ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರೋರ ವ್ರತ ಭಯಂಕರವಾದ ಶಾಸನವನ್ನು ನೋಡಿ, ಯಾವತ್ತು ಅವನ ಆಜ್ಞೆಯಂತೆ ನಡೆಯುತ್ತಿದ್ದರು. ತೀವ್ರವೇ ಮೇವಾಡಕ್ಕೆ ಅತಿ ಶೋಚನೀಯ ಸ್ಥಿತಿಯು ಬಂದೊದಗಿತು. ಗ್ರಾಮಗಳೆಲ್ಲವು ಜನರಿಲ್ಲದಂತಾದವು; ಹೊಲಗಳಲ್ಲಿ ಒಕ್ಕಲಿಗರಿಲ್ಲದಂತಾಯಿತು. ಅಡವಿಯಲ್ಲಿ ಕುರಿಗಳಿಲ್ಲದಾದವು. ಮೊದಲು ಜನಕೋಲಾಹಲಮಯವಾದ ಮನೆ ಗಳು, ಈಗ ಮೃಗಗಳ ವಾಸಸ್ಥಳಗಳಾದವು. ರಾಜಮಾರ್ಗಗಳು ಗಿಡಗಂಟೆಗಳಿಂದ ತುಂಬಿಹೋಗಿ, ಮನುಷ್ಯಸಂಚಾರಕ್ಕೆ ಅಯೋಗ್ಯವಾದವು. ಬೆಳೆಯುಳ್ಳ ಮೇವಾ ರದ ಭೂಮಿಯು ಮರುಭೂಮಿಯಾಗಿ ಪರಿಣಮಿಸಿತು. ಅರವಲೀ ಪರ್ವತದ ಪೂರ್ವಕ್ಕಿರುವ ನಿತ್ಯ-ಉತ್ಸವಮಯವಾದ ಪ್ರದೇಶವು ದೀಪರಹಿತವಾಯಿತು. ಪ್ರತಾಪನು ಗುಡ್ಡದ ಮೇಲೆ ಅಡ್ಡಾಡುತ್ತಿರುವಾಗ ಮೇವಾರದ ಈ ದುಃಸ್ಥಿತಿಯನ್ನು ಕಂಡು ಅತೀವ ಕಳವಳಹೊಂದುತ್ತಿದ್ದನು. ಈ ವೇಳೆಯಲ್ಲಿ ಅವನ ಕಣ್ಣೀರುಗಳು ತಾವಾಗಿ ಧಾರೆಗಟ್ಟುತ್ತಿದ್ದವು; ಆದರೆ ಮಾಡುವದೇನು? ಪ್ರತಾಪನ ಕುಟುಂಬದ ಜನರ ಸ್ಥಿತಿಯು ಇದಕ್ಕೂ ಭಯಂಕರವಾಗಿ ದ್ದಿತು. ರಾಜೋಚಿತ ಸುಖವಿಲಾಸಗಳಲ್ಲಿ ಚಿರಕಾಲ ಬೆಳೆದ ಅವರು, ದೀನಭಾವ ದಿಂದ ಹೀನಜಾತಿಯ ಜನರಂತೆ ಕಂದರಗಳಲ್ಲಿ ಅಡ್ಡಾಡಬೇಕಾಯಿತು. ರಾಜಮಹಿಷಿಯು ತಾನೇ ಅಡಿಗೆ ಮಾಡಿ, ಗಿಡದ ಕೆಳಗೆ ಹುಲ್ಲಿನ ಹಾಸಿಗೆಯ ಮೇಲೆ ಮಲಗಿ, ಅತಿ ದುಃಖದಿಂದ ಕಾಲಕಳೆಯಬೇಕಾಯಿತು. ಈ ದೃಶ್ಯವು ಅತೀವ ಕಠೋರವಾಗಿದ್ದರೂ, ಪ್ರತಾನ ಪ್ರತಿಜ್ಞೆಯು ಅವನ ರಂಗಸ್ಥಳವಾದ ಅರವಲಿ ಯಂತೆ ಅಚಲವಾಗಿದ್ದಿತು!