ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ | ಸ್ಟುರದುದ್ದಾಮ ಸಿತಾದ್ರಿಯಿಂ ಕಪಿಲೆಯಿಂ ಕಾವೇರಿಯಿಂ ಕೂಡಿ ಸುಂ | ದರನಾನಾನಗರಂಗಳಿಂ ದವಿರಳಂ ಕರಾಟಭೂಮಂಡಳಂ ||೧೯|| ಕಂ|| ಇದು ಭೂಕೈಲಾಸಂ ತಾ | ನಿದು ಭೂವೈಕುಂಠ ಮೆನಿಪ ಗರಪುರದಿಂದಂ || ಯದುಗಿರಿಯಿಂದ ಕೂಡಿ | ರ್ಪದರತಿಶಯ ಮಳೆಯೊಳಾರೆ ಪೊಗಳು ಕ್ಯಂ ||೨೦|| ದಕ್ಷಿಣ ಕಾಶೀಕ್ಷೇತ್ರ || ದೀಕ್ಷಿತಿಯೊಳಗೆಂದು ವಿದಿತವಾಗಿರ್ಪಬಿಲಾ || ಘಕ್ಷಯ ಕಾರಿ ಗಜಾರ | ಕೆತ್ರದಿ ನೆಸೆವ ನಾಡದೇಂ ಪಾವನಮೋ ||೨೧|} ಸುವಿಶಾಲ ತಟಾಕಂ | ಜೈವಿಧವಿಚಿತ್ರತರ ದೇವತಾಯತನಂಗಳ | ಅವಿರಳಫಲಪುಷ್ಪ ಯುತೋ | ಪವನಂಗಳು ಮಿಲ್ಲದೆಡೆಗೆ ಜಿಲ್ಲಾ ನಾಡೊಳ್ || ೨೨|| ಸ್ವರ್ಣಾಕರ ಮೆಂಬುದರಿಂ | ಕರ್ಣಯುಗಾಕರ್ಣನೀಯ ವಿಭವಮೆನಿಪ್ಪಾ || ಕರ್ಣಾಟ ಮಖಿಲಗುಣವ | ದ್ವರ್ಣಾಶ್ರಿತಮಾಗಿ ತಾನದೇ ನೊಪ್ಪುಗುಮೋ ||೨೩|| ಮೊದಲಿಂ ತುದಿವರಮಿರ್ಪ | ಕ್ಯದೊಳಂ ಕಣ್ಳಿ ಪ ಕರು ನೆಲ್ಗಳ ಬೆಳೆ ತೀ || ವಿದ ಕಾವೇರಿಯಿ ನೊಡಗೂ | ಡಿದ ನಾಡದು ಧನ್ಯವೆನಿಸಿ ಮೆರೆದು ದಿಳೆಯೊಳ್ ||೨೪|| ವ! ಇಂತು ಸಕಲಜನಕ್ಕಂ ನಾಡೆ ಸೊಗವಿಡೆನಿಪ್ಪಾನಾಡೊಳ್||೨೫|| ಕಂ|| ಮೆರೆಗುಂ ಮಹಾಬಲಾದ್ರಿಯ || ಪರಿಸರದೊ ಜೈದುನೃಪಾದಿ ಶಶಿವಂಶಜಭೋ || ವರಪಾಲಿತ ಮುರುವೈಭವ | ಭರಿತಂ ಮಹಿಶೂರರಾಜಧಾನೀತಿಲಕಂ ||೨೬||