ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಮಹಾರಾಣಾ ಪ್ರತಾಪಸಿಂಹ, • • • • • • • ••••www F / / / / +

  • *

. ಚಂದ್ರವಂಶಕ್ಕೆ ಯದು ಎಂಬವನು ಆದಿಪುರುಷನಾದ್ದರಿಂದ ಈ ವಂಶಕ್ಕೆ ಯದುವಂಶವೆಂಬ ಬೇರೊಂದು ಹೆಸರುಂಟು. ಈ ವಂಶಕ್ಕೆ ಭಟ್ಟಿ, ತೋಮರ ಮೊದಲಾದ ಶಾಖೆಗಳುಂಟು ಜಸಲ್ಮೀರದ ರಾಜರು ಭಟ್ಟಿ ವಂಶದವರು, ಮತ್ತು ದಿಲೀಶ್ವರನಾದ ಅನಂಗಪಾಲನು ತೋಮರವಂಶದವನು. ಅಗ್ನಿವಂಶದಲ್ಲಿ ಪ್ರಮಾರ, ಪರಿಹಾರ, ಚಾಲುಕ್ಯ, ಮತ್ತು ಚೌಹಾಣಗಳೆಂಬ ನಾಲ್ಕು ಮುಖ್ಯ ಶಾಖೆ ಗಳುಂಟು. ಅಜಮೀರಾಧಿಪತಿಯಾದ ಪೃಥ್ವಿರಾಜನು ಚೌಹಾಣ ವಂಶದವನಾಗಿ ದ್ದನು, ಇವನಿಂದಲೇ ಮುಸಲ್ಮಾನರು ಮೊದಲು ಹಿಂದೂರಾಜ್ಯವನ್ನು ಪಡೆದರು. ಹೀಗೆ ರಜಪೂತರು ನಾನಾ ಶಾಖೆಗಳುಳ್ಳವರಾಗಿದ್ದರೂ, ಹಿಂದುಸ್ತಾನದ ಬೇರೆ ಯಾವತ್ತು ಜಾತಿಗಳಿಂದ ಬೇರೆಯಾಗಿದ್ದಾರೆ ಇತರ ಮಹಾಜಾತಿಯವರಂತೆ ಇವರಲ್ಲಿಯೂ ಕೆಲವು ವಿಶೇಷ ಸಂಗತಿಗಳುಂಟು ಇವುಗಳಲ್ಲಿಯ ಮೊದಲನೆಯ ಭೇದವು ರಜಪೂತರ ಶರೀರರಚನೆಯಾಗಿರುವದು, ಕ್ಷತ್ರಿಯೋಚಿತ ವೀರ್ಯ ಪ್ರತಿ ಭೆಯು, ಇವರ ಸರ್ವಾ೦ಗಗಳಲ್ಲಿ ಒಡೆದು ಕಾಣುತ್ತಿರುವದು. ಇವರ ದೇಹವು ಉನ್ನತವೂ, ಬಲಿಷ್ಠವೂ, ಸದೃಢವೂ ಇರುವದು ರಜಪೂತರಲ್ಲನೇಕರು ಕಪ್ಪು ಬಣ್ಣದವರಾಗಿದ್ದರೂ ಸಾಧಾರಣವಾಗಿ, ಇವರು ಗೌರವರ್ಣದವರೆಂದು ಹೇಳ ಬಹುದು. ಕಪ್ಪು ಕೂದಲು, ವಿಸ್ತಾರವಾದ ಎದೆಯು, ವಿಸ್ತ್ರತವಾದ ಕಣ್ಣುಗಳು ರಜಪೂತರ ವಿಶಿಷ್ಟ ಚಿನ್ಮಗಳಾಗಿವೆ ಇವರು ಅತ್ಯಂತ ಸಾಹಸಿಗಳೂ, ಅಸಾಧಾರ ಣ ವಿಕ್ರಮಶಾಲಿಗಳೂ, ಬಹಳ ಕಷ್ಟ ಸಹಿಸಿಕೊಳ್ಳುವವರೂ ಆಗಿದ್ದಾರೆ ಇವರು ವಿಪತ್ತಿಗಾಗಲಿ, ಮೃತ್ಯುವಿಗಾಗಲಿ ಎಷ್ಟು ಮಾತ್ರವೂ ಹೆದರುವದಿಲ್ಲ. ಅನಾಹಾರ, ಅನಿದ್ರೆಗಳು ಇವರನ್ನು ಕೇಶವಡಿಸಲಾರವು. ವಿಲಾಸಿತ್ವವು ಅಥವಾ ನಿರುಪಯುಕ್ತ ಆಡಂಬರವು ಇವರಲ್ಲಿಲ್ಲ. ರಜಪೂತರು ಸಬಲರೂ, ಸಮರ್ಧರೂ ಇದ್ದಂತೆ ಕರ್ಮ ರರೂ ಆಗಿದ್ದರು. ಇವರ ದೇಶವು ಸಮಭೂಮಿಯುಳ್ಳದ್ದಿರದಂತೆ ಇವರ ಕಾರ್ಯ ತತ್ಪರತೆಯೂ, ಸದಾ ಒಂದೇ ವಿಧವಾಗಿರಲಿಲ್ಲ. ಒಂದೊಂದು ಸಮಯದಲ್ಲಿ ಇವರು ಆಲಸ್ಯ, ಉತ್ಸವಗಳಲ್ಲಿ ಆಸಕ್ತರಾಗಿಹೋಗುತ್ತಿದ್ದರು; ಆದರೆ ಕೆಲಸದ ವೇಳೆಯಲ್ಲಿ ಪ್ರಾಣವಿರುವ ವರೆಗೂ ಹಿಂದೆಗೆಯುತ್ತಿದ್ದಿಲ್ಲ. ಮಹಾರಾಷ್ಟ್ರ ರಂತೆ ಇವರು ಚಪಲರೂ, ಕೂಟ ರಾಜನೀತಿಯನ್ನು ಬಲ್ಲವರೂ ಆಗಿರದಿದ್ದರೂ, ಯಾವ ದೊಂದು ಕಾರ್ಯವನ್ನು ಕೈಕೊಂಡ ಬಳಿಕ, ಅದನ್ನು ಕಡೆಹಾಯಿಸದೆ ಬಿಡುತ್ತಿ ದಿಲ್ಲ. ಪ್ರತಿಯೊಂದು ಕೆಲಸದಲ್ಲಿ ಇವರು ಹೆಜ್ಜೆ ಹೆಜ್ಜೆಗೆ ತಮ್ಮ ದೃಢತ್ವವನ್ನೂ,