ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಮಹಾರಾಣಾ ಪ್ರತಾಪಸಿಂಹ, M / +++ MMMMMMMM ಇವನು ಬೇರೆ ಬೇರೆ ಸ್ಥಳಗಳಲ್ಲಿ ಮೊಗಲರ ಮೇಲೆ ಬಿದ್ದು, ಅವರನ್ನು ಗೋಳಾ ಡಿಸಿಬಿಟ್ಟನು. ಅಕಬರನು ವಂಶವಾರದ ಮೇರೆಯಲ್ಲಿರುವ ರಾವಳರು ಆಧೀನತ್ವವನ್ನೊಪ್ಪಿ ಕೊಂಡದ್ದರಿಂದ ಅನಂದಿತನಾದನು. ಇವನು ಇನ್ನು ತನ್ನ ಕರ್ತವ್ಯವು ಮುಗಿ ಯಿತೆಂದು ಭಾವಿಸಿದನು; ಯಾಕಂದರೆ ಇವನು ನಾಲ್ಕೂ ದಿಕ್ಕಿನಿಂದ ಮೇವಾಡ ವನ್ನು ಮುತ್ತುವ ವ್ಯವಸ್ಥೆಯನ್ನು ಮಾಡಿಸಿದ್ದನು; ಇದರಿಂದ ಪ್ರತಾಪಸಿಂಹನು ಪಾರಾಗುವಂತಿರಲಿಲ್ಲ; ಕಾರಣ ಪ್ರತಾಪನು ಅನನ್ನೊಪಾಯನಾಗಿ ತನ್ನ ಕೈಯಲ್ಲಿ ಸಿಗುವನೆಂದು ಬಾದಶಹನ ಮನವರಿಕೆಯಾಯಿತು; ಅದರಿಂದ ಬಾದಶಹನು ಮರಳಿ ರಾಜಧಾನಿಗೆ ಹೋಗುವ ಮನಸುಮಾಡಿದನು. ಅವನು ಮಾಳವದೊಳ ಗಿರುವ ದೀಪಾಲಪುರದಲ್ಲಿರುವಾಗ, ಈದರದಲ್ಲೆದ್ದ ಬಂಡಾಯದ ಸುದ್ದಿಯನ್ನು ಕೇಳಿದನು. ಈ ಸಮಯದಲ್ಲಿ ಅಕಬರನು ಹೊಸವರ್ಷದ ಆನಂದೋತ್ಸವದ ಸಿದ್ದತೆಯನ್ನು ಮಾಡುತ್ತಲಿದ್ದನು. ಈ ನೂತನ ಉತ್ಪಾತದ ಸುದ್ದಿಯನ್ನು ಕೇಳಿ, ಶಾಂತಿಶೂನ್ಯನಾಗಿ ಹೋದನು. ರಾವಳನಾರಾಯಣನು ಪ್ರತಾಪಸಿಂಹ ಮತ್ತು ಅನೇಕ ಜಮೀನದಾರರ ಸಹಾಯದಿಂದ ಅಸಮನಾಹಸಿಕರಾದ ಸೈನಿಕರನ್ನು ಕೂಡಿಸಿಕೊಂಡು, ಇದರ ದಿಂದ ಹತ್ತು ಕ್ರೋಶ ದೂರದಲ್ಲಿ ಬಂದಿಳಿದನು ರಾತ್ರಿಯ ಸಮಯದಲ್ಲಿ ಶತ್ರು. ಸೇನೆಯ ಮೇಲೆ ಬೀಳುವದು ಇವನ ಉದ್ದೇಶವಾಗಿದ್ದಿತು; ಆದರೆ ಅಸಸಖಾನನು ಮೊದಲೇ ಈ ಸುದ್ದಿಯನ್ನು ತಿಳಿದು, ಬಹು ಎಚ್ಚರಿಕೆಯಿಂದಿದ್ದನು. ಅಸಫಖಾನನು ಈದರದ ರಕ್ಷಣೆಗಾಗಿ ಶೇರಖಾನನ ಆಧೀನದಲ್ಲಿ ಐದುನೂರು ಸೈನಿಕರನ್ನಿರಿಸಿ, ರಾವಳನು ತಮ್ಮನ್ನು ಮುತ್ತುವ ಪೂರ್ವದಲ್ಲಿಯೇ, ರಾತ್ರಿಯ ಕಾಲದಲ್ಲಿ ಅವನ

  • ಇದು ಆಕ ಬರನ ರಾಜತ್ವದ ಇಪ್ಪತ್ತೆರಡನೆಯ ವರ್ಷವು, ದೀಪಾಲಪುರದಲ್ಲಿ ಸನ್ ೧೫೭೬ ರ ಮಾರ್ಚ ೧೧ನೇ ತಾರೀಖಿನ ದಿವಸ ಹೊಸವರ್ಷದ ಉತ್ಸವವಾಯಿತು

† “ The Raja of Idar had with the assistance of Rana Kika aud other Zamındars collected an army and advanced to With1 10 CO588 of the Station of Idar, Intends to make a night attack ' Badaoni ( ove ) II P. 251. ಮುಸಲ್ಮಾನರು ಪ್ರತಾಪನಿಗೆ ರಾಣಾ ಕೇಕಾ ಅನ್ನುತ್ತಿದ್ದರೆಂದು ಹಿಂದೆ ಹೇಳಿದ್ದೇವೆ