ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಮಹಾರಾಣಾ ಪ್ರತಾಪ ಸಿಂಹ MMMMMMMMMMMMM ಆಗುವಂತಿಲ್ಲ ಪ್ರತಾಪನು ಈ ಮೂಲಮಂತ್ರದ ಸಾಧನೆಗಾಗಿ ಒಂದು ಅದ್ಭುತ ವಾದ ಕಠೋರ ವ್ರತವನ್ನವಲಂಬಿಸಿದ್ದನು. ಯಾವಜೀವವೂ ಸುಖವಿಲಾಸಕ್ಕೆ ಜಲಾಂಜಲಿಯನ್ನಿತ್ತು, ಮುಂದೆ ಆಗತಕ್ಕ ರಾಣಾರನ್ನು ಸುಖ-ಸೇವೆಯಿಂದ ವಂಚಿಸಿ, ಯಾವತ್ತು ದೇಶವನ್ನು ಹಾಳುಮಾಡಿ, ಸಮಗ್ರ ದೇಶವಾಸಿಗಳನ್ನು ಗೃಹ ತ್ಯಾಗಿಗಳಾದ ಸನ್ಯಾಸಿಗಳನ್ನಾಗಿ ಮಾಡಿ, ಪ್ರತಾಪನು ಸ್ವದೇಶದ ಉದ್ದಾರದ ಒಂದು ನೂತನವೂ, ಆದರ್ಶಸ್ವರೂಪವೂ ಆದ ಪಂದವನ್ನು ಹುಡುಕಿ ತೆಗೆದನು. ಇವನ ಪ್ರತಿಜ್ಞೆಯು ಕಠೋರವಿರುವಂತೆ, ಪ್ರತಿಜ್ಞಾಪಾಲನ ಮಾಡುವ ಇವನ ಅಪ್ಪಣೆಯಂತೆ ವರ್ತಿಸುವ ಪ್ರಜೆಗಳಾದರೂ ಕಠೋರರಾದರು. ಜನರು ಧರ್ಮ ಸಂಪಾದನೆಗಾಗಿ ಅಧವಾ ಮೋಕ್ಷಕ್ಕಾಗಿ ತಪಸ್ಸನ್ನಾಚರಿಸುತ್ತಿರುವರು; ಆದರೆ ಪ್ರತಾಪನು ರಾಜ್ಯಕ್ಕಾಗಿ, ರಾಷ್ಟ್ರೀಯ ಸ್ವಾತಂತ್ರತೆಗಾಗಿ, ರಜಪೂತರ ಜಾತಿಧರ್ಮ ರಕ್ಷಣೆಗಾಗಿ ತಪಸ್ಸನ್ನು ಮಾಡಿದನು, ಪ್ರತಾಪನ ಈ ರಾಜನೈತಿಕ ತಪಸ್ಸು, ಇವ ನನ್ನು ವೀರೇಂದ್ರ ಸಮಾಜದಲ್ಲಿ ಶ್ರೇಷ್ಟನನ್ನಾಗಿ ಮಾಡಿತು. ಪ್ರತಾಪನ ಸ್ವದೇಶಭಕ್ತಿಯು-ಮಾತೃಪೂಜೆಯು ಇವನ ಚರಿತ್ರೆಯ ಮುಖ್ಯ ಮಹತ್ವದ ಸಂಗತಿಯಾಗಿದೆ. ಇವನು ಜನ್ಮಭೂಮಿಯನ್ನು ' ಸ್ವರ್ಗಾದಪಿ ಗರೀ' ಯಸೀ ' ಯೆಂದು ಭಾವಿಸಿದ್ದನು, ಇದನ್ನಿ ವನು ಪ್ರತಿಯೊಂದು ಮಾತಿನಿಂದಲೂ, ಕಾರ್ಯದಿಂದಲೂ ಮನಗಾಣಬಹುದಾಗಿದೆ. ಜನನಿಯ ಮರಣದಿಂದ ಮಕ್ಕಳು ದುಃಖಿಸುತ್ತಿರುವದನ್ನು ನಾವು ನೋಡುತ್ತೇವೆ; ಅನೇಕರು ಇದರ ಅನುಭವವನ್ನು ತೆಗೆದುಕೊಂಡಿರಬಹುದು, ಆದರೆ ಪ್ರತಾಪನು ಚಿತೋಡದ ನಾಶದಿಂದ ಹೊಂದಿದ ದಾರುಣವ್ಯಥೆಯನ್ನೂ, ಜನ್ಮಭೂಮಿಯ ಪುನರುದ್ಧಾರಕ್ಕಾಗಿ ಅವನು ಆಮರಣದ ವರೆಗೆ ತೋರಿಸಿದ ವ್ಯಾಕುಲತೆಯನ್ನೂ ನಾವು ಕಲ್ಪಿಸಲು ಸಹ ಅಸಮರ್ಥರಾಗಿ ರುವೆವು. ಸ್ವದೇಶವನ್ನು ಮಾತೆಯಂತೆ ಭಾವಿಸಿ, ಹೇಗೆ ಭಕ್ತಿಯನ್ನು ತೋರ್ಪ ಡಿಸಬೇಕು? ಸ್ವ ರಾಷ್ಟ್ರವನ್ನು ದೇವರಂತೆ ಭಾವಿಸಿ, ಹೇಗೆ ಪೂಜೆಮಾಡಬೇಕು? ಲೋಕಾಚಾರ, ಧರ್ಮಾಚಾರಗಳೆಲ್ಲವನ್ನು ಹೇಗೆ ಮಾತೃಪೂಜೆಯಲ್ಲಿ ಏಕರೂಪ ಮಾಡಬೇಕು? ಇದೆಲ್ಲವನ್ನು ಪ್ರತಾಪನು ತನ್ನ ಚರಿತ್ರೆಯಲ್ಲಿ ತೋರಿಸಿಕೊಟ್ಟ ದ್ದಾನೆ. ಪ್ರತಾಪನ ಇತಿಹಾಸವು ಆದ್ಯೋಪಾಂತ ಮಾತೃಪೂಜೆಯ ಐತಿಹ್ಯವುಅಸಾಧಾರಣ ಆತ್ಮ ತ್ಯಾಗದ ಉತ್ತಮ ಐತಿಹಾಸವು. ಆದುದರಿಂದ ಪ್ರತಾಪನು ಸ್ವದೇಶಭಕ್ತ ಮಹಾಪುರುಷರಲ್ಲಿ ಅಗ್ರಗಣ್ಯನು.