ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ವನ್ನುಂಟುಮಾಡುವದಕ್ಕೆ ಚಿತೋಡದಲ್ಲಿ ಹೆಚ್ಚು ಸೈನ್ಯವನ್ನಿಡುವದು ಅವಶ್ಯ ವೆಂದು ಅವನು ಭಾವಿಸಿದನು. ಅಸಫಖಾನನು ಈ ಯಾವತ್ತು ಸೈನ್ಯವನ್ನು ತೆಗೆ ದುಕೊಂಡು, ಕೋಟೆಯ ಹತ್ತರಿರುವ ಮೊಗಲರ ಶಿಬಿರದಲ್ಲಿಯೇ ವಾಸಮಾಡು ತಿದ್ದನು, ಯಾಕಂದರೆ ಕೆಲವು ದಿವಸಗಳವರೆಗಾದರೂ ದುರ್ಗದ ಸ್ಮಶಾನಭೂಮಿ ಯಲ್ಲಿ ವಾಸಮಾಡುವದು ಅಸಂಭವವಾಗಿತ್ತು. ಅಸಫಖಾನನ ಆಶ್ವಾಸನದಿಂದ ಕೆಲವು ಹಿಂದೂಜನರು ಬದುಕಿಕೊಂಡಿದ್ದರು; ಅವರೂ ದುರ್ಗದ ಕೆಳಭಾಗದಲ್ಲಿ ವಾಸಮಾಡಹತ್ತಿದರು; ಯಾಕಂದರೆ ಭಯಂಕರವಾದ ಜನಶೂನ್ಯ ಪಟ್ಟಣದಲ್ಲಿ ವಾಸಮಾಡಲಿಕ್ಕೆ ಅವರ ಮನಸಾಗಲಿಲ್ಲ. ಕಡೆಯಲ್ಲಿ ಮೊಗಲರು ಕೋಟೆಯ ಗೋಡೆಗಳನ್ನು ಸುಧಾರಿಸಿ, ಅಲ್ಲಿ ತೋಪುಗಳನ್ನು ಹಚ್ಚಿದರು, ಮತ್ತು ಕೆಳಗಿರುವ ಶಿಬಿರವನ್ನು ಬಿಟ್ಟು, ದುರ್ಗದಲ್ಲಿ ವಾಸಮಾಡತೊಡಗಿದರು. ಕೋಟೆಯಲ್ಲಿ ಸುರ ಕ್ಷಿತವಾಗಿರಲಿಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳು ವದಕ್ಕೆ ಅಸಫಖಾನನಿಗೆ ಒಂದೆರಡು ವರ್ಷ ಬೇಕಾದವು. ಕೋಟೆಯಲ್ಲಿ ಯಾನ-ವಾಹನ ಕಾರ್ಯಮಾಡ ಲಿಕ್ಕೂ, ಇತರ ಸೇವೆಯ ಕೆಲಸಮಾಡುವದಕ್ಕೂ ನೃತ್ಯರಿರಲಿಲ್ಲ. ಕಾರಣ ಅಸಹ ಖಾನನು ಕೆಲವು ಗುಡ್ಡಗಾಡು ಜನರನ್ನು ಕೋಟೆಯಲ್ಲಿ ತಂದಿಟ್ಟನು. ಹೀಗೆ ಎಲ್ಲ ವ್ಯವಸ್ಥೆಯನ್ನು ಮಾಡಿದರೂ, ಪಟ್ಟಣದ ಹವೆಯು ಬಹಳವಾಗಿ ಕೆಟ್ಟದ್ದ ರಿಂದ, ದಿನಾಲು ಮೊಗಲಸೈನಿಕರಲ್ಲಿ ಎಷ್ಟೋ ಜನರು ಸತ್ತು ಹೋಗತೊಡಗಿದರು. ಜನಸಂಕೀರ್ಣವಾದ ಆ ನಗರದಲ್ಲಿ, ಇಂದು ಬಹು ತುಸು ಜನರು ಮಾತ್ರ ವಾಸ ಮಾಡಹತ್ತಿದ್ದರಿಂದ, ಹಾಳಾದ ಗುಡಿಗಳ ಮೇಲೂ ಜನರ ಮನೆಗಳ ಮೇಲೂ ಹುಲ್ಲುಕಂಟೆಗಳು ಬೆಳೆಯತೊಡಗಿದವು. ಅದರಿಂದ ಪಟ್ಟಣವು ಅರಣ್ಯದಂತಾಗಿ, ಹಿಂಸ್ರಪಶುಗಳು ವಾಸಮಾಡತೊಡಗಿದವು.* ಮುಂದೆ ಕೆಲವು ವರುಷಗಳಲ್ಲಿಯೇ

  • ಪ್ರತಾಪಸಿಂಹನ ಮರಣದ ತರುವಾಯ, ಮೊಗಲ ಸೈನಿಕರು ಚಿತೋಡವನ್ನು ಬಿಟ್ಟು ಹೋದರು, ಈ ಸಮಯದಲ್ಲಿ ಚಿ ತೋಡದ ಸ್ಥಿತಿಯು ಅತಿಶಯ ಶೋಚನೀಯವಾಗಿದ್ದಿತು ಇಂಗ್ಲಂಡದ ರಾಜದೂತನಾದ ಸರ್ ಟಾಮಸ್ ರೋನು ಸನ್ ೧೬೧೫ ರಲ್ಲಿ ಅಜಮೀರಕ್ಕೆ ಬ೦ದು ಜಹಂಗೀರನ ದರ್ಶನ ತಕೊಂಡನು ಈ ಸಮಯದಲ್ಲಿ ( ಅಜಮೀರಕ್ಕೆ ಬರುವ ಮೊದಲು ) ಅವನು ಚಿತೋಡವನ್ನು ನೋಡುವದಕ್ಕೆ ಹೋಗಿದ್ದನು ಇವನ ವರ್ಣನೆಯಿಂದ ಚಿತೋಡದ ಅವ

ಯನ್ನು ತಿಳಿಯಬಹುದಾಗಿದೆ – Its inhabitants at this day are run aud Ohım, birds and wild beasts; but the stately ruing their of give a shadao of its beauty while it flourished in its pride.'* Rejas thaan I 287.'