ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ ಭೂಲೋಕಾಮರಭೂಜಭೋಜ ಕೃತಿಯೋಳ್ಳಾಂಡಂಗಳಯ್ತಿ ರ್ಪಿನಂ || ಲಾಲಿತ್ಯಂಮಿಗೆ ಷಷ್ಠ ಕಾಂಡಮನವಂ ಗೆಯಂದದಿಂದಂ ನೆಗ || ಗ್ದಾಲಂಕಾರಿಕರೊಲ್ಲು ನೋಡಿ ತಲೆದೂಗುತ್ತಿರ್ಪ್ಪಿನಂ ಕೃಷ್ಣಭೂ | ಪಾಲೀಯಾಖ್ಯನ ನಂತೊಡರ್ಚಿದ ನಲಂಕಾರೋತ್ತಮಗ್ರಂಥಮಂ ||೬|| ಸುತನಾತಂಗೆ ತದಂಧ್ರಪದ್ಮ ಕೃಪೆಯಿಂ ಸಂಪ್ರಾಪ್ತ ವಿದ್ಯಾಧನಂ | ಕ್ಷಿತಿಪಾಲೋಮಚಾಮರಾಜಸುತ ಕೃಷ್ಣ ಕೋಣಿಪಾಧ್ಯಾಪಕಂ || ನುತಕರ್ಣಾಟಕ ಸಂಸ್ಕೃತೋಭಯ ಕವಿತ್ವಾಭಿಜ್ಞ ನಾಸ್ಥಾನಪಂ | ಡಿತರೊಟ್ಟಿ ಶ್ರುತನಯ್ಯ ಶಾಸ್ತ್ರಿ ನೆಗಳಂ ತಾನೀಮಹಾಕಾವ್ಯಮಂ ||೭|| ಕಂ || ಆವಂ ಮಜ್ಜನಕನೊಳಂ | ತೇವಾಸಿತೆಯಿಂದ ಮನ್ನ ನೋಡವಟ್ಟಿಂಬಾ || ಭಾವದೊಳೋವಿದ ನಾಚಾ || ಮಾವನಿಪ ನುದಾರಗುಣನಿಕಾಯ ಕೊಲ್ಲಾಂ ||೮|| ಕಂ | ಸಮಸಂದ ಬಾಣಗುಣವಸು | ಹಿಮಕರಮಿತಶಾಲಿವಾಹ ವರ್ಷದ ಮಹಿಶೂ || ರಮಹಾರಾಜಚರಿತಾ | ಮಹಾ ಕಾವ್ಯಮನಿದಂ ನೆಗೆಟ್ಟೆನಲಂಪಿಂ ||೯|| ವ| ಇಂತೀಮಹಾಕಾವ್ಯಮಂ ನೆಗಳು ರ್ಪಗಳನ್ನ ಕವಿತಾಶಕ್ತಿಗೆ ಮೆಜ್ಜೆ li೧೦|| ಕಂ || ಕವಿತಿಲಕನೆಂಬ ಬಿರುದಂ | ನವಮಣಿಕಟಕದೊಡ ನಿತ್ಯ ನಾಕೃಷ್ಣ ನೃಪಂ || ಪ್ರವಿದಿತಯಶ ನನಗೆ ಮನೋ | ಜವನ ನದರಂ ಕೃತಜ್ಞನೀಕೃತಿ ವೇಳೆ೦ ||೧೧|| ಮತ್ತಂ, ಕಂ|| ಸನ್ನುತ ಚಾ ಮನೃಪಾಲನ | ಸನ್ನಿಧಿ ಸಚಿವಾಧಿಕಾರಿ ನರಸಿಂಹಾರಂ || ತನ್ನಿರುಪಮ ಗುಣರಾಗದಿ | ನೆನ್ನಂ ಪ್ರೇರಿಸಲು ಮಾನಿದಂ ವಿರಚಿಸಿದೆಂ ||೧೨||