ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪನ ರಾಜ್ಯ ಪ್ರಾಪ್ತಿ, ನೆಂದು ಸ್ಥಿರಪ್ರತಿಜ್ಞೆಯನ್ನು ಮಾಡಿದನು. ಸಹಿದಾಸನ ತರುವಾಯ ಕೃಷ್ಣದಾಸನು ಚಂದಾಯತ್ ಕುಲದ ಅಧಿಪತಿಯಾದನು. ಚಂದಾಯತ್ ಕುಲದ ಸರದಾರರು ಬಹುಕಾಲದವರೆಗೆ ಮಹಾರಾಣಾನ ಮುಖ್ಯ ಮಂತ್ರಿಗಳಾಗಿದ್ದರು. ಝಾಲೋರದ ಅಧಿಪತಿಯು ಉದಯಪುರಕ್ಕೆ ಬಂದು ಕೃಷ್ಣದಾಸನನ್ನು ಕೇಳಿದನು:- ಮಹಾ ಶಯ, ಹಿರಿಯ ಮಗನಿರುತ್ತಿರಲು, ಕಿರಿಯ ಮಗನಾದ ಜಗಮಲ್ಲನು ಅರಸನಾಗ ಬೇಕೆಂಬ ಮಾತಿಗೆ ತಾವು ಹೇಗೆ ಒಪ್ಪಿಕೊಂಡಿರಿ? ” ಕೃಷ್ಣದಾಸನು ಉತ್ತರ ಕೊಟ್ಟಿದ್ದೇನಂದರೆ- ಅಂತಿಮ ಕಾಲದಲ್ಲಿ ರೋಗಿಗೆ ಅಪಧ್ಯಸೇವನೆಯ ಇಚೆ ಯುಂಟಾದಲ್ಲಿ, ಅದನ್ನು ಯಾರು ತಡೆಯುವರು? ” ಕೃಷ್ಣದಾಸನು ಮುಂದೆ ಕೆಲವು ಹೊತ್ತು ಸುಮ್ಮನೆ ಕುಳಿತು, ಮತ್ತೆ ಹೇಳಿದನು - ಪ್ರತಾಪಸಿಂಹನೇ ಹಿರಿಯಮಗನು; ಪಟ್ಟಕ್ಕೆ ಯೋಗ್ಯ ಹಕ್ಕದಾರನು. ಅವನೇ ಅರಸನಾಗಬೇಕೆಂದು ನಮ್ಮ ಇಚ್ಛೆಯುಂಟು. ತಾವು ಯಾವ ರೀತಿಯಿಂದಲೂ ಚಿಂತಿಸಬೇಡಿರಿ, ” ತರು ವಾಯ ಈರ್ವರೂ ಕೂಡಿ, ಸೈನ್ಯದೊಡನೆ ಪ್ರತಾಪಸಿಂಹನನ್ನು ಕರೆದುಕೊಂಡು ಜಗಮಲ್ಲನ ಹತ್ತಿರ ಹೋದರು. ಗ್ಯಾಲೇರದ ಮೊದಲಿನ ಅರಸನಾದ ರಾಮಶಹನು, ಚಿತೋಡದಿಂದ ಪ್ರತಾಪಸಿಂಹನೊಡನೆ ಹೊರಬಿದ್ದು ಕಮಲಮೊರದುರ್ಗದಲ್ಲಿ ವಾಸಮಾಡಿದನು. ಅವನು ಪ್ರತಾಪನಲ್ಲಿರುವ ಉತ್ತಮ ಗುಣಗಳನ್ನು ನೋಡಿ, ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಈ ಸಮಯದಲ್ಲಿ ಇವನೂ ಗೋಗುಂಡಕ್ಕೆ ಬಂದಿದ್ದನು. ಚಿತೋಡದಲ್ಲಿ ಒಬ್ಬ ಅರಸನ ತರುವಾಯ, ಬೇರೊಬ್ಬನು ಸಿಂಹಾಸನವನ್ನೇರುವ ಕಾರ್ಯವು, ಅತಿ ತೀವ್ರವಾಗಿ ನಡೆದುಹೋಗುತ್ತಿದ್ದಿತು. ಮೃತರಾಜನ ಅಂತೇಷ್ಟಿ ಕ್ರಿಯೆಯೊಡನೆ, ಹೊಸ ಅರಸನ ಪಟ್ಟಾಭಿಷೇಕಕಾರ್ಯವೂ ನಡೆದುಹೋಗು ತಿತ್ತು. ಉದಯಸಿಂಹನು ಸತ್ತ ತುಸು ದಿವಸಗಳಲ್ಲಿಯೇ-ಫಾಲ್ಗುಣಮಾಸದ ಪೌರ್ಣಿಮೆಯ ದಿವಸ ಜಗಮಲ್ಲನು ಸಿಂಹಾಸನವನ್ನೇರಿದ್ದನು. ತರುವಾಯ ಕೃಷ್ಣದಾಸ ಮೊದಲಾದವರು ಬಂದರು. ಜಗಮಲ್ಲನು ಇವರೆಲ್ಲರಿಗೆ ಯೋಗ್ಯ ರೀತಿಯಿಂದ ಸತ್ಕಾರಮಾಡಿದನು. ಆದರೆ ಕೃಷ್ಣದಾಸ-ರಾಮಶಹರು ಗೃಹಪ್ರವೇಶ ಮಾಡಿ, ಒಬ್ಬೊಬ್ಬರು ಜಗಮಲ್ಲನ ಒಂದೊಂದು ಕೈಯನ್ನು ಹಿಡಿದು, ಅವನನು ಗಾದಿಯಿಂದ ಎಳೆದು, ಕೆಳಗೆ ಕೂಡಿಸಿದರು. ಮತ್ತು ಪ್ರಧಾನನು ಸಗರ್ವದಿಂದ ಹೇಳಿದನು:- ಮಹಾರಾಜ, ತಮಗೆ ಭ್ರಮೆಯಾಗಿದೆ; ಈ ಆಸನವು ತಮ್ಮದಲ್ಲ;