ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ. ಕೋಟೆಯನ್ನು ಮುತ್ತುವದಕ್ಕೂ, ಸಂರಕ್ಷಿಸುವದಕ್ಕೂ ವಿಶೇಷ ದಕ್ಷರಾಗಿ ದ್ದರು. 1 ಉತ್ತರ ದಿಕ್ಕಿನ ಕೋಟೆಯ ಕೆಳಭಾಗದಲ್ಲಿ ಹೋಗುವದಕ್ಕೆ ಸಾಧ್ಯವಿದ್ದು ದರಿಂದ, ಆ ದಿಕ್ಕಿನಲ್ಲಿ ಮೊಗಲರು ಮೊದಲು ಸುರಂಗತೋಡುವ ಉದ್ಯೋಗ ವನ್ನು ನಡೆಸಿದರು. ಮುಖ್ಯವಾಗಿ ಕಬೀರಖಾನನು ಈ ಕೆಲಸದ ಭಾರವನ್ನು ವಹಿಸಿದ್ದನು. ಪೂರ್ವ-ಪಶ್ಚಿಮ ದಿಕ್ಕುಗಳಲ್ಲಿ ಕೋಟೆಯ ಕೆಳಭಾಗಕ್ಕೆ ಹೋಗ ಲಿಕ್ಕೆ ಸಾಧ್ಯವಿಲ್ಲದ್ದರಿಂದ, ಈ ದಿಕ್ಕುಗಳಲ್ಲಿ ಸುರಂಗವನ್ನು ರಚಿಸುವದಕ್ಕೆ ಅಕಬ ರನು ಬೇರೊಂದು ಮಾರ್ಗವನ್ನವಲಂಬಿಸಿದನು. ಇದಕ್ಕಾಗಿ ಅವನು ರಜಪೂತರ ಬಾಣಗಳು ಮುಟ್ಟುವ ಸ್ಥಗಳಗಳಿಂದ ಕೋಟೆಯ ಕೆಳಭಾಗದವರೆಗೆ ಸುರಂಗದ ಮಾರ್ಗಗಳನ್ನು ರಚಿಸುವ ಪ್ರಯತ್ನ ಮಾಡಿದನು. ಎರಡೂ ದಿಕ್ಕುಗಳಲ್ಲಿ ಕಲ್ಲುಗ ಚುಗಳಿಂದ ಅಂಕುಡೊಂಕಾದ ಗೋಡೆಗಳನ್ನು ವಕ್ರಾಕಾರವಾಗಿ ಕಟ್ಟಿ, ನಡುವೆ ಹಾದಿಯನ್ನು ಮಾಡಿದರು. ಈ ಗೋಡೆಗಳ ಮೇಲೆ ಶತ್ರುಗಳ ಗುಂಡು ಬಾಣಗಳು ಪಾರಾಗಿ ಬರದಂಧ ಹೊದಿಕೆಯನ್ನು ಹಾಕಿದ್ದರು. ಈ ಮಾರ್ಗವು ಹತ್ತು ಜನ ಅಶ್ವಾರೋಹಿಗಳು ಒಮ್ಮೆಲೇ ನಡೆದು ಹೋಗುವಷ್ಟು ವಿಸ್ತಾರವಾಗಿತ್ತು; ಇದರ ಗೋಡೆಗಳು ಆನೆಯನ್ನು ಹತ್ತಿಕೊಂಡು ಹೋಗಲಿಕ್ಕೆ ಬರುವಷ್ಟು ಎತ್ತರವಾಗಿ ದ್ದವು. ಈ ಮಾರ್ಗಗಳನ್ನು ಮಾಡುವದಕ್ಕಾಗಿ ಅಕಬರನು ೫೦೦೦ ಜನರನ್ನು ಹಚ್ಚಿದನು. ರಜಪೂತರಿಂದ ಈ ಕೂಲಿಕಾರರ ರಕ್ಷಣೆ ಮಾಡುವದಕ್ಕೂ ಅಕಬ ರನು ಉತ್ತಮವಾದ ವ್ಯವಸ್ಥೆಯನ್ನು ಮಾಡಿಸಿದ್ದನು. ಹೀಗಿದ್ದರೂ ದಿನಾಲು ಸುಮಾರು ೨೦೦ ಜನ ಕೂಲಿಕಾರರು ರಜಪೂತರ ಗುಂಡು ಬಾಣಗಳಿಗೆ ಆಹುತಿ - 1 ಹಿಂದೂ ಜನರು ಈ ಸುರಂಗಾದಿಗಳನ್ನು ನಿರ್ಮಿಸುವ ಕಲೆಯನ್ನು ದೊಗಲರಿಂದಾ ಗಲಿ, ಯುರೋಪಿಯನರಿಂದಾಗಲಿ ಕಲಿತರೆಂದಲ್ಲ, ಒಬ್ಬ ವಿಖ್ಯಾತನಾದ ಬ್ರಿಟಶ ಸೇನಾಪತಿಯು ಬರೆದಿದ್ದಾನೆ-I: The art of mining and the costruction of military field-works seem to have been familiar to the nations of India for mangages The skill they displayed at the siege of Ahmadnagar in 1585, against the Moghuls, and in tಲುose of kerowly in 1807, and of Bharatpur 11 1826, against British troops, from whom they could not have harned the science of mining, bespeaks the fact ” Brigges (Revi8btab, Vol II, P. 280.