ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮದಾರ ವಿಜಯ ೧೫೯ M ದೇಶದ ಯಾವ ಸತ್ಯನಿಷ್ಟ ಐತಿಹಾಸಿಕನೂ ರಜಪೂತರ ವೀರತ್ವದ ಕಥೆಯನ್ನು ಜೀವಂತಭಾಷೆಯಿಂದ ಬರೆಯದಿರುವದು ಅತೀವ ದುಃಖದ ಸಂಗತಿಯಾಗಿದೆ. ದೇವೀರದ ಯುದ್ಧದ ತರುವಾಯದಲ್ಲಾದ ಅನೇಕ ಕಾಳಗಗಳಲ್ಲಿ ಪ್ರತಾ ಪನು ಜಯವನ್ನು ಪಡೆದಿದ್ದಾನೆ; ಆದರೆ ಈ ವಿಷಯಕವಾಗಿರುವ ಸರಿಯಾದ ಇತಿಹಾಸವು ದೊರೆಯುವದಿಲ್ಲ. ಮುಸಲ್ಮಾನ ಇತಿಹಾಸಕಾರರು ಈ ವಿಷಯದಲ್ಲಿ ಒಂದುರೀತಿಯಿಂದ ಮೌನವನ್ನು ಧರಿಸಿದ್ದಾರೆ. ಆಗಿನ ಕಾಲದ ಯಾವ ಲೇಖ ಕನೂ ಮೊಗಲಸೈನಿಕರ ಪರಾಜಯದ ಸಂಗತಿಯನ್ನು ಬರೆದಿಡುವ ಪ್ರಯಾಸವನ್ನು ತೆಗೆದುಕೊಂಡಿಲ್ಲ. ಮೇವಾಡ ದೇಶದ ಪರ್ವತಮಾಲೆಯ ದುರ್ಗಮಪಧದಲ್ಲಿಯ ನಾನಾ ಸ್ಥಳಗಳಲ್ಲಿ ಅಡ್ಡಾಡಿ ನೋಡಿರಿ, ನೂರಾರು ಸ್ಥಳಗಳು ಪ್ರತಾಪಸಿಂಹನ ವೀರ್ಯಪ್ರತಿಭೆಯಿಂದ ಉಜ್ವಲವಾಗಿವೆ, ಎಷ್ಟೋ ಸ್ಥಳಗಳು ಕೀರ್ತಿ ಚಿನ್ಗಗಳಿಂದ ಚಿರಸ್ಮರಣೀಯವಾಗಿವೆ. ಕೆಲವೆಡೆಯಲ್ಲಿ ಇವನ ಸೈನಿಕರು ಜಯಶಾಲಿಗಳಾಗಿ ಹೆಸರುಪಡೆದಿದ್ದಾರೆ, ಬೇರೆ ಕೆಲವೆಡೆಯಲ್ಲಿ ಪರಾಜಿತರಾಗಿಯೂ ಕೂಡ, ಹೆಚ್ಚಾದ ಗೌರವವನ್ನು ಹೊಂದಿದ್ದಾರೆ. ಮಾನವೀಹೃದಯದ ಪ್ರಕೃತ ಮಹತ್ವವು ಪ್ರಕಟ ವಾದರೆ ಸಾಕು; ಜಯಾಪಜಯಗಳ ತಾರತಮ್ಯವೇ ಉಳಿಯುವಂತಿಲ್ಲ.

  • ಟಾಡ್ ಸಾಹೇಬರು ರಜಪೂತರ ವಿಷಯದಲ್ಲಿ ಸಹಾನುಭೂತಿಯುಳ್ಳವರಾಗಿ ಜ್ವಲಂತ ಭಾಷೆಯಿಂದ ಬರೆದಿದ್ದಾರೆte There 18 not & pass 11 the alpine Aravalli that 18 not sanctified by some deed of Pertay, - brilliant Victory, or oftener, more glorious defeat. Haldighat 18 the Thermopyloe of Mewar; the field of Deweir her Marathon "

Rajasthan Vol. 1, P. 283.