ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮರಲೀಲಾ. ೧೧೩ vv vvv ಕಳುಹಿಸಿದ್ದನು; ಮತ್ತು ಆ ಪಟ್ಟಣವನ್ನು ಜನಶೂನ್ಯವಾಗಿ ಮಾಡಿಬಿಟ್ಟಿದ್ದನು. ಮೊಗಲರು ಕಮಲಮೀರ ದುರ್ಗವನ್ನು ಆಕ್ರಮಿಸಬಹುದೋ ಇಲ್ಲವೋ ಎಂಬ ದನ್ನು ಸ್ಪಷ್ಟವಾಗಿ ತಿಳಿಯಲಾರದವನಾದ್ದರಿಂದ, ಈ ದುರ್ಗದಲ್ಲಿ ತನ್ನ ಸೈನಿಕ ರನ್ನು ಕೂಡಿಹಾಕಲು ಪ್ರತಾಪನು ಮನಸು ಮಾಡಲಿಲ್ಲ; ಯಾಕಂದರೆ ಶತ್ರುಗಳು ಕಮಲಮೀರವನ್ನು ಮುತ್ತಿದ್ದಾದರೆ, ಒಳಗಿರುವ ಸೈನಿಕರು ಹೊರಗೆ ಬರುವದು ದುಸ್ತರವಾಗುತ್ತಿತ್ತು. ಅದರಿಂದ ಅವನು ಶತ್ರುಗಳಿಗೆ ತಿಳಿಯಲಾಗದ ಮತ್ತು ಏರಿಬ ರಲು ದುಸ್ಸಾಧ್ಯವಾದ ದಕ್ಷಿಣಭಾಗದಲ್ಲಿದ್ದು, ಮೊಗಲರ ಬರುವಿಕೆಯನ್ನು ನೋಡ ತೊಡಗಿದನು. ತಾನೆಲ್ಲಿರುವೆನು? ಏನುಮಾಡುತ್ತಿರುವೆನು? ಎಂಬದನ್ನು ಶತ್ರುಗ ಳಿಗೆ ಎಷ್ಟು ಮಾತ್ರವೂ ತಿಳಿಯಗೊಡಲಿಲ್ಲ. ಈ ಕಡೆಯಲ್ಲಿ ಮಾನಸಿಂಹನು ತನ್ನ ಸೈನಿಕರನ್ನು ಗೋಗುಂಡಕ್ಕೆ ಕರೆದು ಕೊಂಡು ಹೋಗಿ, ಮಹಾ ಸಂಕಟಕ್ಕೊಳಗಾದನು. ರಜಪೂತರು ಗೋಗುಂಡ ವನ್ನು ಬಿಟ್ಟು ಹೋಗುವ ಮೊದಲೇ, ಇದರ ನಾಲ್ಕೂ ಕಡೆಯಲ್ಲಿರುವ ಸ್ಥಳವನ್ನು ಲೋಕಶೂನ್ಯವನ್ನಾಗಿಯೂ, ಜನಶೂನ್ಯವನ್ನಾಗಿಯೂ ಮಾಡಿದ್ದರು. ಕಾರಣ ಅಸಂಖ್ಯ ಮೊಗಲ ಸೈನಿಕರಿಗೆ ಆಹಾರದ ಪದಾರ್ಥಗಳು ದೊರೆಯದಂತಾದವು. ದೂರದೂರದ ಪ್ರದೇಶಗಳಿಂದ ವರ್ತಕರು ಗುಂಪುಗುಂಪಾಗಿ ಬಂದು, ರಾಜ ಸ್ಥಾನದ ಮೇರೆಯಲ್ಲಿರುವ ಪ್ರದೇಶಗಳಲ್ಲಿ ಧಾನ್ಯವಿಕ್ರಯಮಾಡಿ ಹೋಗುತ್ತಿದ್ದರು; ಆದರೆ ಪ್ರಸ್ತುತದಲ್ಲಿ ನಡೆದ ಯುದ್ಧದಿಂದ ಆ ಮಾರ್ಗವು ಬಂದಾಯಿತು. ಅದ ರಿಂದ ಮೊಗಲಸೈನಿಕರು ಆಹಾರದ ಪದಾರ್ಥಗಳನ್ನು ಕಾಣದೆ ವಿಷಮ ವಿಪತ್ತಿ ಗೊಳಗಾದರು. ಕೆಲವರು ಬೇಟೆಯಲ್ಲಿ ದೊರೆತ ಮಾಂಸದಿಂದ ತಮ್ಮ ಜೀವನ ರಕ್ಷಣೆಯನ್ನು ಮಾಡಿಕೊಳ್ಳತೊಡಗಿದರು. ಈ ಸಮಯದಲ್ಲಿ ಆ ಪ್ರದೇಶದಲ್ಲಿ ಅಪರಿಮಿತ ಮಾವಿನ ಹಣ್ಣುಗಳಾಗಿರುವದು ಮೊಗಲರಿಗೆ ಅನುಕೂಲವಾಯಿತು. ಸೈನಿಕರು ಇವನ್ನು ಸಾಕಷ್ಟು ತಿಂದು, ಜೀವಿಸತೊಡಗಿದರು; ಆದರೆ ಅಲ್ಪ ಸಮ ಯದಲ್ಲಿ ಸೈನಿಕರು ಬೇನೆಬೀಳತೊಡಗಿದರು. ಇಂತಹ ಸಮಯದಲ್ಲಿ ಸುಲಿಗೆಯ

  • Elliot, the Races of the provinces of India' Vol I P. 52, Lowe II P. 250
  • ಈ ಸಮಯದಲ್ಲಿ ಹೇಳಲಿಕ್ಕೆ ಬರದಷ್ಟು ಮಾವಿನಹಣ್ಣುಗಳಾಗಿದ್ದವೆಂದು ಬದಾವುನಿಯು ಹೇಳಿದ್ದಾನೆ. ಮಾವಿನಹಣ್ಣಿನ ಆಕಾರವಾದರೂ ದೊಡ್ಡದಾಗಿತ್ತು; ಇವುಗಳಲ್ಲಿ ಒಂದೊಂದು

ಹಣ್ಣಿನ ತೂಕವು, ಅಕಬರೀ ಸೇರಿನ ಒ೦ದು ಸೇರಿನವರೆಗೆ ಇತ್ತು, Badaon1 II. 241.