ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ M / ವಂಶದವರಲ್ಲೆಂದು ಸ್ಥಿರಪಡಿಸಿದ್ದಾರೆ. ಕ್ರಿಸ್ತಶಕದ ಒಂದನೇ ಶತಮಾನದಿಂದ ಆರನೇ ಶತಮಾನದ ವರೆಗೆ, ಶಾಕದ್ವೀಪದಿಂದ ಶಕಜನರು ಬೇರೆ ಬೇರೆ ಕಾಲಕ್ಕೆ ಹಿಂದುಸ್ತಾನದಲ್ಲಿ ಬಂದು ನಿಂತು, ರಾಜ್ಯ ಸ್ಥಾಪನೆ ಮಾಡಿದರು. ಕಾಸ್ಸಿಯನ್ ಸರೋವರದ ಪೂರ್ವಭಾಗದಿಂದ ಕಾಶ್ಮೀರದ ಪಶ್ಚಿಮದ ವರೆಗಿರುವ, ಇರಾಣದ ಉತ್ತರ ಮೇರೆಯಲ್ಲಿಯ ಮಧ್ಯ ಏಶಿಯದ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ಶಾಕ ದ್ವೀಪವೆಂಬ ಹೆಸರಿತ್ತು.* ಈ ಶಾಕದ್ವೀಪದ ಸಂಗಡ ಪ್ರಾಚೀನ ಹಿಂದೂಜನರ ನಿಕಟಸಂಬಂಧವಿತ್ತು, ಮತ್ತು ಅಲ್ಲಿ ಪ್ರಾಚೀನಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮೊದಲಾದ ನಾಲ್ಕು ವರ್ಣದ ಜನರು ವಾಸಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಅತಿ ಪ್ರಾಚೀನಕಾಲದಲ್ಲಿ ಶಾಕದ್ವೀಪದ ಬ್ರಾಹ್ಮಣರು ಹಿಂದುಸ್ತಾನಕ್ಕೆ ಬಂದು, ವಾಸಿಸಹತ್ತಿದರು. ತರುವಾಯ ಶಾಕದ್ವೀಪದಲ್ಲಿ ಬ್ರಾಹ್ಮಣರಿಲ್ಲದಂತಾದಕಾರಣ, ಕೃತಿ ಯರು ಅನಾಚಾರಿಗಳಾದರು. ಇವರು ಶಕ, ಕೂಷಣ, ಜಾಟ ಮೊದಲಾದ ಜಾತಿಭೇದಗಳುಳ್ಳವರಾಗಿದ್ದರು; ಆದರೆ ಇವರೆಲ್ಲರು ಸಾಧಾರಣವಾಗಿ ಶಕರೆಂದು ಕರೆಯಲ್ಪಡುತ್ತಿದ್ದರು. ಈ ಶಕರು ಬಹುಕಾಲದವರೆಗೆ, ಭಾರತೀಯ ಅರಸರೊ ಡನೆ ಯುದ್ಧ ಮಾಡಿದರು. ಈ ಶಕರನ್ನು ಜಯಸಿದ್ದರಿಂದಲೇ ವಿಕ್ರಮಾದಿತ್ಯನಿಗೆ ಶಕಾರಿ ಎಂಬ ಬೇರೊಂದು ಹೆಸರು ದೊರೆಯಿತು. ಈಗಲೂ ನಮ್ಮ ದೇಶದಲ್ಲಿ ಶಕಜಾತಿಯ ಅರಸನಾದ ಕನಿಷ್ಕನಿಂದ ಸ್ಥಾಪಿಸಲ್ಪಟ್ಟ ಶಕವು ನಡೆಯುತ್ತಿರು ವದು. ಶಕಜನರು ಹಿಂದುಸ್ತಾನದ ಬೇರೆ ಬೇರೆ ಭಾಗಗಳಲ್ಲಿ ಅಧಿಕಾರಪಡೆದು, ವಾಸಿಸಹತ್ತಿ, ಈ ದೇಶದ ಆರ್ಯ ಸಾಮ್ರಾಜ್ಯದಲ್ಲಿ ಸೇರಿ, ಕ್ಷತ್ರಿಯರೆಂಬ ಹೆಸ ರನ್ನು ಧರಿಸಿದರು ರಜಪೂತರು ಈ ಶಕಜಾತಿಯವರೆಂದು, ಇತಿಹಾಸಶೋಧ ಕರು ಗೊತ್ತು ಮಾಡಿದ್ದಾರೆ. ಕರ್ನಲ್ ಟಾಡ್ ಸಾಹೇಬರು ಇನ್ನೂ ವರೆಗೂ ರಜ ಪೂತರ ಆಚಾರ-ವ್ಯವಹಾರ, ಪೂಜಾಪದ್ಧತಿ, ಉತ್ಸವಗಳಲ್ಲಿ ಅನೇಕ ಶಕ ಜಾತೀಯ ನಡೆವಳಿಗಳು ಸೇರಿಕೊಂಡಿವೆಯೆಂಬದನ್ನು, ವಿಸ್ತಾರವಾಗಿ ತೋರಿಸಿ ಕೊಟ್ಟಿದ್ದಾರೆ. * ಅತಿ ಪ್ರಾಚೀನಕಾಲದಲ್ಲಿ ಎಷ್ಟೋ ರಾಜರ ಉಪಾಧಿಯು ರಾಜ

  • ಈ ಶಾಕದ್ವೀಪ ( Suy thia ) ದಿಂದ ಶಕವೀರರು ಹೊರಬಿದ್ದು, ಕಪ್ಪು ಸಮುದ್ರವನ್ನು ದಾಟ, ಯುರೋಪದ ಬೇರೆ ಬೇರೆ ಭಾಗಗಳಲ್ಲಿ ವಾಸಿಸತೊಡಗಿದರು ಈ ಪರಾಕ್ರಮಿಗಳಾದ ಶಕರೊಡನೆ ಇರಾಣ ಮೊದಲಾದ ದೇಶಗಳ ಜನರು ಬಹುಕಾಲ ಯುದ್ದ ಮಾಡಿದರು
  • ಎಲ್ಲಕ್ಕೂ ಮೊದಲು ಕರ್ನಲ್ ಟಾಡ್ ಸಾಹೇಬರು ಶಕಜಾತಿಯಿ೦ದ ರಜಪೂತರ ಉತ್ಸು ತ್ರಿಯಾಯಿತಂದು ಸಿದ್ದಮಾಡಿಕೊಟ್ಟರು ತರುವಾಯದ ಇತಿಹಾಸಕಾರರು ಬಹು ಪ್ರಮಾಣಗ