ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳದೀಘಟ್ಟದ ಯುದ್ಧ ೧v • • tv M ಸೈನಿಕರು ನಾಲ್ಕೂ ಕಡೆಯಿಂದ ತಮ್ಮ ಸೇನಾಪತಿಯ ರಕ್ಷಣೆಗಾಗಿ ಬಂದು ಕೂಡ ಹತ್ತಿದರು; ಮತ್ತು ಪ್ರತಾಪನನ್ನು ಆಕ್ರಮಿಸಿದರು; ಆದರೆ ಪ್ರತಾಪನಿಗೆ ಈ ಕಡೆಗೆ ಲಕ್ಷವಿರಲಿಲ್ಲ. ಅವನ ಪ್ರತಿಜ್ಞೆಯು ಅಚಲವಾಗಿದ್ದಿತು; ಸ್ವದೇಶಕ್ಕಾಗಿ ಈ ಭಯಂಕರ ಯುದ್ಧದಲ್ಲಿ ಪ್ರಾಣವನ್ನು ತ್ಯಜಿಸುವದೇ ಅವನ ಉದ್ದೇಶವಾಗಿದ್ದಿತು. ಪ್ರತಾಪನು ದೂರದಿಂದ ಲಕ್ಷವಿಟ್ಟು, ಮಾನಸಿಂಹನಿಗೆ ಹದನವಾದ ಬರ್ಚಿಯನ್ನೆ ಸೆದನು; ಆದರೆ ದೈವವಶದಿಂದ ಈ ಬರ್ಚಿಯು ಮಾನಸಿಂಹನಿಗೆ ಬಡಿಯಲಿಲ್ಲ; ಲೋಹಮಯವಾದುದೊಂದು ಹೌದಿಗೆ ಬಡಿದು, ವ್ಯರ್ಥವಾಗಿ ಹೋಯಿತು. ಪ್ರತಾಪನ ಅಶ್ವವಾದ ಚೈತಕವು ಚಪಲವಿದ್ದಿತು, ಇದು ಪ್ರಭುವಿಗೆ ತಕ್ಕ ವಾಹನ ವಾಗಿದ್ದಿತು. ಇದು ಶತ್ರುಸೇನೆಯಲ್ಲಿ ತನ್ನ ಪ್ರಭುವನ್ನು ತೆಗೆದುಕೊಂಡು ಮುಂದೆ ನಾಗಿತು. ಪ್ರತಾಪನು ಮಾನಸಿಂಹನ ಹತ್ತಿರ ಬಂದನು ತೇಜಸ್ವಿಯಾದ ಚೈತ ಕವು ಮಾನಸಿಂಹನ ಆನೆಗೆ ಕಾಲನ್ನು ಆನಿಸಿ ನಿಂತುಕೊಂಡಿತು. ಪ್ರತಾಪನು ಮಾನಸಿಂಹನನ್ನು ಹೊಡೆಯುವದಕ್ಕಾಗಿ ಶಸ್ತ್ರವನ್ನೆತ್ತಿದನು; ಮಾವುತನು ನಿಹತ ನಾದನು. ಚಾಲಕನಿಲ್ಲದ ಮತ್ತಗಜವು ಮಾನಸಿಂಹನನ್ನು ತೆಗೆದುಕೊಂಡು ಓಡ ಹತ್ತಿತು. ಇಂದು ದೈವಬಲದಿಂದ ಮಾನಸಿಂಹನು ರಕ್ಷಣೆಯನ್ನು ಹೊಂದಿದನು. ಸೇನಾಪತಿಗೊದಗಿದ ಈ ವಿಪತ್ತನ್ನು ನೋಡಿ, ಮೊಗಲ-ಸೈನಿಕರು ಸಾಗರತರಂಗಗಳಂತೆ, ಆ ಕಡೆಗೆ ಧಾವಿಸಿ ನಡೆದರು. ಹಿಂಭಾಗದಲ್ಲಿರುವ ಮಿಹತರಖಾ ನನು ತನ್ನ ರಕ್ಷಿತ ಸೇನೆಯನ್ನು ತೆಗೆದುಕೊಂಡು, ನಗಾರಿಯನ್ನು ಬಾರಿಸುತ್ತ ಮುಂದೆ ಸಾಗಿದನು; ಮತ್ತು ಬಾದಶಾಹೀ ಸೈನಿಕರನ್ನು ಉತ್ಸಾಹವಾಣಿಯಿಂದ ಧೈರ್ಯಗೊಳಿಸತೊಡಗಿದನು; ಇದರಿಂದ ಓಡಿಹೋಗಲು ಸಿದ್ಧರಾದ ಅನೇಕ ಸೈನಿಕರು ಹಿಂದಿರುಗಿದರು. ಈ ಕಡೆಯಲ್ಲಿ ಪ್ರಭುಭಕ್ತರಾದ ರಜಪೂತರು ಪ್ರತಾ ಪನ ಜೀವರಕ್ಷಣೆಗಾಗಿ ಮುಂದುವರಿದರು, ಈ ಸ್ಥಳದಲ್ಲಿ ಭಯಂಕರವಾದ ಯುದ್ಧ ವು ನಡೆಯಿತು. ಮಾನಸಿಂಹನನ್ನು ಆಕ್ರಮಿಸಿದ ಸಂಗತಿಯನ್ನು ಳಿದು, ಇತರ ವಿಷಯಗಳನ್ನು ನಾವು ಬದಾವುನಿ ಮತ್ತು ಅಬಲಫಜಲರ ಗ್ರಂಥದಿಂದ ಸಂಗ್ರಹಿಸಿದ್ದೇವೆ, ಅಬಲಫಜಲನು ಹೇಳಿದ್ದಾನೆ«« During these blazing sparks of commotion and contest and beat of the fires of fortune Kuar Mausing and the Rana approached one another and did valiant deeds " A N Vol. III, P, 246.