ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವಪುರುಷರು • • • •••••MMMM ~MMMMMM MMMMMMMNov ಣೀಭೂತಳಾದಳು. ಕಾರಣ ರಾಜಸ್ತಾನದ ಇತಿಹಾಸದಲ್ಲಿ ಇವಳಿಗೆ ಬಹಳ ಮಹತ್ವ ಬಂದಿದೆ ಇವಳು ಪುತ್ರಶೋಕವನ್ನು ಮರೆತು, ಉದಯಸಿಂಹನ ರಕ್ಷಣೆ ಗಾಗಿ ಮೇವಾಡದ ಗುಡ್ಡಗಾಡು ಪ್ರದೇಶದಲ್ಲಿ ಅಲೆದು, ಬಹು ಸ್ಥಳಗಳಲ್ಲಿ ಆಶ್ರಯಭಿಕ್ಷೆಯನ್ನು ಬೇಡಿದಳು, ಆದರೆ ದುಷ್ಟನಾದ ಬನಬೀರನಿಗೆ ಹೆದರಿ, ಯಾರೂ ಆಶ್ರಯವನ್ನು ಕೊಡಲಿಲ್ಲ. ಕಡೆಯಲ್ಲಿವಳು ದುರಾರೋಹವಾದ ಪರ್ವ ತಾವಳಿಯನ್ನು ದಾಟಿ, ಕಮಲಮೀರಕ್ಕೆ ಹೋದಳು ಅಲ್ಲಿಯ ಅಧಿಪತಿಯಾದ ಅಶ್ವಶಹನನ್ನು ಮರೆಹೊಕ್ಕಳು ಇವನು ತನ್ನ ತಾಯಿಯ ಅಪ್ಪಣೆಯಂತೆ, ಉದಯ ಸಿಂಹನಿಗೆ ಆಶ್ರಯಗೊಟ್ಟು, ಬಹು ಆದರದಿಂದ ಜೋಪಾನಮಾಡಹತ್ತಿದನು. ಅಗ್ನಿಯನ್ನು ಅರಿವೆಯಲ್ಲಿ ಮುಚ್ಚಿಡುವದು ಅಸಾಧ್ಯವಿರುವಂತೆ ಸಂಗ್ರಾಮ ಸಿಂಹನ ವಂಶಜನಾದ ಉದಯಸಿಂಹನನ್ನು ಗುಪ್ತರೀತಿಯಿಂದಿರಿಸುವದು ಸಾಧ್ಯ ವಾಗಲಿಲ್ಲ. ಅದರಿಂದುದಯಸಿಂಹನು ಬಹುಕಾಲ ಕಮಲಮೀರದುರ್ಗದಲ್ಲಿ ಅಡಗಿ ಕೊಂಡಿರುವ ಪ್ರಸಂಗ ಬರಲಿಲ್ಲ ಉದಯಸಿಂಹನ ತೇಜಸ್ವಿತೆಯೂ, ವೀರತ್ವವೂ ಇವನು ಮೇವಾಡದ ರಾಜಕುಮಾರನೆಂಬದನ್ನು ಜನರಿಗೆ ನಾರಿಹೇಳಿದವು ಕಡೆ ಯಲ್ಲಿ ಈ ಸುದ್ದಿಯು ಹೊರಬಿದ್ದ ಬಳಿಕ, ಮೇವಾಡದ ಸರದಾರರು ಸಂತೋಷ ದಿಂದ ಬಂದು, ಉದಯಸಿಂಹನ ದರ್ಶನ ತಕ್ಕೊಂಡರು ಅಶ್ವಶಹನು ಈ ಸರ ದಾರರ ಕೈಯಲ್ಲಿ ರಾಜಪುತ್ರನನ್ನೊಪ್ಪಿಸಿ, ತನ್ನ ಭಾರವನ್ನಿಳಿಸಿಕೊಂಡನು ಸರ ದಾರರು ಕಮಲಮೀರದುರ್ಗದಲ್ಲಿಯೇ ಉದಯಸಿಂಹನ ತಲೆಯ ಮೇಲೆ ರಾಜ ಮಕುಟವನ್ನಿಟ್ಟರು ಅತ್ಯಾಚಾರಿಯಾದ ಬನಬೀರನ ಸರ್ವನಾಶವಾಗುವ ಸಮ ಯವು ಸಮೀಪಿಸಿತು ಬನವೀರನು ಶೀತಲಾ ಎಂಬ ದಾಸಿಯ ಹೊಟ್ಟೆಯಲ್ಲಿ, ಸಂಗ್ರಾಮಸಿಂಹನ ತಮ್ಮನಾದ ಪೃಥ್ವಿರಾಜನಿಂದ ಹುಟ್ಟಿದವನು ಕಾರಣ ಬನಬೀರನು ಹೀನ ಜಾತಿಯವನೆಂದು, ರಜಪೂತರು ಇವನನ್ನು ಗೌರವದೃಷ್ಟಿಯಿಂದ ನೋಡಲಿಲ್ಲ; ಮೇಲಾಗಿ ದುಷ್ಟ ಒನಬೀರನ ಅನ್ಯಾಯದ ಕೃತ್ಯಗಳು ಯಾವತ್ತು ಸರದಾರರಲ್ಲಿ ಕ್ರೋಧವನ್ನುಂಟುಮಾಡಿದವು. ಅದರಿಂದ ಸರದಾರರು ಒಕ್ಕಟ್ಟಾಗಿ, ಬನಜೀರ ನನ್ನು ಸಿಂಹಾಸನದಿಂದ ತಳ್ಳಿ, ವಯಸ್ಸಿನಲ್ಲಿ ಬಂದ ಉದಯಸಿಂಹನನ್ನು ಪಟ್ಟಕ್ಕೆ ಕುಳ್ಳಿರಿಸಬೇಕೆಂದು ಮನಸ್ಸು ಮಾಡಿದರು ಮುಂದೆ ತುಸು ದಿವಸಗಳಲ್ಲಿ ಈ