ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ ೩೭ ಚಿತೋಡವು ಮೂರುವರೆ ಸಾರೆ ನಾಶಮಾಡಲ್ಪಟ್ಟಿತೆಂದು ರಜಪೂತರು ಹೇಳುತ್ತಿರುವರು. ದಿಲ್ಲಿಯ ಅರಸನಾದ ಅಲ್ಲಾವುದ್ದೀನನು ಮೊದಲು ಚಿತೋ ಡದ ಮೇಲೆ ದಂಡೆತ್ತಿ ಬಂದನು. ಈ ಸಮಯದಲ್ಲಿ ಲಕ್ಷಣಸಿಂಹನು ಅರಸನಾ ಗಿದ್ದನು. ಇವನು ಚಿಕ್ಕ ವಯಸ್ಸಿನವನಿದ್ದುದರಿಂದ, ಇವನ ಕಕ್ಕನಾದ ಭೀಮ ಸಿಂಹನು ರಾಜ್ಯ ಕಾರಭಾರ ನಾಗಿಸುತ್ತಿದ್ದನು ಭೀಮಸಿಂಹನ ಹೆಂಡತಿಯಾದ ಸದ್ದಿನಿಯು ಅಸಾಮಾನ್ಯ ಸುಂದರಿಯಾಗಿದ್ದಳು. ಅಲ್ಲಾವುದ್ದೀನನು ಸದ್ದಿನಿ ಯನ್ನು ದೊರಕಿಸುವದಕ್ಕಾಗಿ ದಂಡೆತ್ತಿ ಬಂದಿದ್ದನು. ಈ ಸಮಯದಲ್ಲಿ ಕಪಟ ಯಾದ ಅಲ್ಲಾವುದ್ದೀನನ ವಿಶ್ವಾಸಘಾತಕತನದಿಂದ ಭೀಮಸಿಂಹನು ಬಂದಿಯಾ ದನು, ತರುವಾಯ ಸತೀ ಪದ್ವಿನಿಯ ಸಾಹಸದ ಕೌಶಲದಿಂದ ಪಾರಾಗಿ ದಿಲ್ಲಿಗೆ ಹೋದನು. ಈ ವೇಳೆಯಲ್ಲಿ ಗೋರಾಸಿಂಹನೂ, ಹನ್ನೆರಡು ವರುಷದ ಬಾಲಕ ನಾದ ಬಾದಲನೂ ಬಹು ಪರಾಕ್ರಮವನ್ನು ತೋರಿಸಿದರು. ಇದು ಚಿತೋಡದ ಅರ್ಧನಾಶವ, ಯಾಕಂದರೆ ಈ ನಾರೆ ಚಿತೋಡವು ಶತ್ರುಗಳ ವಶವಾಗದಿ ದ್ದರೂ, ರಜಪೂತ ಸೈನ್ಯದಲ್ಲಿಯ ಅಸಂಖ್ಯವೀರರು ಮೃತ್ಯುಮುಖದಲ್ಲಿ ಬಿದ್ದರು. ಮುಂದೆ ತುಸು ದಿವಸಗಳಲ್ಲಿ ಅಲ್ಲಾವುದ್ದೀನನು, ಹಿಂದಿನ ಅಪಜಯದ ಕಲಂಕ ವನ್ನು ಕಳೆದುಕೊಳ್ಳುವದಕ್ಕಾಗಿ, ಬಹು ಸೇನೆಯೊಡನೆ ಚಿತೋಡವನ್ನಾಕ್ರಮಿಸಿ ದನು. ಈ ಸಾರೆ ಚಿತೋಡವು ರಕ್ಷಣೆಹೊಂದಲಿಲ್ಲ ರಾಣಾ ಲಕ್ಷಣಸಿಂಹನೂ, ಅವನ ಹನ್ನೊಂದುಮಂದಿ ಮಕ್ಕಳೂ, ಅಸಂಖ್ಯ ರಜಪೂತವೀರರೂ, ಅನೇಕ ವೀರರಮಣಿಯರೂ ಆತ್ಮಯಜ್ಞವನ್ನು ಮಾಡಿದರು; ಇದರಿಂದ ಚಿತೋಡವು ಸ್ಮಶಾನಭೂಮಿಯಾಗಿ ಪರಿಣಮಿಸಿತು (೧೩೦೩ ). ಇದು ಚಿತೋಡದ ಮೊದಲ ನೆಯ ಪೂರ್ಣನಾಶವು, ರಾಣಾ ರಾಯಮಲ್ಲನ ಕಾಲದಲ್ಲಿ ಅವನ ಮಗನಾದ ಪೃಥ್ವಿರಾಜನು ಗುಜರಾಧದ ಮುಜಫರಶಹನನ್ನು ಬಂದಿಯನ್ನಾಗಿಮಾಡಿ, ಚಿತೋ ಡಕ್ಕೆ ತಂದನು. ಈ ಸೇಡನ್ನು ತೀರಿಸಿಕೊಳ್ಳುವದಕ್ಕಾಗಿ, ರಾಣಾ ಸಂಗನ ಮಗ ನಾದ ವಿಕ್ರಮಜಿತುವಿನ ಕಾಲದಲ್ಲಿ ಗುಜರಾಧದ ಬಹದ್ದೂರಶಹನು ಚಿತೋಡವ ನಾಕ್ರಮಿಸಿದನು (೧೫೩೩ ), ಈ ಸಾರೆಯೂ ಭಯಂಕರ ಯುದ್ಧವಾಯಿತು. ಚಿತೋಡದ ಭೂಮಿಯಲ್ಲಿ ವೀರರ ರಕ್ತವು ಕಾವಲಿಯಾಗಿ ಹರಿಯಿತು. ಈ ಯುದ್ದದಲ್ಲಿ ೩೨ ಸಾವಿರ ರಜಪೂತವೀರರು ವೀರಸ್ವರ್ಗವನ್ನೈದಿದರು. ಮತ್ತು ೧೩ ಸಾವಿರ ಲಲನೆಯರು ಜೋಹಾರ ಮಾಡಿದರು. ಇದು ಚಿತೋಡದ ಎರಡ