ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಮಹಾರಾಣಾ ಪ್ರತಾಪಸಿಂಹ, MvvvvvvvvvvvvvvM ಸುವದಕ್ಕಾಗಿಯೂ ಸಸೈನ್ಯವಾಗಿ ವಾಸಮಾಡತೊಡಗಿದನು. ಈ ಮೇರೆಗೆ ಮೇವಾಡದ ಪಶ್ಚಿಮದಿಕ್ಕಿನಲ್ಲಿ ಮುತ್ತಿಗೆಯನ್ನು ಹಾಕೋಣವಾಯಿತು. ಈ ಕಡೆಯಲ್ಲಿ ಅಕಬರನು ಸ್ವತಃ ಮಹಾಡಂಬರದಿಂದ ಮೇವಾಡಕ್ಕೆ ಹೊರಟನು. ಅಶ್ವಿನಮಾಸದ ಕಡೆಯ ಭಾಗದಲ್ಲಿ (೧೧ನೇ ಅಕ್ಟೋಬರ ೧೫೭೬ ) ಇವನು ಅಜಮೀರವನ್ನು ಬಿಟ್ಟು ನಡೆದನು ಈ ಸಮಯದಲ್ಲಿ ಬಹು ಸಂಖ್ಯಾಕ ರಾದ ಮುಸಲ್ಮಾನರು ಮಕ್ಕಾಯಾತ್ರೆಗೆ ಹೋಗಬೇಕೆಂದು ಇಚ್ಚಿಸಿ, ಅಕಬರನಿಗೆ ವಿನಂತಿಯನ್ನು ಮಾಡಿಕೊಂಡರು ಯಾತ್ರಿಗಳು ರಜಪೂತಸ್ತಾನದಲ್ಲಿ ಹಾಯ್ದು, ನೆಲಮಾರ್ಗವಾಗಿ ಸುರತಕ್ಕೆ ಹೋಗಿ, ತರುವಾಯ ಹಡಗವನ್ನೆರಬೇಕಾಗುತ್ತಿ ದ್ದಿತು. ಆದರೆ ರಜಪೂತರ ಯುದ್ಧದ ದೆಸೆಯಿಂದ ಮೇವಾಡದ ಈ ಮಾರ್ಗವು ಬಂದಾಗಿತ್ತು. ಬಾದಶಹನು ಉಪಯುಕ್ತವಾದ ಯಾನವಾಹನಗಳ ವ್ಯವಸ್ಥೆ ಯನ್ನೂ, ರಕ್ಷಕರ ವ್ಯವಸ್ಥೆಯನ್ನೂ ಮಾಡದಿದ್ದಲ್ಲಿ, ಯಾತ್ರಿಕರು ಗುಜರಾಧವನ್ನು ಮುಟ್ಟುವಂತಿರಲಿಲ್ಲ. ಇದಕ್ಕಾಗಿಯೇ ಅವರು ಅಕಬರನನ್ನು ಪ್ರಾರ್ಥಿಸಿಕೊಂಡಿ ದ್ದರು. ಬಾದಶಹನು ಈ ವೇಳೆಯಲ್ಲಿ ಮಹಾರಾಣಾನಿಗೆ ತೊಂದರೆಯನ್ನು ಂಟು ಮಾಡುವದಕ್ಕಾಗಿ ಗೋಗುಂಡ ಮತ್ತು ಇದರ ಪಟ್ಟಣಗಳಿಗೆ ಎರಡು ದಳ ದಂಡ ನ್ನು ಕಳಿಸುವ ಸಿದ್ದತೆಮಾಡಿದ್ದನು. ಯಾತ್ರಿಕರನ್ನು ರಕ್ಷಿಸುವ ಭಾರವು ಇವರ ಮೇಲೆ ಹೊರಿಸಲ್ಪಟ್ಟಿತು. ತಾನು ಧರ್ಮಕಾರ್ಯದ ಸಹಾಯಕನಾಗಿ ವೀರವೇಷ ದಿಂದ ಈ ಯಾತ್ರಿಗಳನ್ನು ಹಿಂಬಾಲಿಸಿದನು ಈ ಪ್ರಸಂಗದಲ್ಲಿ ಅಕಬರನು ಸ್ವತಃ ಮೇವಾಡಕ್ಕೆ ದಂಡೆತ್ತಿ ಹೋದ ದೇಕೆ? ಎಂಬ ಪ್ರಶ್ನೆಯು ಹುಟ್ಟುವದು ಅಕಬರನು ತಾನು ಇದರ ಪ್ರದೇಶದಲ್ಲಿ ಬೇಟೆಯಾಡುವದಕ್ಕೆ ಹೋಗುತ್ತೇನೆಂದು ಹೇಳಿ ಹೊರಬಿದ್ದನು; ಆದರೆ ಇದು t Blochmann, PP 357-8; A N III P 274 ಮೊಗಲರು ಶಿರೋಹಿ ಯನ್ನು ಸಹಜವಾಗಿ ವಶಮಾಡಿಕೊಳ್ಳಲು ಸಮರ್ಥರಾಗಲಿಲ್ಲ, ದೇವರಾರಾಯನ ಪಕ್ಷದ ರಜಪೂ ತರು ವೀರನಾದ ರಾಯಮಲ್ಲನ ಆಧೀನತ್ವದಲ್ಲಿದ್ದು, ಭೀಷಣ ಯುದ್ಧ ಮಾಡಿದರು ಅಬುಲಫಜ ಲನು ಇವರ ವೀರತ್ವವನ್ನು ಹೊಗಳಿದ್ದಾನೆ £ ಅಕಬರನು ಸುಲತಾನಖಾನನ್ನು ಊರ ಹಾಜಿ ಅಥವಾ ತೀರ್ಥ ಯಾತ್ರಿಕರ ದಲಪತಿಯ ನ್ನಾಗಿ ಮಾಡಿದ್ದನು ಈ ಸಮಯದಲ್ಲಿ ಹಿಂದುಸ್ತಾನದಲ್ಲಿ ಯು ಅನೇಕ ಸ್ಥಳಗಳಿಂದ ಬಹು ಜನ ಯಾತ್ರಿಕರು ಮಕ್ಕಾ ಯಾತ್ರೆಗೆ ಹೊರಟಿದ್ದರುಇವರಲ್ಲಿ ಬಾದಶಹನ ಪರಿವಾರದಲ್ಲಿಯ ಕೆಲವು ಜನ ಹೆಣ್ಣು ಮಕ್ಕಳೂ ಇದ್ದರು,