ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರು • AMMy

7/ /++++ +

• • • • • ರ್ಯವನ್ನು ಉಂಟುಮಾಡುತ್ತಿರುವವು. ಇದರ ಪೂರ್ವಕ್ಕೆ ಸ್ವಲ್ಪ ದೂರದಲ್ಲಿ ಅರವಲೀ ಪರ್ವತದ ಮೇಲ್ಬಾಗದಲ್ಲಿ ಗೋಗುಂಡದ ಕೋಟೆಯಿರುವದು. ಇದ ರಷ್ಟು ಎತ್ತರವಾದ ಕೋಟೆಯು ಹಿಂದುಸ್ತಾನದಲ್ಲಿ ಬೇರೆ ಯಾವದೂ ಇಲ್ಲ. ಗೋಗುಂಡದಿಂದ ಪೂರ್ವಕ್ಕೆ ಕೆಳಭಾಗದಲ್ಲಿ ಇಳಿದರೆ ಚಿರಮನೋರಮ್ಯವಾದ ಉದಯಪೂರ ಪಟ್ಟಣಕ್ಕೆ ಬರುವೆವು, ಪ್ರತಾಪಸಿಂಹನ ಕಾಲದಲ್ಲಿ ಇದೇ ಪಟ್ಟ ಇವು ಮೇವಾಡದ ರಾಜಧಾನಿಯಾಗಿದ್ದಿತು. ಈಗಲೂ ಅವನ ವಂಶದ ಮೇವಾ ಡದ ಮಹಾರಾಣಾನು ಇದೇ ಪಟ್ಟಣದಲ್ಲಿ ರಾಜ್ಯ ಕಾರಭಾರ ಸಾಗಿಸುತ್ತಿರುವನು. ಉದಯಪುರದಿಂದ ಪೂರ್ವಕ್ಕೆ ತುಸು ದೂರ ಇಳಿದು ಹೋದರೆ, ಅರ ವಲೀ ಪರ್ವತವು ಮುಗಿದು ಹೋಗುವದು. ಈ ಸ್ಥಳದಿಂದ ಮೇವಾಡದ ಭೂಮಿಯು ಆರಂಭವಾಗುವದು. ಈ ಭೂಮಿಯಲ್ಲಿ ಸುಮಾರು ೩೦ ಹರದಾರಿಯ ಮೇಲೆ ಉತ್ತರ ಪೂರ್ವ ಮೇರೆಯಲ್ಲಿ ಒಂದು ಪರ್ವತದ ಸಾಲಿನ ಮೇಲೆ, ಚಿತೋಡದುರ್ಗವಿರುವದು ಇದರಂತಹ ಸುಂದರ, ಸುವಿಶಾಲ, ದುರ್ಭೇದ್ಯ ಕೋಟೆಯು ಅತಿ ವಿರಳವೆಂದು ಹೇಳಬಹುದು. ಚಿತೋಡವು ಮೇವಾಡದ ಮೊದಲಿನ ರಾಜಧಾನಿಯಾಗಿದ್ದಿತು. ಮೊಗಲರ ಅತ್ಯಾಚಾರದಿಂದ ಮುಂದೆ ಉದಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳ ಬೇಕಾಯಿತು. ದ್ವಿತೀಯ ಪರಿಚ್ಛೇದ. ಇಳ ರಜಪೂತರು. ತನ್ನ ದೇಶವ ತನ್ನ ಧರ್ಮವ | ತನ್ನ ಜಾತಿಯ ಬಿಡದೆ ಸೇವಿಸಿ | ನನ್ನಿಯಿಂದೀ ಮೂರು ದೇವತೆಗಳನ್ನು ನಂಬಿದ || ಉನ್ನತಗುಣದಿ ಸಲೆ ವಿಭೂಷಿತ | ಸನ್ನುತ ರಾಜಪುತ್ರಜನಾಂಗ | ದುನ್ನತಿಯನೊರ್ಣಿಸುವದಾರಿಗೆ ಸಾಧ್ಯವೀಜಗದೀ || ೧ || ರಜಪೂತರು ತಾವು ಕ್ಷತ್ರಿಯ ಜಾತಿಯವರೆಂದು ಹೇಳಿಕೊಳ್ಳುತ್ತಿರುವರು; ಆದರೆ ಆಧುನಿಕ ಇತಿಹಾಸ ಶೋಧಕರು, ಇವರು ಪ್ರಾಚೀನ ಭಾರತದ ಕ್ಷತ್ರಿಯ