ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೃಥ್ವಿರಾಜನ ಪತ್ರ ೧೪೩ chhhhhhhhhhhhhhhhhhhhhhhhhhhhh ahhh / NAA AAAAAAA 1 1 ೧ ೧೧೧ \ ತೂಗಾಡುತ್ತ ವಾಸಮಾಡಿದ ಜಹುರಾ ಮತ್ತು ಚಾಂದಾ ನಗರಗಳ ಸಮೀಪದಲ್ಲಿ ರುವ ದೊಡ್ಡ ವೃಕ್ಷಗಳನ್ನು ಪ್ರವಾಸಿಗರು ಈಗಲೂ ನೋಡಬಹುದಾಗಿದೆ. ಟಾಡ್ ಸಾಹೇಬರು ಇವನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ. ಈ ಸ್ಥಳದಲ್ಲಿಯ ಗಿಡಗಳಲ್ಲಿ ಈಗಲೂ ಕಬ್ಬಿಣದ ಬಳಿ, ಸರಪಳಿ ಮೊದಲಾದವುಗಳಿವೆ. ಮನುಷ್ಯನು ಎಲ್ಲವನ್ನೂ ಸಹಿಸಬಹುದಾಗಿದೆ; ಆದರೆ ಹಸಿವೆಯಿಂದ ಬಳ ಳುತ್ತಿರುವ ಮುದ್ದು ಮಕ್ಕಳಿಗೆ ಆಹಾರವಿಲ್ಲದಿರುವದನ್ನು ನೋಡಿ, ಎಷ್ಟು ಮಾತ್ರವೂ ಸಹಿಸಲಾರನು. ಅದರಲ್ಲಿಯೂ ರಾಜೋಪಭೋಗವನ್ನು ಹೊಂದಲು ಯೋಗ್ಯ ರಾದವರು, ಒಂದು ತುತ್ತು ಅನ್ನಕ್ಕಾಗಿ ಕಷ್ಟ ಬಡುತ್ತಿರುವದು ಅತಿ ಕಠೋರವೂ, ಹೃದಯದ್ರಾವಕವೂ ಆದ ಸಂಗತಿಯಾಗಿದೆ ಪ್ರತಾಪನ ಕುಮಾರ-ಕುಮಾರಿ ಯರು ಎಷ್ಟೋ ಸಮಯದಲ್ಲಿ ಕೇವಲ ಅಡವಿಯಲ್ಲಿರುವ ಹಣ್ಣು ಹಂಪಲಗಳನ್ನು ತಿಂದು, ತಮ್ಮ ಹಸಿವೆಯ ಶಾಂತಿಯನ್ನು ಮಾಡಿಕೊಳ್ಳಬೇಕಾಗುತ್ತಿದ್ದಿತು. ಪ್ರತಾಪನ ಪ್ರಿಯತಮಳಾದ ಭಾರ್ಯೆಯು ಎಷ್ಟೋ ಸಮಯದಲ್ಲಿ ಬೈಲುಪ್ರದೇಶ ದಲ್ಲಿ ಅರಕ್ಷಿತಳಾಗಿರಬೇಕಾಗುತ್ತಿದ್ದಿತು, ಮತ್ತು ಯವನರ ಕೈಯಿಂದ ಹೇಗೆ ವಾರಾನೆಂಬ ಚಿಂತೆಯನ್ನು ವಹಿಸಬೇಕಾಗುತ್ತಿದ್ದಿತು. ಕೆಲವು ಪ್ರಸಂಗಗಳಲ್ಲಿ ಅಡಿಗೆಯು ಸಿದ್ದವಾಗಿರುತ್ತಿತ್ತು; ಅಷ್ಟರಲ್ಲಿ ಯವನರು ಬಂದ ಸುದ್ದಿಯು ತಿಳಿ ಯುತ್ತಿತ್ತು; ಆಗ ಇವರು ಮಾಡಿದ ಅಡಗಿಯನ್ನೊಟ್ಟಿಗೆ ಚಲ್ಲಿ ಪಲಾಯನ ಮಾಡಬೇಕಾಗುತ್ತಿದ್ದಿತು. ಶತ್ರುಗಳಾದ ಮೊಗಲರು ಒಂದೇ ಸವನೆ ಇವರ ಬೆನ್ನು ಹತ್ತಿದ್ದರು; ಅದರಿಂದ ಒಂದು ದಿನ ಮಹಾರಾಣಾನ ಪರಿವಾರದವರು ಐದುಸಾರೆ ಅಡಿಗೆ ಮಾಡಬೇಕಾಯಿತು; ಆದರೆ ಐದುಸಾರೆ ಇವರು ತಮ್ಮ ಅಡಿಗೆಯನ್ನು ಚಲ್ಲಿ ಓಡಿಹೋಗಬೇಕಾಯಿತು; ಕಡೆಯಲ್ಲಿ ಒಂದುಸಾರೆ ಉಟಮಾಡುವ ಸುಯೋಗವನ್ನು ಸಹ ಇವರು ಹೊಂದಲಿಲ್ಲ. ಒಂದೊಂದು ಪ್ರಸಂಗದಲ್ಲಿ ಒದಗಿದ ಕ್ಷುಲ್ಲಕ ಸಂಗತಿಗಳಿಂದ ಸಹ, ಮನು ಷ್ಯನ ಜೀವಿತದ ಗತಿಯು ಭಿನ್ನವಾಗಿ ಹೋದದ್ದು ಕಂಡುಬರುವದು. ಒಂದು ಸಮಯದಲ್ಲಿ ಐಝಾಕನ್ನೂದನನು ಕುಸ್ತಿಯಲ್ಲೊಬ್ಬ ದೊಡ್ಡ ಹುಡುಗನನ್ನು ಒಗೆದದ್ದು, ಅವನು ಮುಂದೆ ಬಹು ಬುದ್ದಿವಂತನಾಗುವದಕ್ಕೆ ಕಾರಣೀಭೂತವಾ ಯಿತು. ಕೈವನು ಮುಂದೆ ಬರುವದಕ್ಕೆ ಹಿಂದುಸ್ತಾನದ ಗವರ್ನರನಾಗುವ