ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ. ೧೧೧ ಪ್ರಾತಃಕಾಲದಿಂದ ಮಧ್ಯಾನದವರೆಗೆ ಭಯಕಂರ ಕೊಲೆಯು ನಡೆಯಿತು. ಈ ಅತ್ಯಾಚಾರದಲ್ಲಿ ಸುಮಾರು ೩೦ ಸಾವಿರ ಜನರು ಮರಣಹೊಂದಿದರು. 8 ಚಿತೋಡದ ಭೂಮಿಯಲ್ಲಿ ರಕ್ತದ ಕಾಲಿವೆಗಳು ಹರಿದವು. ರಾಶಿರಾಶಿ ಶವಗಳು ಕಂಡಕಂಡೆಡೆಯಲ್ಲಿ ಬಿದ್ದು ಕೊಳೆಯಹತ್ತಿದವು. ಅರಮನೆ, ಗುಡಿಗಳ ಹತ್ತರ ಮೃತದೇಹಗಳ ರಾಶಿಯು ಪರ್ವತಾಕಾರವಾಗಿ ಬಿದ್ದಿತು. ಯಾರ ಅಂತೇಮಿ, ಕ್ರಿಯೆಯೂ ಆಗಲಿಲ್ಲ. ಅದನ್ನು ಯಾರು ಮಾಡಬೇಕು ? ಕೆಲವು ದಿವಸಗಳವರೆಗೆ, ರಜಪೂತರ ಶ್ರೇಷ್ಠವಾದ ಆ ರಾಜಧಾನಿಯು ಕೊಳೆತ ಹೆಣಗಳ ದುರ್ಗಂಧದಿಂದ ಕೂಡಿ, ನರಿನಾಯಿ ಮೊದಲಾದ ಪ್ರಾಣಿಗಳ ಉತ್ಸವಕ್ಷೇತ್ರವಾಯಿತು. ಸ್ವಾತಂತ್ರ್ಯ ದ ಲೀಲಾಭೂಮಿಯೂ, ದೈವೀಪ್ರಕೃತಿಯ ರಾಜಪುತ್ರರ ಆರಾಧ್ಯ ಜನನಿಯೂ ಆದ ಚಿತೋಡ ಮಹಾನಗರವು ಇಂದು ಸ್ಮಶಾನವಾಗಿ ಪರಿಣಮಿಸಿತು. ಅಕಬರಬಾದಶಹನ ಸ್ತುತಿಯಲ್ಲಿ ತನ್ನ ಲೆಕ್ಕಣಿಕೆಯನ್ನು ಪ್ರಯೋಗಿಸಿದ ವಿಖ್ಯಾತ ಇತಿಹಾಸಕಾರನಾದ ಅಬಲ್‌ಫಜಲನೂ ಕೂಡ, ಅಕಬರನ ಈ ಅತ್ಯಾ ಚಾರದ ಕಲಂಕವನ್ನು ಮುಚ್ಚಲಿಕ್ಕೆ ಸಮರ್ಥನಾಗಲಿಲ್ಲ. ಇವನು ಐತಿಹಾಸಿಕ ಸತ್ಯವನ್ನು ಮುಚ್ಚಿಡದೆ ಸ್ಪಷ್ಟವಾಗಿ ಹೇಳಿದ್ದಾನೆ - ಅಲ್ಲಾವುದ್ದೀನನು ಕೋಟೆ ಯನ್ನಾಕ್ರಮಿಸಿದ ತರುವಾಯ, ಒಕ್ಕಲಿಗರು ಯುದ್ಧದಲ್ಲಿ ಸೇರದೆ ಇದ್ದುದರಿಂದ, ಅವರನ್ನು ಕೊಲ್ಲಲಿಲ್ಲ ಆದರೆ ಈ ಸಾರೆ ಒಕ್ಕಲಿಗರು ಯುದ್ಧಕ್ಕೆ ಸಹಾಯ ಮಾಡಿ ದ್ದನ್ನು ತಿಳಿದು, ಅಕಬರನು ಅವರ ಯಾವ ಮಾತನ್ನೂ ಕೇಳದೆ, ಯಾವತ್ತರನ್ನು ತಿಳಿದು, ಒಬ್ಬ ರಜಪೂತನ ಉಪವೀತದ ಭಾರವು ಒಂದು ತೊಲಿಯೆಂದು ಭಾವಿಸಿದರೆ, ಈ ಯುದ್ಧದಲ್ಲಿ ಸುಮಾರು ೨೫೦೦೦ ಜನ ರಜಪೂತರು ಮೃತ್ಯು ಮುಖದಲ್ಲಿ ಬಿದ್ದರೆಂದು ಹೇಳ ಬಹುದು ಈ ಯುದ್ಧಭೂಮಿಯಲ್ಲಿ ೪೦ ಸಾವಿರ ಜನರು ಸತ್ತರೆಂದು ಅಬಲ್ ಫಜಲ ಮೊದ ಲಾದ ಇತಿಹಾಸಕಾರರು ಹೇಳಿದ್ದಾರೆ ಈ ಸಂಗತಿಯನ್ನು ಚಿರಸ್ಮರಣೀಯವಾಗಿ ಮಾಡುವದಕ್ಕೆ ಅಕಬರನು ತನ್ನ ರಾಜಕೀಯ ಆಜ್ಞಾಪತ್ರದ ಹಿಂಭಾಗದಲ್ಲಿ ೬೪| ಈ ಸಾಂಕೇತಿಕ ಚಿನ್ನವನ್ನು ಬರೆಯುವ ಪದ್ಧತಿಯನ್ನು ಪ್ರಚಾರದಲ್ಲಿ ತಂದನೆಂದು ವದಂತಿಯದೆ, ನಿರ್ದಿಷ್ಟ ವ್ಯಕ್ತಿಯ ಹೊರತು ಅನ್ಯರು ಪತ್ರವನ್ನು ಒಡೆದಲ್ಲಿ, ಅವರಿಗೆ ಚಿತೋಡಧ್ವಂಸದ ಸಾಹಬರುವದಂದು ಇದರ ಅರ್ಥವು Rajasthan Vol. I, P. 268, 8 Akbarnama Vol. II, P. 475, Tabakat, Elliot Vol. V P. 328, 174. Badaoni kowe P, 107,