ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಮೀರದುರ್ಗ ೧೨ M ಈ ಗುಡ್ಡದ ಮಾರ್ಗದಿಂದ ಪಶ್ಚಿಮಕ್ಕೆ ಹಾಗೇ ಮುಂದಕ್ಕೆ ಸಾಗಿದರೆ, ವೃಕ್ಷಶೋ ಭಾಮಯವಾದುದೊಂದು ವಿಸ್ತೀರ್ಣವಾದ ಎತ್ತರ ಪ್ರದೇಶಕ್ಕೆ ಹೋಗುವೆವು; ಇದರ ನಾಲ್ಕೂ ಕಡೆಯಲ್ಲಿ ಪರ್ವತಮೊಲೆಗಳು ಗೋಡೆಗಳಂತೆ ಸುತ್ತುಗಟ್ಟಿವೆ. ಈ ಎತ್ತರ ಸ್ಥಳವು ಒಂದು ಸುಂದರವಾದ ಪಟ್ಟಣವಾಗಿದ್ದು, ಇದಕ್ಕೆ ಕೈಲಬಾರ ವೆಂಬ ಹೆಸರಿದೆ. ಮಹಾವೀರ ಹಂಬೀರನು ಒಂದು ಕಾಲದಲ್ಲಿ ಈ ಸ್ಥಳದಲ್ಲಿ ವಾಸ ಮಾಡುತ್ತಿದ್ದನು. ಮಹಾಶೂರನಾದ ಪುತ್ರನು ಈ ಕೈಲಬಾರದ ನಿವಾಸಿಯು, ಈ ಉಭಯರ ಸಂಪರ್ಕದಿಂದ ಗೌರವಿತವಾದ ಈ ನಗರವು ಪವಿತ್ರವಾಗಿದೆ. ಇದರಿಂದ ವೀರತ್ವವು ಪರ್ವತಪ್ರದೇಶದಲ್ಲಿ ಪ್ರಕಟವಾಗಲು ಹೆಚ್ಚಾಗಿ ಇಚ್ಚಿಸುವದೆಂದು ತಿಳಿದುಬರುವದು. ಕೈಲಬಾರದಿಂದ ನಾಧದ್ವಾರದ ಮಾರ್ಗವು ಪಶ್ಚಿಮಕ್ಕೆ ನಡೆದು, ಹಾತಿ ಗಡಾನಾಲದಲ್ಲಿ ಕೂಡಿ, ಮುಂದೆ ಮರುಭೂಮಿಗೆ ಹೋಗಿದೆ. ಈ ಮಾರ್ಗದ ಈಗಿನ ಹೆಸರು ಗಣೇರುವರ್ತ್, ಕೈಲಬಾರದಿಂದ ಮತ್ತೊಂದು ಮಾರ್ಗವು ದಕ್ಷಿ ಣಾಭಿಮುಖವಾಗಿ ಹೊರಟು, ಗಹನವಾದ ಪ್ರದೇಶದಲ್ಲಿ ಹಾಯ್ದು ಹೋಗಿದೆ. ಈ ಮಾರ್ಗದ ಒಂದು ಶಾಖೆಯು ಗೋಗುಂಡ ಮತ್ತು ಉದಯಪುರ ಪಟ್ಟಣ ಗಳಿಗೆ ಹೋಗಿದೆ. ಉದಯಪುರದ ಎತ್ತರವು ಸಮುದ್ರಸಪಾಟಿಯಿಂದ ಸುಮಾರು ೨೦೦೦ ಸೂಟ; ಇದಕ್ಕಿಂತಲೂ ಗೋಗುಂಡವು ಎತ್ತರ ಸ್ಥಳದಲ್ಲಿದೆ; ಇದು ಸುಮಾರು ೨೭೫೦ ಸೂಟು ಎತ್ತರದಲ್ಲಿದೆ. ಕೈಲಬಾರದ ಎತ್ತರವು ಸುಮಾರು ೩ ಸಾವಿರ ಸೂಟ, ಇದಕ್ಕಿಂತ ಎತ್ತರದಲ್ಲಿರುವ ಕಮಲಮೀರವು ಸಮುದ್ರ ಸಪಾಟ ಯಿಂದ ಸುಮಾರು ೩೩೫೩ ಫಟ ಎತ್ತರದಲ್ಲಿದೆ. ಕಮಲಮೀರದ ಎಲ್ಲಕ್ಕೂ ಎತ್ತ ರವಾದ ಸ್ಥಳದಲ್ಲಿ ಮಹಾರಾಣಾನ ಅರಮನೆಯದೆ; ಇದರ ಹೆಸರು : ಬಾದಲ ಮಹಲ ?" ಪ್ರಾಚೀನಕಾಲದಲ್ಲಿ ಕೈಲಬಾರದಿಂದ ಪರ್ವತದ ಝರಿಗಳ ಅಧಿಕಾಂಶ ನೀರು ಪೂರ್ವಾಭಿಮುಖವಾಗಿ ಹೋಗಿ, ಬನಾಸನದಿಗೆ ಕೂಡುತ್ತಿತ್ತು; ಇದರ 1 ಹಂಬೀರನು ತನ್ನ ಹೆಸರಿನಿಂದ cc ಹಂಬೀರ ತಲಾವ ?” ಎಂಬ ಕರೆಯನ್ನೂ, ಇದರ ಸಮೀಪದಲ್ಲಿ ದೇವಿಯ ಗುಡಿಯನ್ನೂ ಕಟ್ಟಿಸಿದ್ದಾನೆ. ಇವು ಈಗಲೂ ಅವೆ, Rajasthan, Vol. 1 P. 224,