ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಸಂಹಾರ. ೧ರ್L ಸಂತುಷ್ಟನಾದನು; ಮತ್ತು ಭಗವಂತನ ನಾಮಸ್ಮರಣೆ ಮಾಡುತ್ತ, ಆನಂದದಿಂದ ಪ್ರಾಣಬಿಟ್ಟನು.

  • ವೀರತ್ವ ಮತ್ತು ಸ್ವದೇಶಪ್ರೇಮದ ಪವಿತ್ರ ಮೂರ್ತಿಯಾದ ಪ್ರತಾಪಸಿಂಹ ನು ದೇಹತ್ಯಾಗಮಾಡಿದನು. ರಜಪೂತರ ಆಶೆ ಮತ್ತು ವಿಶ್ವಾಸ, ಹಿಂದೂರಾಜರ ಸಹಾಯ ಮತ್ತು ಆಧಾರ, ಹಿಂದುಸ್ತಾನದ ಗೌರವ ಮತ್ತು ಅಲಂಕಾರನಾದ ಮಹಾವೀರ ಪ್ರತಾಪನು ತನ್ನ ವಯಸ್ಸಿನ ೫೫ನೇ ವರ್ಷ ಭೂಮಿಯ ಕಡೆಯ ಅಪ್ಪಣೆಯನ್ನು ಹೊಂದಿದನು. ಸಮರ ಮತ್ತು ಸಂಗ್ರಾಮಸಿಂಹರ ವಂಶಜರಲ್ಲಿ ಯೋಗ್ಯನೂ, ತನ್ನ ಯಾವತ್ತು ಆಯುಷ್ಯವನ್ನು ಯುದ್ಧಗಳಲ್ಲಿ ಕಠೋರತೆಯಿಂದ ಕಳೆದವನೂ ಆದ ಪ್ರತಾಪನು, ಕಡೆಯಲ್ಲಿ ಚಿರನಿದ್ರೆಯನ್ನೋದಿದನು. ಭಾರತದ ಭಾಗ್ಯಾಕಾಶದಿಂದ ಒಂದು ಉಜ್ವಲವಾದ ನಕ್ಷತ್ರವು ಪತನವಾಯಿತು. ಭಾರತ ಮಾತೆಯ ರತ್ನಹಾರದಿಂದ ಒಂದು ತೇಜೋಮಯವಾದ ರತ್ನವು ಹರಿದುಬಿದ್ದಿತು. ಯಾವತ್ತು ದೇಶವು ಶೋಕಾವೃತವಾಯಿತು, ಆಬಾಲವೃದ್ಧ-ವನಿತೆಯರೆಲ್ಲರೂ ಹಾಹಾಕಾರ ಮಾಡತೊಡಗಿದರು. ರಜಪೂತ ಮತ್ತು ಬೆಲ್ಲ, ಹಿಂದೂ ಮತ್ತು ಮುಸನ್ನಾನ, ಶತ್ರು ಮತ್ತು ಮಿತ್ರ, ಶ್ರೀಮಂತ ಮತ್ತು ಬಡವ ಅಮೀರ ಮತ್ತು ಫಕೀರ ಇವರೆಲ್ಲರೂ ಸಮಭಾವದಿಂದ ಪ್ರತಾಪನ ಮರಣದಿಂದ ದುಃಖಿತರಾ ದರು. ಪ್ರತಾಪನ ಮರಣದ ದಿವಸವು ಭಾರತದ ಇತಿಹಾಸದಲ್ಲೊಂದು ಮಹಾ ಶೋಕದ ದಿವಸವಾಗಿದೆ.

ದ್ವಾವಿಂಶ ಪರಿಚ್ಛೇದ. + ಇಸು ಉಪಸಂಹಾರ, ಭಾರತಮಾತೆ, ನೀಂ ಪಡೆದೆ ಭೀಷ್ಮ, ಯುಧಿಷ್ಠ ರರಾಮಚಂದ್ರರ೦ || ಸಾರಗುಣಾತ್ಮವಿಶ್ರುತಮಹಾತ್ಮರ ಮುನ್ನ ಪುರಾಣಕಾಲದೊಳ್ || ಸಾರ ಹಮಿರ.ಕುಂಭಸಮರ. ಪ್ರತಪರಂ ಸಲೆ ಮಧ್ಯಕಾಲದೊಳ್ | ಕೂರುತಲಾತರಂ ಬಹು ಸುಪುತ್ರರ ನಿರ್ಮಿಸು ದೇವರೆಯಿಂ || ೧ || ಭಾರತಭೂಮಾತೆಯು ವೀರಪ್ರಸವಿನಿಯು, ಅದರಿಂದ ಅತಿ ಪ್ರಾಚೀನಕಾಲ ದಿಂದ ಭಾರತೀಯರು ವೀರರೆಂದು ಖ್ಯಾತಿಯನ್ನು ಪಡೆದಿದ್ದಾರೆ. ಸಿಂಧುದೇಶವೂ, 12