ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರು • • • • • vvy /\ \ \ v s v\ V / y • • • • ತೆ ಪುತ್ರವೆಂಬದಾಗಿತ್ತು. ಬಹಳ ಮಾಡಿ, ಇದರಿಂದಲೇ ರಜಪೂತ ಶಬ್ದವು ಹುಟ್ಟಿರ ಬಹುದು ಈ ರಜಪೂತರು ವಿಶೇಷವಾಗಿ ರಾಜ್ಯ ಸ್ಥಾಪನೆ ಮಾಡಿದ ಪ್ರದೇಶಕ್ಕೆ ರಜಪೂತಸ್ತಾನವೆಂಬ ಹೆಸರು ಬಂದಿದೆ. ರಾಜಸ್ತಾನದ ಕ್ಷತ್ರಿಯ ರಜಪೂತರು ನಾನಾ ವಶಂದವರಾಗಿದ್ದಾರೆ. ರಾಜ ಸ್ತಾನದ ಇತಿಹಾಸದಲ್ಲಿ ಇವರ ೩೬ ರಾಜವಂಶಗಳ ಹೆಸರನ್ನು ನೋಡಬಹುದಾ ಗಿದೆ ಇವುಗಳಲ್ಲಿ ಸೂರ್ಯವಂಶ, ಚಂದ್ರವಂಶ, ಅಗ್ನಿ ವಂಶಗಳೆಂಬ ಮೂರು ಮುಖ್ಯವಾಗಿವೆ ಈ ಸ್ಥಳದಲ್ಲಿ ಇವುಗಳನ್ನು ವಿಸ್ತಾರವಾಗಿ ಹೇಳುವ ಅವಶ್ಯಕತೆ ಇಲ್ಲ ನಾವು ಸಾಮಾನ್ಯವಾಗಿ ಇವುಗಳ ಪರಿಚಯವನ್ನು ಮಾಡಿಕೊಡುವೆವು. - ಸೂರ್ಯವಂಶದ ರಜಪೂತರು ತಾವು ಅಯೋಧ್ಯಾಧಿಪತಿಯಾದ ಶ್ರೀರಾಮ ಚಂದ್ರನ ವಂಶಜರೆಂದು ಹೇಳಿಕೊಳ್ಳುತ್ತಾರೆ ಈ ವಂಶದಲ್ಲಿ ಅನೇಕ ಶಾಖೆಗೆ ಳುಂಟು ಅವುಗಳಲ್ಲಿ ಗುಹಿಲೋಟ್, ರಾಠೋರ ಮತ್ತು ಕಚ್ಚವಾಹ ಅಥವಾ ಕೂಶ್ವಾಹ ಶಾಖೆಗಳು ಮುಖ್ಯವಾದವುಗಳು ಗುಹಿಲೋಟರು ರಾಮಚಂದ್ರನ ಮಗ ನಾದ ಲವನ ವಂಶಜರು, ಮತ್ತು ರಾರೋರ-ಕಚ್ಛವಾಹರು ಶ್ರೀರಾಮಚಂದ್ರನ ಎರಡನೆಯ ಮಗನಾದ ಕುಶನ ವಂಶಜರು ಗುಹಿಲೋಟವಂಶವು ಸೂರ್ಯಕುಲ ದಲ್ಲಿ ಎಲ್ಲಕ್ಕೂ ಶ್ರೇಷ್ಠವಾದದ್ದು ಈ ಗುಹಿಲೋಟವಂಶದಲ್ಲಿ ೨೪ ಒಳಭೇದಗ ಳುಂಟು ಅವುಗಳಲ್ಲೊಂದರ ಹೆಸರು ಶೋದಿಯಾ ಎಂದಿರುವದು ಮೇವಾಡದ ಮಹಾರಾಣಾರು ಸೂರ್ಯವಂಶದ ರಜಪೂತರಲ್ಲಿ ಗುಹಿಲೋಟ್ ಶಾಖೆಯ ಶಿಶೋ ದಿಯಾ ವಂಶದಲ್ಲಿ ಹುಟ್ಟಿದವರು ಈ ವಂಶದಲ್ಲಿ ಮಹಾರಾಣಾ ಪ್ರತಾಪಸಿಂಹನು ಜನ್ಮಗ್ರಹಣ ಮಾಡಿದನು. ರಾರೋರರು ಮೊದಲು ಕನೋಜದಲ್ಲಿ ವಾಸಮಾಡುತ್ತಿದ್ದರು ಇವರಲ್ಲಿಯ ಕೆಲವರು ಜೋಧಪುರದಲ್ಲಿ ರಾಜ್ಯವನ್ನು ಸ್ಟಾಪಿಸಿದರು. ಅದರಿಂದ ಜೋಧಪುರದ ರಾಣಾರು ರಾಠೋರ ವಂಶದವರು ಜಯಪುರ ಅಧವಾ ಅಂಬರದ ರಾಜರು ಕಚ್ಚವಾಹ ಕುಲದವರು. ಳಿ೦ದ ಈ ಮತವನ್ನು ಪೋಷಿಸಿದ್ದಾರೆ See Told S Rajasthal, Vol I, Chap I to IV, V A Smith's Early history of India, Edition, 1d3 Ektition, PP. 322, 407 401)