ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು, ಮಹಿಶರ ಮಹಾರಾಜ ಚರಿತಂ. || ಪ್ರಥಮಾಶ್ವಾಸಂ. ಕಂ || ಶ್ರೀರಮಣ ಮುಖ್ಯ ನಾನಾ | ಕಾರಂಗಳನಾಂತು ತೋರ್ಪ ದೇವನದೊಗೈಲ || ಭೂರಿಪ್ರೇಮದೊಳೀಮಹಿ | ಶೂರಮಹೀಂದ್ರಾನ್ವಯಕ್ಕೊಡರುಗೆ ಶುಭಮಂ ||೧|| ವ್ಯ|| ಆವಳುಪೇಕ್ಷೆಯಿಂದ ಸುರಪಂಗಮಧೋಗತಿ ತಪ್ಪದಾದುದಿ | ನಾವಳ ನಿಯಂ ಪಡೆವನಾಯ್ತುಳಿಯುಂ ಜಗತ್ಪಭುತ್ವಮಂ || ಸೇವಿಸುವರೆ ತನ್ನಡಿಯನೊಲ್ಲು ವಶಂಗತೆಯಾಗುವಾರಮಾ | ದೇವಿ ನಿರೀಕ್ಷಿಕೆನ್ನನತಿಲದಯಾರಸಪೂರ್ಣ ದೃಷ್ಟಿಯಿಂ ||೨|| ಆವಳ ಮೈಮೆಯಿಂ ಸಮನಿಸಿರ್ಪುದು ಶಕ್ತಿ ಸಮಸ್ತ ವಸ್ತುಗ | ಇಾವಳಿನುಣ್ಣುತಿರ್ಕಮುದಯಸ್ಥಿತಿಸಂಹೃತಿಗಳಗಕ್ಕೆ ಮ || ತಾವಳ ಲೀಲೆ ನಿwದು ಪುರಾಣವಚ ಪ್ರಸರಕ್ಕಮಾಮಹಾ || ದೇವತಪಃ ಫಲಾಕೃತಿ ದಯಾವತಿ ಪಾರ್ವತಿಯಾಗೆ ಭವ್ಯಮಂ ||೩|| ನಿರತಿಶಯಾನವದ್ಯಗುಣರೆಂದೆನಿಪೀಮಹಿಶೂರಮೇದಿನೀ | ವರರ ಚರಿತ್ರಮಂ ಸರಸಭಾವಗುಣೋಜ್ವಲಗದ್ಯಪದ್ಯಬಂ || ಧುರಕೃತಿರೂಪದಿಂ ಎರಚಿಸಿ ಸಮುದ್ಯತನಾಗಿ ಬೇಡುವೇ || ಸರಸಿರುಹಾಸನಪ್ರಣಯಿನೀ ಜನನೀ ಕುಡು ವಾಗ್ವಿಭೂತಿಯ ೨ ||೪|| ಶ್ರೀಮತ್ಯಾಶ್ಯಪ ವಂಶವಾರಿನಿಧಿ ರಾಕಾತಾರಕಾಧೀಶ್ವರಂ || ಸಾಮಾಮ್ಮಾ ಯ ಕಣಾದಪಾಣಿನಿವಚಸ್ಸಾಹಿತ್ಯ ಸಂಪತ್ಪದಂ || ಚಾರ್ಮೋಪತಿ ಸಂಸ್ಕೃತಪ್ರವಚನೋಪಾಧ್ಯಾಯನಿರಂ ಯಶೋ | ಭೂಮಾಕ್ರಾಂತದಿಗಂತರಂ ಗರಪುರೀಶಾಖ್ಯಂ ಸುಧೀಶೇಖರಂ ||೫||