ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಮಹಾರಾಣಾ ಪ್ರತಾಪಸಿಂಹ, MMMMMMMMMMMMMMMMMM M ಅವನು ಅಗ್ರಜನ ಜೀವನರಕ್ಷಣೆಗಾಗಿ ವ್ಯಗ್ರಭಾವದಿಂದ ಮುಂದುವರಿದನು. ಇವನು ಗುರಿಯಿಟ್ಟು ಹೊಡೆದ ಬರ್ಚಿಗಳ ಪಟ್ಟಿನಿಂದ, ಆ ಇಬ್ಬರು ಸೈನಿಕರು ಮರಣವನ್ನು ಹೊಂದಿದರು. ತರುವಾಯ ಇವನು ಪ್ರತಾಪನನ್ನು ಕರೆದನು. ಅಣ್ಣ ತಮ್ಮಂದಿರ ಮಿಲನವಾಯಿತು. ಶಕ್ತಸಿಂಹನು ಭಕ್ತಿ-ಪ್ರೇಮ-ಪೂರ್ಣವಾದ ಹೃದಯದಿಂದ ಪ್ರತಾಪನ ಕಾಯ್ದೆ ರಗಿದನು; ಮೊದಲು ಮಾಡಿದ ಅಪರಾಧಕ್ಕಾಗಿ ಸಜಲ-ನಯನನಾಗಿ ಕ್ಷಮೆಯನ್ನು ಬೇಡಿಕೊಂಡನು. ಈ ಆನಂದದ ಪ್ರಸಂಗದಲ್ಲಿ ಪ್ರತಾಪಸಿಂಹನು ಹಳದೀಘಟ್ಟದ ಪರಾಜಯದ ಸಂಗತಿಯನ್ನು ಕ್ಷಣಕಾಲದ ವರೆಗೆ ಮರೆತುಬಿಟ್ಟನು, ಅವನ ಮನಸಿನಲ್ಲಿ ಅಭೂತಪೂರ್ವ ಆನಂದದ ಸಂಚಾರ ವಾಯಿತು. ಮಧ್ಯಾಹ್ನದಲ್ಲಿ ಹಳದೀಘಟ್ಟದಲ್ಲಿ ಮೊಗಲರು ಜಯಪಡೆದರು ಸಾಯಂಕಾಲದಲ್ಲಿ ಗಿರಿ-ಪಧದಲ್ಲಿ ಭ್ರಾತೃಸ್ನೇಹವು ಜಯಶಾಲಿಯಾಯಿತು. ಆದರೆ ಅಕಸ್ಮಾತ್ತಾಗಿ ಒದಗಿದ ಒಂದು ದುರ್ಘಟನೆಯು ಈ ಆನಂದದ ಸಮ್ಮಿಲನವನ್ನು ನಿರಾನಂದವನ್ನಾಗಿ ಮಾಡಿಬಿಟ್ಟಿತು. ಪ್ರತಾಪನ ಪ್ರೀತಿಯ ಕುದು ರೆಯು-ಅವನನ್ನು ರಣಕ್ಷತ್ರದಲ್ಲಿಯೂ, ಗಿರಿ-ಸಂಧಾನದಲ್ಲಿಯೂ ರಕ್ಷಿಸಿದ ಅಶ್ವವು ಇಡೀ ದಿವಸದ ಶ್ರಮದಿಂದ ಅತ್ಯಂತ ದಣಿದಿದ್ದಿತು; ಯಜಮಾನನಂತೆ ಅದೂ ಅನೇಕ ಗಾಯಗಳನ್ನು ಹೊಂದಿ ದುರ್ಬಲವಾಗುತ್ತ ನಡೆದಿದ್ದಿತು, ಅಣ್ಣ ತಮ್ಮಂದಿರು ಸಂತೋಷದಿಂದ ಮಾತಾಡುತ್ತಿರುವಾಗ, ಚೈತಕವು ಧರಾಶಾಯಿ ಯಾಗಿ ಪ್ರಾಣಬಿಟ್ಟಿತು. ಪ್ರತಾಪನು ಈ ಪ್ರಭುಭಕ್ತನಾದ ರಣತುರಂಗದ ಮೃತ್ಯು ವನ್ನು ನೋಡಿ, ಕಣ್ಣೀರು ತಡೆಯಲು ಸಮರ್ಧನಾಗಲಿಲ್ಲ. ಈಗಿರುವ ಜಾರೋ ಲದ ಬಳಿಯಲ್ಲಿ ಕುದುರೆಯು ಸತ್ತಿತು. ಈ ಸ್ಥಳದಲ್ಲಿ ಪ್ರತಾಪನ ಅಪ್ಪಣೆಯಂತೆ ಕುದುರೆಯ ಸ್ಮಾರಕಕ್ಕಾಗಿ ಒಂದು ದೊಡ್ಡ ವೇದಿಕೆಯು ನಿರ್ಮಿತವಾಗಿದೆ.* ಇದಕ್ಕೆ ಈಗ ಚೈತಕಕಾ ಚಾಬುತ್ರಾ' ಎಂದೆನ್ನುವರು. ಈಗಲೂ ಮೇವಾಡದ ಪ್ರತಿಮನೆಯಲ್ಲಿರುವ ಪ್ರತಾಪನ ಚಿತ್ರದೊಡನೆ, ಈ ಕುದುರೆಯ ಚಿತ್ರವನ್ನು ನೋಡಬಹುದಾಗಿದೆ. + Rajasthan Vol I P. 276 note ರಜಪೂತಸ್ತಾನದ ನಕಾಶದಲ್ಲಿ ಜಾ ಲೋರವು ಗೋಗುಂಡಾದಿಂದ ದಕ್ಷಿಣಕ್ಕೆ ಸುಮಾರು ೧೦.೧೫ ಮೈಲುಗಳ ಮೇಲಿದ್ದುದನ್ನು ನೋಡಬಹುದಾಗಿದೆ