ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಮಹಾರಾಣಾ ಪ್ರತಾಪಸಿಂಹ, ದೇಶಗಳಲ್ಲಿ ಪ್ರಚಾರದಲ್ಲಿರುವದು; ಆದರೆ ಪ್ರತಾಪನು ಜನ್ಮಭೂಮಿಯು ಮಾತೆ ಗಿಂತಲೂ ಶ್ರೇಷ್ಠವಾದದ್ದೆಂದು ತೋರಿಸಿಕೊಟ್ಟಿದ್ದಾನೆ. ಮಗನು ತಾಯಿಯ ಸಲು ವಾಗಿ ಶೋಕಮಾಡುವನು; ನಿರ್ದಿಷ್ಟ ಕಾಲದವರೆಗೆ ಶೋಕಚಿನ್ನ ಧಾರಣಮಾಡು ವನು; ಆದರೆ ಪ್ರತಾಪನು ಜನ್ಮಭೂಮಿಯ ಸಲುವಾಗಿ, ಮುಂದಿನ ಸಂತತಿಯವರು ಸಹ ಶೋಕಚಿನ್ನ ಧಾರಣಮಾಡುವ ವ್ಯವಸ್ಥೆಯನ್ನು ಮಾಡಿದನು. ನಮ್ಮ ಭಾರ ತದ ಇತಿಹಾಸದಲ್ಲಿ ಕಠೋರ ತಪಸ್ವಿಗಳಾದ ಸನ್ಯಾಸಿಗಳಿಗೆ ಕೊರತೆಯಿಲ್ಲ; ಆದರೆ ರಾಜರಾಜೇಶ್ವರನಾಗಿ ಕರೋರವ್ರತಗಳಿಂದ ಸನ್ಯಾಸಿಗಳನ್ನು ಕೂಡ ಸೋಲಿಸಿದ ಉದಾಹರಣೆಯನ್ನು ರಾಜರ್ಷಿಯಾದ ಪ್ರತಾಪನು ಹಾಕಿಕೊಟ್ಟಿದ್ದಾನೆ. ಪ್ರತಾಪನು ಸ್ವದೇಶದ ಸಲುವಾಗಿ ತಾನೊಬ್ಬನೇ ಸನ್ಯಾಸಿಯಾಗಿರಲಿಲ್ಲ. ತನ್ನ ದೇಶದಲ್ಲಿಯ ಯಾವತ್ತು ಜನರನ್ನು ಸನ್ಯಾಸಿಗಳನ್ನಾಗಿ ಮಾಡಿದನು. ಪ್ರಜೆ ಗಳೆಲ್ಲರೂ ಸಾಂಸಾರಿಕರ ಮೋಹದಿಂದ ದೂರಿರುವಂತೆ ಮಾಡಿದನು. ಇದಕ್ಕಾಗಿ ಅವನು ಪ್ರಜೆಗಳಿಗೆ ಅಪ್ಪಣೆಮಾಡಿದ್ದೇನಂದರೆ'-( ಯಾವತ್ತರೂ ಮನೆ ಮೊದ ಲಾದವುಗಳನ್ನು ಬಿಟ್ಟು ಪರ್ವತದಲ್ಲಿ ವಾಸಮಾಡಬೇಕು; ಮನೆಗಳೆಲ್ಲವನ್ನು ಸುಟ್ಟು ಬಿಡಬೇಕು; ಯಾರೂ ವ್ಯಾಪಾರವನ್ನಾಗಲಿ, ಸುಖೋಪಭೋಗಗಳನ್ನಾಗಲಿ ಮಾಡಬಾರದು; ಯಾರೂ ಕುರಿಗಳನ್ನು ಕಾಯಬಾರದು, ವಿಲಾಸ-ಉತ್ಸವಗಳನ್ನಾ ಚರಿಸಬಾರದು; ಮುಸಲ್ಮಾನರ ಚಿತ್ತಾಕರ್ಷಕವಾದ ಯಾವ ಒಡವೆಯನ್ನೂ ಧರಿಸ ಬಾರದು. ಈ ಆಜ್ಞೆಯನ್ನು ಮೀರಿದವರಿಗೆ ಮರಣದಂಡನೆಯು ವಿಧಿಸಲ್ಪಡುವದು.” ಪ್ರಜೆಗಳು ಕಡೆತನಕ ಈ ಆಜ್ಞೆಯಂತೆ ನಡೆದರು. ಪ್ರತಾಪನು ಕೇವಲ ಆಜ್ಞೆಯನ್ನು ವಿಧಿಸಿ ಸುಮ್ಮನೆ ಕೂಡ್ರಲಿಲ್ಲ. ಅವನು ಕುದುರೆಯನ್ನು ಹತ್ತಿ, ಒಬ್ಬನೇ ಅನೇಕ ಕಡೆಯಲ್ಲಿ ಅಡ್ಡಾಡಿ, ತನ್ನ ಆಜ್ಞೆಯನ್ನು ಪ್ರಜೆಗಳು ಯಾವರೀತಿಯಿಂದ ಪಾಲಿಸುತ್ತಾರೆಂಬದನ್ನು ಸೂಕ್ಷ್ಮರೀತಿಯಿಂದ ನಿರೀ ಕ್ಷಿಸುತ್ತಿದ್ದನು. ಒಂದು ದಿವಸ ಒಬ್ಬ ಕುರುಬನು ಈ ನಿಯಮಗಳನ್ನು ಮುರಿದು, ಬನಾಸ ನದಿಯ ತೀರದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದನು. ಪ್ರಜೆಗಳ ದುರವಸ್ಥೆ ಯನ್ನು ನೋಡಿ, ಸದಯನಾದ ಪ್ರತಾಪನ ಅಂತಃಕರಣವು ಕರಗುತ್ತಿದ್ದರೂ, ಈ ಸಮಯದಲ್ಲವನು ರಾಜದ್ರೋಹಿಯಾದ ಕುರುಬನಿಗೆ ಕ್ಷಮೆಯನ್ನು ತೋರಿಸಲಿಲ್ಲ. ಹತಭಾಗ್ಯನಾದ ಕುರುಬನು ಪ್ರತಾಪನ ಕತ್ತಿಗೆ ಬಲಿಯಾದನು. ಪ್ರತಾಪನ ಈ