ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಮೊರದುರ್ಗ ೧೩೩ ದರೊಂದು ಅತ್ಯಾಚಾರ ಮಾಡಿದಲ್ಲಿ ಇವರು ಇದಕ್ಕೆ ಪ್ರತಿಬಂಧ ಮಾಡತಕ್ಕವರು. ಇಂತಹ ಸ್ಥಿತಿಯಲ್ಲಿ ಇವರು ಇರದಿರುವದು ಯೋಗ್ಯವು. ಕಾರಣ ಇವನು ಈ ಸೇನಾಪತಿಗಳಿಗೆ ಬಾಡಶಹನ ದರಬಾರಕ್ಕೆ ತಿರುಗಿ ಹೋಗುವದಕ್ಕೆ ಹೇಳಿದನು. ಭಗವಾನದಾಸ ಮತ್ತು ಮಾನಸಿಂಹರಿಗಾದರೂ ಇದೇ ಬೇಕಾಗಿತ್ತು; ಯಾಕಂದರೆ ಮಹಾರಾಣಾನಿಗೆ ಕಷ್ಟವಾಗುವಂಧ ಇಲ್ಲವೆ ಸ್ವಜಾತಿಯ ಸರ್ವನಾಶವಾಗು ವಂಧ ವ್ಯವಹಾರದಲ್ಲಿ ಸೇರುವದು ಇವರಿಗೆ ಇಷ್ಟವಾಗಿರಲಿಲ್ಲ; ಕೇವಲ ಬಾದ ಶಹನ ಪ್ರೀತಿಸಂಪಾದನೆಗಾಗಿ ಇವರು ಈ ಕೆಲಸಕ್ಕೆ ಬಂದಿದ್ದರು. ರಾಜಾಭಗವಾನದಾಸನೂ, ಮಾನಸಿಂಹನೂ ತಿರುಗಿ ಹೋದರು. ಶಹ ಬಾಜಖಾನನು ತೀವ್ರವೇ ಬಂದು, ಕೈಲಬಾರ ಪಟ್ಟಣವನ್ನು ಕೈವಶಮಾಡಿ ಕೊಂಡು ಕುಳಿತನು. ಮೊಗಲರು ಬರುವದಕ್ಕಿಂತ ಮೊದಲೇ ಕೈಲಬಾರವು ಜನ ಶೂನ್ಯವಾಗಿದ್ದಿತು. ಅದರಿಂದ ಈ ಪಟ್ಟಣವು ಸಹಜವಾಗಿ ಶತ್ರುಗಳ ವಶವಾ ಯಿತು. ಕೈಲಬಾರದ ಪ್ರಜೆಗಳು ಪ್ರತಾಪನ ಸೈನ್ಯದಲ್ಲಿ ಕೂಡಿ, ಕಮಲಮಿರದಲ್ಲಿ ಆಶ್ರಯ ಹೊಂದಿ, ಹನುಮಾನ್ ಮೂಲದ ಬಾಗಿಲವನ್ನು ಬಂದುಮಾಡಿಕೊಂಡು ಕುಳಿತರು. ಶಹಬಾಜಖಾನನು ಇದೇ ಮಾರ್ಗವಾಗಿ ಕೋಟೆಯನ್ನೇರುವ ಪ್ರಯ ತ್ವ ವನ್ನು ಮಾಡತೊಡಗಿದನು. ಕೋಟೆಯೊಳಗಿಂದ ಹೊಡೆದ ಗುಂಡುಗಳಿಂದ ಇವನ ಪ್ರಯತ್ನವು ವ್ಯರ್ಥವಾಗತೊಡಗಿತು; ಆದರೆ ಕೀರ್ತಿಯನ್ನು ಇಚ್ಚಿಸುವ ಮೊಗಲ ಸೇನಾಪತಿಯು ನಿರಾಶನಾಗಲಿಲ್ಲ, ಕೋಟೆಯನ್ನು ಮುತ್ತಿಕೊಂಡು ಕುಳಿತನು. ಪ್ರತಾಪಸಿಂಹನು ಕೆಲವು ದಿವಸಗಳ ವರೆಗೆ ವೀರವಿಕ್ರಮದಿಂದ ಕಾದಿ, ಆತ್ಮರಕ್ಷಣೆಯನ್ನು ಮಾಡಿಕೊಂಡನು, ಆದರೆ ಭಾಗ್ಯವು ಇವನಿಗೆ ಪ್ರಸನ್ನವಾಗಿರ ಲಿಲ್ಲ. ಕಾರಣ ಕೋಟೆಯಲ್ಲಿ ಕೆಲವು ದುರ್ಘಟನೆಗಳು ನಡೆದು, ಇವನನ್ನು ವಿಪತ್ತಿಗೀಡುಮಾಡಿದವು. ಒಂದು ದಿನ ಒಂದು ದೊಡ್ಡ ತೋಸು ಒಡೆದು, ಬೆಂಕಿಯು ಎಲ್ಲ ಕಡೆಯಲ್ಲಿಯೂ ಹಬ್ಬಿತು. ಇದರಿಂದ ಮದ್ದೆಲ್ಲವೂ ನಿರರ್ಧಕ ವಾಗಿ ಸುಟ್ಟು ಹೋಯಿತು. ಕೋಟೆಯೊಳಗಿರುವ ಸೈನಿಕರಿಗೆ ನೀರು ದೊರೆಯ ದಂತಾಯಿತು. ಎತ್ತರವಾದ ಸ್ಥಳದಲ್ಲಿರುವ ಪಟ್ಟಣಗಳಲ್ಲಿ ನೀರಿನ ಕಷ್ಟವಿರು