ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಸಂಹಾರ vv vvvvvvvvvvvvvvv ೧೭೩ /YYYY YY ಮದಿಂದ ರಾಜ್ಯವಾಳಬಹುದಾಗಿದ್ದಿತು; ಆದರೆ ಪ್ರತಾಪನು ಇದನ್ನು ಇಚ್ಚಿಸಲಿಲ್ಲ. ಇವನು ಮೊಗಲರ ಆಧೀನತ್ವವನ್ನು ಸ್ವೀಕರಿಸಿದಲ್ಲಿ, ದಿಲ್ಲಿಯ ದರಬಾರದಲ್ಲಿ ಶ್ರೇಷ್ಠ ಪದವಿಯನ್ನೂ ಸ್ವರಾಜ್ಯದಲ್ಲಿ ಅತುಲೈಶ್ವರ್ಯವನ್ನೂ ಪಡೆದು ವಿಲಾಸ ದಿಂದ ಕಾಲಕಳೆಯಬಹುದಾಗಿದ್ದಿತು; ಅದರೆ ಪ್ರತಾಪನು ಇದಕ್ಕೆಷ್ಟು ಮಾತ್ರವೂ ಮನಸು ಮಾಡಲಿಲ್ಲ. ಶತ್ರುಗಳ ಬಳಿಯಲ್ಲಿ ಅನುಗ್ರಹಪ್ರಾರ್ಧನೆ ಮಾಡಿಕೊಳ್ಳು ವದು ಅತೀವ ಹೀನಕಾರ್ಯವೆಂದು ಪ್ರತಾಪನು ಗೊತ್ತು ಮಾಡಿಕೊಂಡಿದ್ದನು. ಆತ್ಮವಿಕ್ರಯವನ್ನಾಗಲಿ, ಸ್ವದೇಶವಿಕ್ರಯವನ್ನಾಗಲಿ ಮಾಡಿಸಲಿಕ್ಕೆ ಸಮರ್ಥವಾದ ಯಾವ ವಸ್ತುಗಳೂ ಈ ಜಗತ್ತಿನಲ್ಲಿಲ್ಲ. ಆದುದರಿಂದ ಪ್ರತಾಪನು ಆತ್ಮಸನ್ಮಾನ ಕ್ಕಾಗಲಿ, ಸ್ವದೇಶದ ಗೌರವಕ್ಕಾಗಲಿ ಜಲಾಂಜಲಿಯನ್ನು ಕೊಡಲಿಲ್ಲ. ದೋರ್ದಂಡ ಪರಾಕ್ರಮಿಕಳಾದ ಮೊಗಲರೊಡನೆ ಶತ್ರುತ್ವವನ್ನು ಬೆಳೆಸಿದಲ್ಲಿ, ರಾಜ್ಯ ರಾಜಧಾನಿಗಳು ನಾಶವಾಗುವವು; ಧನ-ಸಂಪತ್ತು ಗಳು ಹೋಗುವವು; ಆತ್ಮೀಯ ಜನರು ಮೃತ್ಯುಮುಖದಲ್ಲಿ ಬೀಳುವರು; ಜ್ಞಾತಿಜನರ ರಕ್ತದಿಂದ ಪರ್ವ ತವು ರಂಜಿತವಾಗುವದು; ಈ ಮೊದಲಾದ ಸಂಗತಿಗಳನ್ನು ಪ್ರತಾಪನು ಬಲ್ಲವ ನಾಗಿದ್ದನು; ಆದರೂ ಇವುಗಳಿಗಾಗಿ ಪ್ರತಾಪನು ವಿಚಲಿತನಾಗಲಿಲ್ಲ; ಸ್ವದೇಶದ ನಾತಂತ್ರ್ಯಕ್ಕಿಂತ ಸಾವಿರಾರು ಸ್ವದೇಶಬಾಂಧವರ ಜೀವನವು ಅತ್ಯಲ್ಪ ಬೆಲೆಯು ಇದ್ದೆಂದು ಭಾವಿಸಿದನು. ಪ್ರತಿಜ್ಞೆಯ ರಕ್ಷಣೆಗಾಗಿ ಸರ್ವಸ್ವವೂ ಹೋಗುವದಾದರೆ ಹೋಗಲಿ; ಪ್ರತಾಪನು ಇದನ್ನು ಎಣಿಸುವವನಾಗಿರಲಿಲ್ಲ. ಒಂದು ವೇಳೆ ಪ್ರತಿ ಜ್ಞೆಯು ರಕ್ಷಿತವಾಗದಿದ್ದಲ್ಲಿ ಎಷ್ಟೇ ಉಳಿದರೂ, ಅದರಿಂದ ಪ್ರತಾಪನಿಗೆ ಉಪ ಯೋಗವಿರಲಿಲ್ಲ. ಪ್ರತಾಪನು ಭಗವಂತನ ( ಹತೋವಾ ಪ್ರಾಪೈಸಿ ಸ್ವರ್ಗ೦, ಜಿತ್ಸಾ ವಾ ಭೋಕ್ಷಸೇ ಮಹೀಮ್' ಎಂಬ ಉಕ್ತಿಯನ್ನು ಮರೆತಿರಲಿಲ್ಲ. ಯುದ್ಧ ದಲ್ಲಿ ಜಯಪಡೆದು ರಾಜ್ಯವಾಳಬೇಕು; ಇಲ್ಲವೆ ರಣಭೂಮಿಯಲ್ಲಿ ಮಡಿದು, ಸ್ವರ್ಗವನ್ನು ಹೊಂದಬೇಕು; ಇವೆರಡರಲ್ಲಿ ಆವುದಾದರೊಂದನ್ನು ಹೊಂದುವದು ಪ್ರತಾಪನ ಉದ್ದೇಶವಾಗಿದ್ದಿತು. ಸಾರಾಂಶ ಪ್ರತಾಪನು ಜನ್ಮಭೂಮಿಯ ಸಲು ವಾಗಿ ಮಾಡಿದ ಆತ್ಮ ತ್ಯಾಗವು ಈ ಜಗತ್ತಿನಲ್ಲಿ ಅತುಲನೀಯವಾದದ್ದು. ( ಕಾರ್ಯಸಾಧನ ಇಲ್ಲವೆ ದೇಹಪತನ' ವೆಂಬದು ಪ್ರತಾಪನ ಜೀವನದ ಮೂಲಮಂತ್ರವು. ಈ ಮೂಲಮಂತವನ್ನು ಬಿಟ್ಟು, ಮನುಷ್ಯತ್ವವನ್ನು ರಕ್ಷಿಸಿ ಕೊಂಡು, ಉನ್ನತಿಯನ್ನು ಪಡೆದ ಜನರು ಹಿಂದೆ ಯಾರೂ ಆಗಿಲ್ಲ; ಮುಂದೆಯೂ