ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಮಹಾರಾಣಾ ಪ್ರತಾಪಸಿಂಹ ಮಾಡಲು ಮನಸು ಮಾಡಿದನು; ಅದರಂತೆ ಬಿನ್ನಹಮಾಡಿಕೊಂಡನು. ಬಾದಶಹನು ಕೃಪೆಯಿಟ್ಟು ತನ್ನ ಸೇವಕರಾದ ರಾಜಾಬೀರಬಲನನ್ನೂ, ರಾಯಲಂಬಕರ್ಣನನ್ನೂ ಕನ್ನೆಯನ್ನು ತರುವದಕ್ಕಾಗಿ ಕಳುಹಿಸಿದನು. ಇವರು ಬಾದಶಹನ ಹೇಳಿಕೆಯಂತೆ, ತಮ್ಮ ಕರ್ತವ್ಯವನ್ನು ಮಾಡಿ, ಸಾಕಷ್ಟು ಬಹುಮಾನವನ್ನು ಹೊಂದಿದರು... ಈ ಯಾವತ್ತು ಸೀಮಾಂತದಲ್ಲಿರುವ ರಾವಳರು ಏನೇ ಮಾಡಲಿ, ಮಹಾ ರಾಣಾನು ಇದರಿಂದ ತುಸು ಮಾತ್ರವೂ ವಿಚಲಿತನಾಗಲಿಲ್ಲ. ದಕ್ಷಿಣ ದಿಕ್ಕಿನಲ್ಲಿರುವ ಈದರ, ವಂಶವಾರ ಮೊದಲಾದ ಸ್ಥಳಗಳಲ್ಲಿಯೂ ಮೊಗಲರ ಸೈನ್ಯವು ಸಮಾವೇಶ ವಾಗಿತ್ತು; ಬಾದಶಹನು ತಾನೇ 'ಸಸೈನ್ಯನಾಗಿ ಈ ಸ್ಥಳದಲ್ಲಿದ್ದನು. ಅಕಬರನು ರಾಜಧಾನಿಯ ಯಾವತ್ತು ಸಂಗತಿಗಳನ್ನು ಮರೆತು, ಕೇವಲವಾಗಿ ಕ್ಷುದ್ರ ಪ್ರತಾಪ ನಿಗೆ ತೊಂದರೆ ಕೊಡುವದರಲ್ಲಿ ವ್ಯಗ್ರನಾಗಿ ಹೋಗಿದ್ದನು. ಮೇವಾಡವು ನಾಲ್ಕೂ ದಿಕ್ಕುಗಳಲ್ಲಿ ಮುತ್ತಲ್ಪಟ್ಟಿತ್ತು; ಸಾಗರ-ತರಂಗಗಳಂತೆ ಗುಂಪು ಗುಂಪಾಗಿ ಮೊಗಲ ಸೈನಿಕರು ಮೇವಾಡವನ್ನು ಪ್ರವೇಶಿಸುತ್ತಿದ್ದರು; ಆದರೆ ಪ್ರತಾಪನು ಎಷ್ಟು ಮಾತ್ರವೂ ಹೆದರಲಿಲ್ಲ; ಈ ಕಡೆಗೆ ಅವನ ಲಕ್ಷವೇ ಇರಲಿಲ್ಲ. ಮಾನಸಿಂಹ ನಂತಹ ತೀಕ್ಷದೃಷ್ಟಿಯ ಸೇನಾಪತಿಯ ಕುಟಿಲಕೌಶಲ್ಯವು ಪ್ರತಾಪನ ನಾಶ ಕ್ಕಾಗಿ ಉಪಯೋಗವಾಗುತಲಿತ್ತು; ಮಾನಸಿಂಹನ ಸೈನಿಕರು ಗುಡ್ಡಗಾಡು ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಪ್ರತಾಪನನ್ನು ಹುಡುಕುತಲಿದ್ದರು, ಆದರೆ ರಜಪೂತ ರೊಡನೆ ಇವರ ಸಾಕ್ಷಾದ್ದರ್ಶನವಾಗಲಿಲ್ಲ; ಆದರೂ ಒಮ್ಮೊಮ್ಮೆ ರಜಪೂತ-ಅಶ್ವಾ ರೋಹಿಗಳು ಅಕಸ್ಮಾತ್ತಾಗಿ ಮೊಗಲ ಸೈನಿಕರ ಮೇಲೆ ಬೀಳುತ್ತಿದ್ದರು, ಮೊಗೆ. ಲರು ಯುದ್ಧಕ್ಕೆ ಸಿದ್ದರಾಗಿ ಮುಂದುವರಿಯುವಷ್ಟರಲ್ಲಿಯೇ, ಅವರು ಪುನಃ ಅಡಗಿ ಹೋಗುತ್ತಿದ್ದರು; ಅವರೆಲ್ಲಿ ಹೋದರೆಂಬದನ್ನು ಮೊಗಲರಿಗೆ ಗೊತ್ತು ಹಚ್ಚುವದಕ್ಕಾಗುತ್ತಿರಲಿಲ್ಲ. ಈ ಮೇರೆಗೆ ರಜಪೂತರು ಯಾವಾಗಲಾದರೊಮ್ಮೆ ಅಕಸ್ಮಾತ್ತಾಗಿ ಮೊಗಲರ ಮೇಲೆ ಬಿದ್ದು, ಬಹಳ ಹಾನಿಯನ್ನುಂಟುಮಾಡುತ್ತಿದ್ದರು. ಎರಡು ಮೂರು ದಿವಸಗಳವರೆಗೆ ರಜಪೂತರು ಕಾಣಿಸದಂತಾದ ಕೂಡಲೇ, ಮೊಗಲರು ತಮ್ಮ ಹೆದರಿಕೆಯಿಂದ ಅವರು ಓಡಿಹೋದರೆಂದು ಭಾವಿಸುತ್ತಿದ್ದರು; - ... A. N. III P. 278 ಮಹಾರಾವಳನ ಕನ್ಯಾದಾನದ ಸಂಗತಿಯು ಬೇರೆ ಕಡೆ ಯಲ್ಲಿಲ್ಲ Raj, Gezetteer, Vol I, P. 275, Malleson, * Native states.” P, 128,