ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fk •,, , ಮಹಾರಾಣಾ ಪ್ರತಾಪ ಸಿ೦ಹ, , ,,, • • • • ,, , • • , , ೧ • • • Anna ಮಹಾಪರಾಕ್ರಮಿಶಾಲಿಯೆಂದೆನಿಸಿಕೊಂಡು, ಚಿತೋಡವನ್ನು ಆಕ್ರಮಿಸಿದನು; ಮತ್ತೂ ಕ್ರಿ ಶಕದ ೭೨೮ನೇ ವರ್ಷ ಸಿಂಹಾಸನವನ್ನೇರಿ, ಹಿಂದೂ ಸೂರ್ಯ ನೆಂಬ ಉಪಾಧಿಯನ್ನು ಧರಿಸಿದನು | ಬಾಪ್ಪಾರಾವಳನು ಚಿತೋಡ ರಾಜಪುರುಷರಲ್ಲಿ ಮೊದಲನೆಯವನಾದ್ದ ರಿಂದ ರಜಪೂತರಿಗೆಲ್ಲ ಅವನು ವಂದ್ಯನಾದನು ತನ್ನ ಉದಾಹರಣೆಯಿಂದಲೂ, ತಿದ್ದು ಪಾಟುಗಳಿಂದಲೂ ಅವನು ತುಸು ದಿವಸಗಳಲ್ಲಿ ತನ್ನ ವಂಶಜರನ್ನು ಯುದ್ಧ ಪ್ರಿಯ ವೀರಜನಾಂಗವನ್ನಾಗಿ ಮಾಡಿದನು. ಇವನು ನೂರುವರ್ಷ ಬಾಳಿದ ನೆಂದೂ, ತನ್ನ ರಾಜ್ಯವನ್ನು ಬಹು ವಿಸ್ತಾರ ಮಾಡಿದನೆಂದೂ ಹೇಳುತ್ತಿರುವರು. ಇವನಿಗೆ ಬಹಳ ಮಂದಿ ಮಕ್ಕಳಿದ್ದರು. ಅದರಿಂದ, ಉತ್ತರೋತ್ತರ ಶಿಶೋ ದಿಯಾ ರಜಪೂತರ ಸಂಖ್ಯೆಯು ಬೆಳೆಯುತ್ತ ನಡೆಯಿತು. ಸನ್ ೧೦೫೦ರಲ್ಲಿ ಈ ವಶಂದಲ್ಲಿ ಸಮರಸಿಂಹನೆಂಬ ಪರಾಕ್ರಮಿಯು ಹುಟ್ಟಿದನು. ಇವನು ದಿಲ್ಲಿಯ ಅರಸನಾದ ಪೃಥ್ವಿರಾಜನ ತಂಗಿಯಾದ ಕರ್ಮ ದೇವಿಯನ್ನು ಲಗ್ನ ಮಾಡಿಕೊಂಡಿದ್ದನು ಸೃಥ್ವಿರಾಜನು ಸರಸ್ವತೀ ನದಿಯ ತಟ ದಲ್ಲಿ ಶಹಬುದ್ದೀನ ಘೋರಿಯಿಂದ ಪರಾಜಿತನಾದ ದಿವಸವೇ, ಸಮರಸಿಂಹನು ದಿಲೀಶ್ವರನ ಪಾರ್ಶ್ವದಲ್ಲಿ ಮಡಿದು, ವೀರಸ್ವರ್ಗವನ್ನೈದಿದನು (೧೧೯೩) ಮುಂದೆ ರಜಪೂತರು ಸಮರಸಿಂಹನ ಚಿಕ್ಕವಯಸ್ಸಿನ ಮಗನಾದ ಕರ್ಣಸಿಂಹನನ್ನು ಪಟ್ಟಕ್ಕೆ ಕುಳ್ಳಿರಿಸಿದರು. ಈ ಸಮಯದಲ್ಲಿ ದಿಲ್ಲಿಯ ಅರಸನಾದ ಕುತುಬುದ್ದೀನನು ಮೇವಾ ಡದ ಮೇಲೆ ದಂಡೆತ್ತಿ ಬಂದನು. ಕರ್ಮದೇವಿಯು ರಜಪೂತ ಸೈನಿಕರೊಡನೆ ಯುದ್ಧಭೂಮಿಯಲ್ಲಿ ಬಂದು, ಕುತುಬುದ್ದೀನನನ್ನು ಸೋಲಿಸಿದಳು. ಕರ್ಣ ಸಿಂಹನ ತರುವಾಯ, ಇವನ ಸಹೋದರನ ಮಗನಾದ ಬಾಹು ಪನು ಅರಸನಾದನು. ಇವನ ಆಳಿಕೆಯಲ್ಲಿ ಎರಡು ಮುಖ್ಯ ಸಂಗತಿಗಳು ವರ್ತಿಸಿ ದವು ಈ ಕಾಲದಿಂದ ಮುಂದೆ ಮೇವಾಡದ ಗುಹಿಲೋಟವಂಶದ ರಜಪೂತರು ಶಿಶೋದಿಯಾ ರಜಪೂತರೆಂಬ ಹೆಸರನ್ನು ಧರಿಸಿದರು, ಮತ್ತು ಚಿತೋಡೇಶ್ವರನು ಈವರೆಗಿರುವ ರಾವಳ ಎಂಬ ಬಿರುದನ್ನು ಬಿಟ್ಟು ರಾಣಾ ಎಂಬ ಉಪಾಧಿಯನ್ನು ಧರಿಸಿದನು.