ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ದಶನು ಪರಿಚ್ಛೇದ. ಇಷ ರಜಪೂತರ ಜಾತಿಧರ್ಮ, ಅಡವಿಯೊಳಿರುತಿಹ ಗಜವ೦ || ಪಿಡಿದೋವಲ್ ತವ ಸ್ವಜಾತಿಹರಣಕ ಸಾಯ೦ || ಮಾಡುವದೆಂದೊಡವೆಂಬದು | ಕೊಡಲಿಯ ಕಾವದು ಕುಲಕ್ಕೆ ಮೂಲ ಪುಸಿಯ ? || ೧ || ಅಕಬರನು ಮೊಗಲ ಬಾದಶಹರಲ್ಲಿ ಶ್ರೇಷ್ಠತಮನು. ಇವನು ಸೌಜನ್ಯ, ಸುವಿಚಾರ, ಗುಣಗ್ರಾಹಕತೆ ಮೊದಲಾದ ಗುಣಗಳಿಂದ ಯಾವತ್ತು ಜಾತಿಯ ಜನರ ಪ್ರೀತಿಯನ್ನು ಸಂಪಾದಿಸಿಕೊಂಡನು. ನಾವು ಅಕಬರನು ಹಿಂದುಗಳ ಮಿತ್ರ ನೆಂದೂ, ಔರಂಗಜೇಬನು ಭಾರತೀಯರ ಶತ್ರುವೆಂದೂ ತಿಳಿಯುತ್ತೇವೆ. ಆದರೆ ನಿಜವಾಗಿ ವಿಚಾರಿಸಿದರೆ ಶತ್ರುವಿಗಿಂತ ಮಿತ್ರನಿಂದ ಹಿಂದುಗಳಿಗೆ ಬಹಳ ಹಾನಿ ಯಾದದ್ದು ಕಂಡುಬರುವದು. ಅಕಬರನ ಮಿತ್ರತ್ವದಿಂದ ಹಿಂದೂ ಜನರಿಗೆ ಅದರಲ್ಲಿಯೂ ರಜಪೂತರಿಗೆ ಬಹಳ ಹಾನಿಯಾಯಿತು. ಕೇವಲ ರಾಜಧಾನಿಯಾದ ಚಿತೋಡವೊಂದೇ ಅಲ್ಲ; ರಾಜಪುತ್ರರ ಜಾತಿಧರ್ಮವು ಅಕಬರನಿಂದ ನಾಶವಾ ಯಿತು. ಅಕಬರನು ಚಿಕ್ಕವಯಸ್ಸಿನಲ್ಲಿಯೇ ದಿಲ್ಲಿಯ ಸಿಂಹಾಸನವನ್ನೇರಿದ್ದರೂ, ರಾಜಕಾರಣಕುಶಲನ್ನೂ, ದೂರದೃಷ್ಟಿಯೂ ಆಗಿದ್ದನು. ಇವನು ಸಾಮ್ರಾಜ್ಯವನ್ನು ಬೆಳೆಯಿಸುವದಕ್ಕೂ-ಏಕತ್ರ ಮಾಡುವದಕ್ಕೂ ಹುಟ್ಟಿದ್ದನೆಂದು ಹೇಳಬಹುದು. ಇವನು ಬೇರೆ ಬೇರೆ ಜಾತಿಯ ಜನರಲ್ಲಿ ಒಕ್ಕಟ್ಟಿಲ್ಲದ್ದರಿಂದ, ಹಿಂದುಸ್ತಾನದ ಅವ ನತಿಯಾಗಿದೆಯೆಂದು ವಿಚಾರಿಸಿದನು. ಹಿಂದೂ-ಮುಸಲ್ಮಾನರಲ್ಲಿಯ ಐಕ್ಯವೊತ್ತ ಔಗಿರಲಿ; ಹಿಂದೂ ಜನರಲ್ಲಿಯೇ-ಹಿಂದುಸ್ತಾನದ ಬೇರೆ ಬೇರೆ ಜಾತಿಯವರ ಲ್ಲಿಯೇ ಒಕ್ಕಟ್ಟಿರಲಿಲ್ಲ. ನಾನಾ ಜಾತಿಯ ಹಿಂದೂ ಜನರು ತಮ್ಮ ತಮ್ಮೊಳಗೆ ಬಡೆದಾಡುತ್ತಿದ್ದರು. ಈ ಸಮಯದಲ್ಲಿ ಈ ಕಲಹವನ್ನು ನಿಲ್ಲಿಸಿ, ಹಿಂದೂಮುಸ ಲ್ಯಾನರಲ್ಲಿ ಪ್ರೀತಿಯನ್ನು ಬಳೆಯಿಸಿ, ಅದರಿಂದ ಯಾವತ್ತು ಜನರ ಸಹಾಯ ಪಡೆದು, ತನ್ನ ರಾಜ್ಯವನ್ನು ಬಲಿಷ್ಠವಾಗಿ ಮಾಡುವದು ಅಕಬರನ ಉದ್ದೇಶವಾ ಗಿತ್ತು. ರಜಪೂತರು ಪಾಣಿಪತದ ಯುದ್ಧದಲ್ಲಿ ತನ್ನ ಅಣ್ಣನಿಗೆ ಸಹಾಯಕರಾಗಿ