದ್ಧಕ್ಕಾಗಿ ಮುಂದುವರಿದು ಬಂದನು. ಕೆಲ ಹೊತ್ತಾದ ಬಳಿಕ ಪ್ರತಾಪನು ಆನೆಯ ಮೇಲೆ ಕುಳಿತ ಮಾನಸಿಂಹನನ್ನು ನೋಡಿದನು; ಆ ಕಡೆಗೆ ಧಾವಿಸಿ ನಡೆದನು.* ಮೊಗಲ

  • ಟಾಡ್ ಸಾಹೇಬರು ಅಕಬರನ ಹಿರಿಯ ಮಗನಾದ ಯುವರಾಜ ಸೇಲಿನನು ಈ ಯುದ್ದದ ಮುಖ್ಯ ಸೇನಾಪತಿಯಾಗಿದ್ದನೆಂದೂ, ಮಾನಸಿಂಹನು ಅವನ ಸಹಾಯಕಸೇನಾಪತಿ ಯಾಗಿದ್ದನೆಂದೂ ಹೇಳುತ್ತಿರುವರು ಆದರೆ «« ಅಕಬರ ನಾಮಾ, ೨) ಬದಾವುನಿಯ cc ಮುತಾ ಖಾಬುತ್ತಾರೀಖ, ೨) ನಿಜಮುದ್ದೀನನ ತಬಕಾತ ಇ ಅಕಬರ ೨೨ ಮೊದಲಾದ ಯಾವ ಪ್ರಾಮಾಣಿಕಗ್ರಂಥಗಳಲ್ಲಿಯೂ ಇದಕ್ಕೆ ಆಧಾರವಿಲ್ಲ ಕಾರಣ ಟಾಡ್ ಸಾಹೇಬರ ಸಂಗತಿಯನ್ನು ನಂಬಲಿಕ್ಕೆ ಬರುವಂತಿಲ್ಲ ಸಾಮ್ರಾಟ ಜಹಾಂಗೀರನ ಆತ್ಮವೃತ್ತದಿಂದ ತಿಳಿದು ಬರುವದೇನಂದರೆಇವನು ಹಿಜರಿ ಸನ್ ೯೭೮ ರಲ್ಲಿ ಅಥವಾ ಸನ್ ೧ ೫೭೦ನೆಯ ಅಗಷ್ಟ ೧೮ ನೇ ತಾರೀಖಿನ ದಿವಸ ಹುಟ್ಟಿದನು ( emoirs of Jahangir, translated by Mayor Price P 3 ) ಬದಾವುನಿಯು ಸ್ವತಃ ಈ ಯುದ್ದದಲ್ಲಿದ್ದು, ಇವನು ಸೇಲೀಮನನ್ನು ಉಲ್ಲೇಖಿಸಿಲ್ಲ, ಇವನ ಮತ ದಂತ ಈ ಯುದ್ಧವು ಹಿಜರೀ ಸನ್ ೯೮೪ರಲ್ಲಿ ಅಥವಾ ಕ್ರಿ. ಶಕದ ೧೫೭೬ ರಲ್ಲಿ ಆಯಿತು, -ಕಾರಣ ಈ ಯುದ್ಧದ ಸಮಯದಲ್ಲಿ ಸೇಲೀಮನಿಗೆ ಆರೇಳು ವರ್ಷಕ್ಕಿಂತ ಹೆಚ್ಚಾಗಿರಲಿಲ್ಲ, ಅದ ರಿ೦ದ ಸೇಲೀಮನು ಈ ಯುದ್ದದ ಸೇನಾಪತಿಯಾಗಿರುವದು ಅಸಂಭವವು, ಕಾರಣ ನಾವು ಟಾಡ್ ಸಾಹೇಬರ ಸಂಗತಿಯನ್ನು ನಂಬಲಾರೆವು ಟಾಡ್ ಸಾಹೇಬರ ಇತಿಹಾಸದಲ್ಲಿ ಸೇಲೀನ ನನುದ್ದೇಶಿಸಿ ಹೇಳಿದ ಸಂಗತಿಯನ್ನು ಮಾನಸಿಂಹನಿಗೆ ಸಂಬಂಧಿಸಿ ಬರೆದಿದ್ದೇವೆ. ಪ್ರತಾಪನು