ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತ್ರದ M ಲಿಲ್ಲ. ಸಾಮಂತಸರದಾರರ ಅಗ್ರಹದಿಂದ ರಾಮಶಹನೊಡನೆ ಪ್ರತಾಪಸಿಂಹನು ಈ ಮೊದಲೇ ಉದಯಪುರಕ್ಕೆ ಹೋಗಿದ್ದನು. ದುರ್ಗದಲ್ಲಿ ಚಿತೆಗಳು ಉರಿಯುತ್ತಿರುವದನ್ನು ನೋಡಿ, ಭಗವಾನದಾಸನು ಇದೇ ಜೋಹಾರವ್ರತವೆಂದೂ, ಇನ್ನು ರಜಪೂತರು ತೀವ್ರವೇ ಯುದ್ಧಕ್ಕಾಗಿ ಹೊರಬೀಳುವರೆಂದೂ ಅಕಬರನಿಗೆ ಹೇಳಿದನು. ಬಾದಶಹನು ಕೋಟೆಯನ್ನಾ ಕ್ರಮಿಸುವದಕ್ಕೆ ಸೈನಿಕರಿಗೆ ಅಪ್ಪಣೆಯನ್ನು ಕೊಟ್ಟನು. ಸೈನಿಕರು ಉತ್ಸಾಹಿಗಳಾಗಿ ನಾಲ್ಕೂ ದಿಕ್ಕುಗಳಿಂದ ಕೋಟೆಯನ್ನಾಕ್ರಮಣಮಾಡಿದರು. ಬೆಳಗಾಗುವವರೆಗೆ ಯುದ್ಧವು ನಡೆಯಿತು. ಚಿತೋಡದ ರಕ್ಷಣೆಗಾಗಿ ಇದು ಕಡೆಯ ಪ್ರಯತ್ನ ವು. ರಜಪೂತರು ಈ ತಮ್ಮ ಕಡೆಯ ಪ್ರಯತ್ನದಿಂದ ಯಾವ ಲಾಭವೂ ಆಗುವದಿಲ್ಲೆಂಬ ದನ್ನು ಬಲ್ಲವರಾಗಿದ್ದರು. ಹೀಗಿದ್ದರೂ ಅವರು ಬಹು ಪರಾಕ್ರಮದಿಂದ ಕಾದಿ ದರು. ಅವರಿಗೆ ಜೀವವನ್ನುಳಿಸಿಕೊಂಡು ಹೋಗುವ ಆಲೋಚನೆಯಿರಲಿಲ್ಲ; ಯಾಕಂದರೆ ಅವರು ಮೃತ್ಯುದೇವತೆಯನ್ನಾಲಂಗಿಸುವದಕ್ಕಾಗಿಯೇ ಬಂದಿದ್ದರು. ಅಗಣಿತ ಶವಗಳು ರಾಶಿರಾಶಿಯಾಗಿ ಬಿದ್ದವು. ಇದರಲ್ಲಿ ಯಾರು ಪರಾಜಿತರಾದ ರೆಂಬದನ್ನು ಹೇಗೆ ಹೇಳಬೇಕು? ಯಾಕಂದರೆ ಪರಾಜಯದ ಫಲವನ್ನನುಭವಿಸ ಲಿಕ್ಕೆ ಯಾವ ರಜಪೂತನೂ ಜೀವಂತವಾಗಿ ಉಳಿದಿರಲಿಲ್ಲ. ಒಬ್ಬ ರಜಪೂತನಾ ದರೂ ಓಡಿಹೋಗಿ, ಆತ್ಮರಕ್ಷಣೆಗೆ ಪ್ರಯತ್ನಿಸಿದನೆಂದು, ಶತ್ರುಪಕ್ಷದ ಜನರಿಂದ ಬರೆಯಲ್ಪಟ್ಟ ಇತಿಹಾಸಗಳಲ್ಲಿಯೂ ಕೂಡ ದೊರೆಯುವದಿಲ್ಲ. ಬೆಳಗಾಗುತ್ತಲೇ ಮೊಗಲರ ಅನೇಕ ಉತ್ತಮವಾದ ಆನೆಗಳು, ಶತ್ರುಗಳ ಶವಗಳನ್ನು ದಾಟುತ್ತ ನಡೆದವು; ಅಸಂಖ್ಯ ಮೊಗಲಸೈನಿಕರು ಕೋಟೆಯ ಕಡೆಗೆ ನಡೆದರು; ಬಾದಶಹನು ಆನೆಯನ್ನೇರಿ ಇವರನ್ನು ಹಿಂಬಾಲಿಸಿದನು. ಈ ಸಮ ಯದಲ್ಲಿಯೂ ಸಹ, ಉಳಿದ ಅತ್ಯಲ್ಪ ರಜಪೂತರು ತಮ್ಮ ಅತ್ಯದ್ಭುತ ರಣಕೌಶಲ್ಯ ವನ್ನು ತೋರಿಸುತ್ತಿರುವದನ್ನು ಅಕಬರನು ಕಂಡನು. ವೀರರಾದ ರಜಪೂತರ ಕತ್ತಿಯ ಹೊಡತಗಳಿಂದ ಅನೆಗಳ ಸೊಂಡೆಗಳು ಕಡಿದುಬೀಳುತ್ತಿದ್ದವು. ತುಸು ವೇಳೆಯಲ್ಲಿ ಈ ಉಳಿದಿರುವ ಅಲ್ಪ ಜನರೂ ಸತ್ತು ಹೋದರು. ಯುದ್ಧವು ಸಮಾಪ್ತ ವಾಯಿತು. ಮಾರ್ಗವು ಕೇವಲ ಶವಗಳಿಂದ ಜಬಿಹೋಗಿತ್ತು. ಈ ವೇಳೆಯಲ್ಲಿ ಅಕಬರನು ಗಾಯಾಳುಗಳಾದ ರಜಪೂತಸೈನಿಕರ ಮೇಲೆ ನಡೆಸಿದ ಅತ್ಯಾಚಾರ