ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಮಹಾರಾಣಾ ಪ್ರತಾಪ ಸಿಂಹ v v v v

  1. /

vvvv vvvvv v v ಬಾಲ್ಯಕಾಲದ ಆಟದ ಒಡವೆಗಳಾಗುವವು. ಮಸಿಯಿಂದ ಜೀವಿಸುವ ಬಂಗಾಲದ ಹುಡುಗರು ದೌತಿಯನ್ನು ತೆಗೆದುಕೊಂಡು ಆಡುವರು. ನಮ್ಮಲ್ಲಿಯ ಹುಡಿಗೆಯರು ಕಸಬರಿಗೆ, ಕಲಗಡಿಗೆ ಮೊದಲಾದವುಗಳನ್ನು ತೆಗೆದುಕೊಂಡು ಆಡುತ್ತಿರುವ ದನ್ನು ನಾವು ನೋಡುತ್ತಿರುವೆವು ಅದರಂತೆಯೇ ನಮ್ಮ ಬಾಲಕರು ತಮ್ಮ ಬಲ ವಿಗನುರೂಪವಾಗಿ-ಭವಿಷ್ಯತ್ಕಾಲದ ಕಾರ್ಯಗಳಿಗನುರೂಪವಾಗಿ ಆಟವಾ ಡುತ್ತಿರುವರು ಅಂತೆಯೇ ಅಸಿಜೀವಿಗಳಾದ ಪ್ರಾಚೀನ ರಜಪೂತ ಬಾಲಕರು ಕತ್ತಿ ಮೊದಲಾದ ಆಯುಧಗಳನ್ನು ತೆಗೆದುಕೊಂಡು ಆಟವಾಡುತ್ತಿದ್ದರು ನಾವು ಶಿಶುವಿನ ಕೈಯಲ್ಲಿ ಕ್ಷುದ್ರವಾದುದೊಂದು ಚೂರಿಯನ್ನು ನೋಡಿದರೆ, ತಸ್ಯ ರಾಗಿ ಅದನ್ನು ಕಸಿದುಕೊಂಡು ಬಿಡುವೆವು, ಆದರೆ ರಜಪೂತರು ಬಾಲಕನ ಕೈಯಲ್ಲಿ ಸಣ್ಣ ಆಯುಧವನ್ನು ಕೊಟ್ಟು, ಅನಂದಾನುಭವವನ್ನು ಪಡೆಯುತ್ತಿ ದ್ದರು ನಾವು ಶಿಶುವಿನ ಶರೀರದಲ್ಲಿ ಸಾಮಾನ್ಯವಾದುದೊಂದು ಗಾಯವನ್ನು ನೋಡಿದರೆ, ಭಯವಿಹ್ವಲರಾಗಿ, ಹುಡುಗರಲ್ಲಿ ಹೆಚ್ಚು ಭಯವನ್ನುಂಟು ಮಾಡು ವೆ, ಆದರೆ ರಜಪೂತ ಮಾತೆಯರು ಶಿಶುವಿನ ರಕ್ತದಿಂದ ಕೂಡಿದ ದೇಹ ವನ್ನು ನೋಡಿ, ಬಾಲಕನ ವೀರತ್ವವನ್ನು ಚಿಂತಿಸಿ, ಆನಂದದಿಂದ ಬಾಲಕನ ಮುಖವನ್ನು ಚುಂಬಿಸುತ್ತಿದ್ದರು ಈ ತರದ ಅನುಕೂಲ ಪರಿಸ್ಥಿತಿಯಲ್ಲಿ ಬಳೆದ ಬಾಲಕರು ಮುಂದೆ ವೀರತ್ವದಲ್ಲಿ ಹೆಸರು ಪಡೆಯುವದರಲ್ಲಿ ಸಂದೇಹವಿಲ್ಲ. ಈ ತರದ ಆಜನ್ಮ ನೀರಮಹಾನುಭವರ ಜಾತಿಯು ಜಗತ್ತಿನ ಇತಿಹಾಸದಲ್ಲಿ ತೀರ ವಿರಳವೆಂದು ಹೇಳಬಹುದು ಪ್ರತಾಪ-ಶಕ್ತರೀರ್ವರೂ ವೀರಧರ್ಮಕ್ಕನುಸಾರವಾಗಿ ಉಪಯುಕ್ತ ಶಿಕ್ಷಣ ವನ್ನು ಹೊಂದಿದ್ದರು. ಅದರಿಂದಿವರು ಮಹಾವೀರರೂ, ಪರಮಸಾಹಸಿಗಳೂ ಆಗಿದ್ದರು ಕಾರಣ ಇವರು ವಿಪತ್ತನ್ನು ಲಕ್ಷಿಸುತ್ತಿರಲಿಲ್ಲ. ಪ್ರತಾಪನು ಗಂಭೀ ರನೂ, ಉದಾರನೂ ಆಗಿದ್ದನು, ಶಕ್ತನು ಕರೋರನೂ, ಉಚ್ಚಂಖಲನೂ ಆಗಿ ದ್ದನು ಪ್ರತಾಪನ ಸ್ವದೇಶಭಕ್ತಿಯು ಅಪರಿಚಿತವಾಗಿದ್ದಿತು, ಮತ್ತು ಇವನ ಪ್ರತಿ ಜೈಯು ದೃಢವಾಗಿದ್ದಿತು ಇವನ ವಿಸ್ತಾರವಾದ ಹಣೆಯಲ್ಲಿಯೂ, ವಿಶಾಲ ಕಣ್ಣು ಗಳಲ್ಲಿಯೂ ಈ ಗುಣಗಳು ಒಡೆದು ಕಾಣುತ್ತಿದ್ದವು ಉಗ್ರಸ್ವಭಾವದವನಾದ ಶಕ್ತ ನಲ್ಲಿ ಜೀವಿತದ ವಿಶೇಷ ಉದ್ದೇಶವಾವುದೂ ಇದ್ದಿಲ್ಲವೆಂದು ಬೋಧೆಯಾಗು ತಿದ್ದಿತು.