ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿತೋಡ ನಗರ ೩೫ + Mvv vvv - A PA P h ಯಾಗದಿದ್ದರೂ, ಇದರ ಸೌಂದರ್ಯವು ಅತುಲನೀಯವಾಗಿರುವದರಲ್ಲಿ ಸಂದೇಹ ವಿಲ್ಲ 8 ಕುಂಭನ ತಂದೆಯಾದ ರಾಣಾ ಮುಕುಲನು ಮುಕುಲಜಿಯ ಮಂದಿರ ವನ್ನು ಕಟ್ಟಿಸಿದ್ದಾನೆ. ಮತ್ತು ಕುಂಭನ ಜೈನಧರ್ಮಾವಲಂಬಿಯಾದ ಕೋಶಾಧ್ಯ ಕ್ಷನು ಶಿಂಗಾರಚೌರಿಯೆಂಬ ಮಂದಿರವನ್ನು ಕಟ್ಟಿಸಿದ್ದಾನೆ. ಇವನ್ನುಳಿದು ಚಿತೋ ಡದ ಶೋಭೆಯನ್ನು ಬಳೆಸಿದ ಮಂದಿರಗಳು ಸದ್ಯಃಕಾಲದಲ್ಲಿ ಇಲ್ಲವಾಗಿವೆ. ಚಿತೋಡದಲ್ಲಿ ಇರುವ ವಸ್ತುಗಳಿಗಿಂತಲೂ, ಇದ್ದ ವಸ್ತುಗಳ ಸೃತಿಯು ದರ್ಶಕ ಮಾತ್ರರನ್ನು ಮುಗ್ಧಗೊಳಿಸುತ್ತಿರುವದು. ಪರಾಕ್ರಮಿಗಳಾದ ಶತ್ರುಗಳು ಚಿತೋಡವನ್ನು ಬಹುಸಾರೆ ಆಕ್ರಮಿಸಿ ಧ್ವಂಸಮಾಡಿದ್ದಾರೆ ಚಿತೋಡದ ರಕ್ಷಣೆಗಾಗಿ ಮಾಡಲ್ಪಟ್ಟ ದೊಡ್ಡ ಯುದ್ಧದ ಸಿದ್ದತೆ, ಭಯಂಕರವಾದ ಯುದ್ದ, ರೋಮಾಂಚವನ್ನುಂಟುಮಾಡತಕ್ಕ ಹತ್ಯಾ ಕಾಂಡ, ಅಮಾನುಷಿಕ ಆತ್ಮಯಜ್ಞಗಳು, ಜಗತ್ತಿನ ಯಾವ ದೇಶದ ರಾಜಧಾನಿಯ ಸಂರಕ್ಷಣೆಯ ಸಲುವಾಗಿಯೂ ಮಾಡಲ್ಪಟ್ಟಿಲ್ಲವೆಂದು ನಿಸ್ಸಂದೇಹವಾಗಿ ಹೇಳ ಬಹುದು ಚಿತೋಡದಲ್ಲಿ, ದೇಶಕ್ಕಾಗಿ ಪ್ರಾಣತ್ಯಾಗಮಾಡಿ ಹೋದ ಮನುಷ್ಯ ರಿಲ್ಲದ ಮನೆಗಳಿಲ್ಲ, ಸ್ವದೇಶರಕ್ಷಣೆಯ ಸಲುವಾಗಿ ಯುದ್ಧ ಭೂಮಿಗಳಾಗದ ಘಟ್ಟದ ಮಾರ್ಗಗಳಿಲ್ಲ; ಸ್ವದೇಶಪ್ರೇಮಿಯ ಉಷ್ಕರಕ್ತದಿಂದ ರಂಜಿತವಾಗದ ಅಂಗುಲಿಪ್ರಾಯವಾದ ಪರ್ವತಪ್ರದೇಶವಿಲ್ಲ. ಕಲ್ಲುಗಳಿಂದ ನಿರ್ಮಿತವಾದ ಅಸಂಖ್ಯ ಭಗ್ನ ಸ್ತಂಭಗಳು ಈಗಲೂ ಇದ್ದು, ಸಾವಿರಾರು ವೀರಪುರುಷರ ಕೀರ್ತಿ ಕಥೆಯನ್ನು ಸಾರಿ ಹೇಳುತ್ತಿರುವವು, ಆದರೆ ಈ ಅಲ್ಪಸಂಖ್ಯಾಕವಾದ ಕಂಬಗಳು ರಜಪೂತವೀರರ ಕೀರ್ತಿ-ರಕ್ಷಣೆಯ ಕೆಲಸವನ್ನು ಸಂಪೂರ್ಣವಾಗಿ ಮಾಡಲಾ 8 ಕೀರ್ತಿ ಸ್ತಂಭದ ಶಿಲಾಲಿಪಿಯಲ್ಲಿ ಬರೆದದ್ದೇನಂದರೆ - « ಪುಣ್ಯ ಪಂಚದಶೇ ಶತೇ ವ್ಯಸಗತೇ ಪಂಚಾಧಿಕೇ ವತ್ಸರೇ | ಮಾಘ ಮಾಸಿ ಬಲಕ- ಪಕ್ಷ ದಶಮಿ ದೇವೇಜ್ಯ ಪುಷ್ಯಾಗಮೇ || ಕೀರ್ತಿ ಸ್ತಂಭನಕಾರಯನ್ನರಪತಿ ಚಿತ್ರಕೂಟಾಬಲ್ಯ | ನಾನಾ ನಿರ್ಮಿ ತನಿರ್ಜರಾವತರಣೆರ್ಮೆರೋರ್ಹ ಸ೦ತ೦ ಶ್ರೀಯಮ್ || ೨೨ ೧೫೦ ೫ನೇ ಸಂವತದ ( ಕ್ರಿ ಶ ೧೪೪೮ ) ಮಾಘ ಮಾಸದ ಶುಕ್ಲ ಪಕ್ಷದ ದಶಮಿ ಗುರು ವಾರ ದಿವಸ, ಪುಷ್ಯ ನಕ್ಷತ್ರದಲ್ಲಿ ಚಿತ್ರ ಕೂಟ ಪರ್ವತದಲ್ಲಿ ಇದು ಅರಸನಿಂದ ಸ್ಥಾಪಿತವಾಯಿತು, ಅನೇಕ ದೇವಮೂರ್ತಿಗಳ ನಿರ್ಮಾಣವಿರುವದರಿಂದಿದು, ಮೇರುಪರ್ವತದ ಶೋಭೆಯನ್ನು ಜಯಿಸಿದ್ದಾಗಿದೆ