ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಮಹಾರಾಣಾ ಪ್ರತಾಪಸಿಂಹ vvvv v レレレレッソマハvvvvvvvvvvvvv V V /VY' ಕೊಲ್ಲುವ ಅಪ್ಪಣೆ ಮಾಡಿದನು. * ” ಕೇವಲ ಇಷ್ಟೇ ಅಲ್ಲ; ಅಕಬರನ ಸೈನಿ ಕರು ಚಿತೋಡದ ಮೇಲೆ ಪಾಪದ ಅತ್ಯಾಚಾರ ನಡೆಸಿದರು; ಮೂಲ್ಯವಾನ ವಸ್ತುಗಳನ್ನು ಸುಲಿಗೆ ಮಾಡಿದರು; ತೆಗೆದುಕೊಂಡುಹೋಗಲಿಕ್ಕೆ ಬರದವುಗಳನ್ನು ನಾಶಮಾಡಿದರು. ಅಲ್ಲಾವುದ್ದೀನನು ಚಿತೋಡದ ಉತ್ತಮ ಮಂದಿರಗಳನ್ನು ನಾಶಮಾಡುವ ಮನಸು ಮಾಡಲಿಲ್ಲ. ಬಹದ್ದುರಶಹನು ಈ ತರದ ಕೆಲಸ ಮಾಡ ಲಿಕ್ಕೆ ಅವಕಾಶವನ್ನು ಹೊಂದಲಿಲ್ಲ. ಆದರೆ ಅಕಬರನು ಚಿತೋಡದ ಯಾವತ್ತು ಉತ್ತಮ ಮಂದಿರಗಳನ್ನೂ, ದೇವಾಲಯಗಳನ್ನೂ ನಾಶಮಾಡಿ, ಚಿತೋಡದ ಶೋಭೆಯ ವಸ್ತುಗಳನ್ನು ಸುಲಿಗೆಮಾಡಿ, ಇಲ್ಲವೆ ನಾಶಮಾಡಿ, ತನ್ನ ಪಾಷಾಣ ಹೃದಯದ ಪರಿಚಯವನ್ನು ಂಟುಮಾಡಿಕೊಟ್ಟನು. ಇವನು ಚಿತೋಡದ ಅನೇಕ ಉತ್ತಮವಾದ ವಸ್ತುಗಳನ್ನು ತೆಗೆದುಕೊಂಡುಹೋಗಿ ಆಗ್ರಾ ರಾಜಧಾನಿಯ ಶೋಭೆಯನ್ನು ಬೆಳೆಸಿದನು. + ಅಲ್ಲಾವುದ್ದೀನನು ಓರ್ವ ಹಿಂದೂ ಮನುಷ್ಯನ ಕೈಯಲ್ಲಿ ಚಿತೋಡದ ಅಧಿಕಾರವನ್ನು ಒಪ್ಪಿಸಿ ಹೋದನು; ಆದರೆ ಅಕಬರನು ಸೇನಾಪತಿಯಾದ ಅಸಫಖಾನನ್ನು ಚಿತೋಡದ ಅಧಿಕಾರಿಯನ್ನಾಗಿ ಮಾಡಿದನು. ಅಲ್ಲಾವುದ್ದೀನನ ತರುವಾಯ ಚಿತೋಡದ ಪುನರುದ್ಧಾರವಾಯಿತು; ಆದರೆ ರಜ ಪೂತರು ಸಂಪೂರ್ಣವಾಗಿ ನಾಶರಾದ್ದರಿಂದ ಅಕಬರನ ತರುವಾಯ ಚಿತೋಡದ ಪುನರುದ್ಧಾರದ ಯಾವ ಆಶೆಯೂ ಉಳಿಯಲಿಲ್ಲ. ಚಿತೋಡದ ಇತಿಹಾಸವು ಇಲ್ಲಿಗೆ ಸಮಾಪ್ತವಾಯಿತು. ಯಾವತ್ತು ಜಾತಿಗಳ ಮೇಲೆ ಸಮದೃಷ್ಟಿಯನ್ನಿಟ್ಟು, ದಯಾಶಾಲಿಯೆಂದು ಹೆಸರಾಗಿ, ಭಾರತೀಯರಿಗೆ ಪ್ರಿಯನಾದ ಅಕಬರನ ಚರಿತ್ರೆ ಯಲ್ಲಿ ಚಿತೋಡದ ಅತ್ಯಾಚಾರವು ಒಂದು ದೊಡ್ಡ ಕಲಂಕವಾಗಿದೆ. ಅವನು

  • The reason of so many being killed was that on the former occasion, when Sultan Allauddin took the fort. The peasantry were not put to death as they had not engaged in fighting. But on this occasion they had shown great zeal and activity. Their excuses after the emergence of victory were of uo avail and orders were given for a general maassacre. Akbarnana Beveridge Vol II, P. 475.

- + ಈಗ ಆmದುರ್ಗದ ಮಧ್ಯದಲ್ಲಿ, ದಿವಾಣ. ಇ. ಅಮದ ಹಿಂದುಗಡೆಯಲ್ಲಿರುವ ಮಚ್ಚಿ ಭವನದ ಪ್ರಾಂಗಣದ ಪ್ರವೇಶಮಾರ್ಗ ದಲ್ಲಿ ಈ ಚಿತೋಡದ ಬಾಗಿಲವು ಅದೆ.