ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇವಾಡದ ಮುತ್ತಿಗೆ

ಕಾರಣ ಇವರು ಗುಡ್ಡು ಗಾಡು ಪ್ರದೇಶದಲ್ಲಿರಲಾರದೆ, ದೂರದಲ್ಲಿರುವ ಸಮನೆಲ ದಲ್ಲಿ ಹೋಗಿ ವಾಸಮಾಡತೊಡಗಿದರು. ಈ ಸಮಯದಲ್ಲಿ ಪ್ರತಾಪಸಿಂಹನು ಸಸೈನ್ಯನಾಗಿ ಬಂದು, ಉದಯಪುರದ ಅಂಚಿಗಿರುವ ಪ್ರದೇಶವನ್ನು ಹಸ್ತಗತ ಮಾಡಿಕೊಂಡನು. ನಾಲ್ಕೂ ಕಡೆಯಲ್ಲಿ ಮತ್ತೆ ರಜಪೂತರ ವಿಜಯ-ಶಂಖವು ಬಾರಿಸತೊಡಗಿತು; ಮೇವಾಡದ ಕ್ರೀಡಾ-ಭೂಮಿಯಲ್ಲಿ ಇವರ ಸಮರಲೀಲೆಯು ನಡೆಯಿತು; ರಜಪೂತರು ಸ್ವಚ್ಛಂದದಿಂದ ಬೇರೆ ಬೇರೆ ಕಡೆಯಲ್ಲಿ ಹೋಗಿ ಧನ ವನ್ನೂ, ಆಹಾರದ ಪದಾರ್ಥಗಳನ್ನೂ ಕೂಡಿಸತೊಡಗಿದರು. ಮಳೆಗಾಲವು ತೀರಿದ ಕೂಡಲೇ ಪುನಃ ಮೊಗಲರು ಯುದ್ಧಕ್ಕೆ ಬರುವರೆಂಬದನ್ನು ಅವರು ತಿಳಿ ದಿದ್ದರು; ಕಾರಣ ರಜಪೂತರು ಯುದ್ಧದ ಸಿದ್ಧತೆಯನ್ನು ತೀವ್ರ ಮಾಡತೊಡಗಿ ದರು. ಮಹಾರಾಣಾನ ಅಪ್ಪಣೆಯಂತೆ ಚಾರಣರು ದೂರದೂರದಲ್ಲಿರುವ ಹಳ್ಳಿಗೆ ಹೋಗಿ, ಜನರನ್ನು ಯುದ್ಧೋತ್ಸಾಹಿಗಳನ್ನು ಮಾಡತೊಡಗಿದರು. ಮೇವಾಡದ ಸೀಮೆಯ ಹೊರಗಿರುವ ಬೇರೆ ರಜಪೂತ ಸಾಮಂತರಿಗೆ ಧರ್ಮಯುದ್ದದಲ್ಲಿ ಕೂಡುವದಕ್ಕೆ ಆಮಂತ್ರಣವು ಕೊಡಲ್ಪಟ್ಟಿತು ಕೋಟಾ, ಬುಂದಿ, ಡೊಂಗಾರ ಪುರ, ಈದರ, ಸಿರೋಹಿ, ಝಾಲೋರ ಮೊದಲಾದ ಯಾವತ್ತೂ ಸಂಸ್ಥಾನಗಳ ಅರಸರಿಗೆ ಯುದ್ಧಕ್ಕೆ ಬರಬೇಕೆಂದು ಪ್ರತಾಪನು ಹೇಳಿಕಳುಹಿಸಿದನು. ಆರಂಭ ವಾದ ಈ ಸಮರಲೀಲೆಯು ಎಲ್ಲಿ ಮತ್ತು ಎಂದು ಮುಗಿಯುವದೆಂಬದನ್ನು ಯಾರೂ ತಿಳಿಯಲಾರದವರಾಗಿದ್ದರು. ಪಂಚದಶ ಪರಿಚ್ಛೇದ. ಇಜ್ಜ ಮೇವಾಡದ ಮುತ್ತಿಗೆ, ಬಾದಶಹ ಪಣವಗೈದಂ | ಪದಕರಗುವ ತರದಿ ಮಾಡದಲೆ ಬಿಡನೆಂದುಂ | ಗೈದಂ ಪ್ರತಾಪ ಪಣವಂ | ಬಾದಶ ಹಗೆ ಶರಣುಹೋಗೆನೆಂದುಂ ನಿಜದಿಂ || ೧ || ಮಳೆಗಾಲವು ಮುಗಿಯಿತು. ಮೊಗಲರು ಅಶ್ವಿನಮಾಸದ ಪ್ರಾರಂಭದಿಂದ ಯುದ್ಧದ ಸಿದ್ಧತೆಯನ್ನು ಮಾಡತೊಡಗಿದರು. ಈ ಸಮಯದಲ್ಲಿ ಅಜಮಿರದಲ್ಲಿ ರುವ ಬಾದಶಹನಿಗೆ, ಝಾಲೋರದ ಪರಾಣ ಸರದಾರನಾದ ತಾಜಖಾನನೂ, Badaoni ( Lowe ) II P, 247.