ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮವೂ ಬಾಲ್ಯವೂ • MMMMM• • • • • • • • • 31 • wwwwww ••••••••• ೧೧• • ಈ ಹಣದಿಂದ ಉದಯಸಿಂಹನ ವಿವಾಹಸಮಾರಂಭವನ್ನು ಕಮಲಮೀರ ದುರ್ಗ ದಲ್ಲಿ ಬಹು ಸಂಭ್ರಮದಿಂದ ಜರಗಿಸಿದರು. ಉದಯಸಿಂಹನು ರಾಣಾನಾದ ಮೇಲೆ ಕೆಲವು ವರುಷಗಳ ತರುವಾಯ ಈ ಶೋಣಿಗುರುವಂಶದ ರಾಣಿಯ ಗರ್ಭದಲ್ಲಿ ಒಬ್ಬ ಮಗನು ಹುಟ್ಟಿದನು. ಅವನೇ ಪ್ರತಾಪಸಿಂಹನು, ಪ್ರತಾಪನು ಮುಂದಿನ ಆಯುಷ್ಯದಲ್ಲಿ ತೋರಿಸಿದ ಅಪ್ರತಿಮ ಪ್ರತಾಪದಿಂದ ತನ್ನ ಹೆಸರನ್ನು ಸಾರ್ಧಕ ಮಾಡಿಕೊಂಡನು. ಉದಯಸಿಂಹನಿಗೆ ಒಟ್ಟಿಗೆ ೨೪ ಮಂದಿ ಗಂಡುಮಕ್ಕಳಿದ್ದರುಇವರಲ್ಲಿ ಪ್ರತಾಪಸಿಂಹನು ಎಲ್ಲಕ್ಕೂ ಹಿರಿಯನು, ಶಕ್ತಸಿಂಹನು ಎರಡನೆಯವನು. ಬಾಲ್ಯ ಕಾಲದಿಂದ ಇವರಿಬ್ಬರು ಆಹಾರ-ವಿಹಾರ-ಶಯನ-ಪ್ರಮೋದಗಳಲ್ಲಿ ಏಕತ್ರರಾಗಿ ರುತ್ತಿದ್ದರು. ಈ ಕಾಲದಲ್ಲಿ ಇವರೀರ್ವರಲ್ಲಿ ಒಂದು ತರದ ದ್ವೇಷಭಾವವುದಯಿ ಸಿತು; ಯಾಕಂದರೆ ಇವರೀರ್ವರು ಭಿನ್ನ ಭಿನ್ನ ಸ್ವಭಾದವರಾಗಿದ್ದರು. ಹೀಗೆ ದ್ದರೂ ಯಾವದೊಂದು ಕಾರ್ಯಕ್ಕೆ ಹೊರಡುವ ಮೊದಲು ಪ್ರತಾಪನು ಶಕ್ತ ನನ್ನು ಕರೆಯುತ್ತಿದ್ದನು. ಶಕ್ತನು ಬಾಡಿದ ಮುಖದಿಂದ ಅಣ್ಣನನ್ನು ಹಿಂಬಾಲಿಸು ತಿದ್ದನು ಒಂದೊಂದು ಸಮಯದಲ್ಲಿ ಸಾಮಾನ್ಯವಾದುದೊಂದು ಕಾರಣಕ್ಕಾಗಿ ಇವರೀರ್ವರಲ್ಲಿ ಭಯಂಕರವಾದ ವಾದ-ವಿವಾದವುಂಟಾಗುತ್ತಿದ್ದಿತು. ಈ ವಾಗ್ಯು ದ್ದದ ಭೀಷಣ ಪರಿಣಾಮವನ್ನು ಚಿಂತಿಸಿ, ಆತ್ಮೀಯ ಜನರು ಕಳವಳ ಹೊಂದು ತ್ತಿದ್ದರು. ತುಸು ದಿವಸಗಳಲ್ಲಿ ಈ ಇಬ್ಬರಲ್ಲಿ ಚಿರಶತ್ರುತ್ವವುಂಟಾಯಿತು. ಇವರ ಬ್ಲೊಬ್ಬನು ರಜಪೂತ ಕುಲಪ್ರದೀಪನು ಇನ್ನೊಬ್ಬನು ರಜಪೂತ ಕುಲಕಲಂಕ ಸ್ವರೂಪನು. ಈ ಇಬ್ಬರು ವೀರಬಾಲಕರ ಬಾಲ್ಯದ ಆಟಗಳಿಂದ, ಇವರ ಭವಿಷ್ಯತ್ಯಾ ಲದ ಜೀವನದ ಕಾರ್ಯಗಳು ಸೂಚಿತವಾಗುತ್ತಲಿದ್ದವು. ಇವರು ಸಾಮಾನ್ಯ ವಿದ್ಯಾರ್ಥಿಗಳಂತೆ ಪಾರಶಾಲೆಯಲ್ಲಿ ಗುರುಮಹಾಶಯರು ಹೇಳುತ್ತಿರುವ ಅಭ್ಯಾ ಸದಲ್ಲಿ ಅನುರಕ್ತರಾಗಿರಲಿಲ್ಲ. ಬರ್ಚೆಯನ್ನೆಸೆಯುವದು, ಕುದುರೆಯನ್ನು ಹತ್ತು ವದು, ಗಹನವನದಲ್ಲಿ ಮೃಗಗಳ ಬೇಟೆಯನ್ನಾಡುವದು ಇವೇ ಮೊದಲಾದ ಕಾರ್ಯಗಳು ಇವರ ಪ್ರೀತಿಯ ವಿಷಯಗಳಾಗಿದ್ದವು. ಭವಿಷತ್ಕಾಲದ ಕಾರ್ಯ ಭೂಮಿಯಲ್ಲಿ ಬೇಕಾಗುತ್ತಿರುವ ವಸ್ತುಗಳಿಗನುರೂಪವಾದ ಪದಾರ್ಥಗಳು ಅವರ