ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

BC ಮೈಸೂರು ಮಹಾರಾಜ ಚರಿತ್ರಂ ಲೆಗಳಂ ಸನಕಟ್ಟಿ ದುಷ್ಟಶಿಕ್ಷಣಶಿಷ್ಟ ರಕ್ಷಣವಿಚಕ್ಷಣನಾಗಿ ಸುಕ್ಷೇಮದಿಂ ದರಸುಗೆಯ್ಯುತುಮಿರ್ದ೦ದು, ತಾನೆನಿತುಬಲವಂತನಾದೊಡಂ ತನ್ನೊಳಾರಡಿ ಗೊಂಡಿಪ್ಪ ಪಲಬರ್ಸಾಮಂತರಾಜರೊಂದುಗೂಡಿ ತನಗೇನಾನುಂ ಕೇಡ ನೋಡರ್ಚುಗುಮೆಂದು ಮಂತಂಗೆಯು ತಾನೆಳಸಿದಂದು ನೆರವಾಗಿರಿ ಸಮಾನಬಲನಪ್ಪುತ್ತರಭರತಖಂಡದೊಳಿರ್ಪ ದೆಹಲಿಯ ಪಾದಷಹನೆನಿಸಿದ ರಾಜಾಧಿರಾಜನಂ ಕೆಳೆಗೊಂಡಾತಂ ತನ್ನ ಮೇಲೆ ದಾಳಿಟ್ಟರ್ದ ಪಗೆವರಂ ಬಗೆ ಗೊಳ್ಳದೆ ನಿಗ್ರಹಿಸಿದ ಮಹಾವೀರನಪ್ಪ ರಾಜಾಧಿರಾಜನ ಕೆಳೆತನಂ ತನಗೆ ದೊರಕೊಂಡುದೆಂದು ನೆರೆಸಂತಸಂಬಟ್ಟು ರಾಜಮಯ್ಯಾದೆಯಿಂ ಕಳಿಸಿದ ಹಸುವದನ ಗರುಡಧ್ವಜ ಮಕರ ಮತ್ತ್ವ , ಸಾಳ್ಳ ಗಂಡಭೇರುಂಡ ಶಂಖ ಚಕ್) ಕುಠಾರಾಂಕುಶ ಧರಣೀ ವರಾಹಾದಿಬಿರುದಾಂಕಂಗಳೊರಸುಂ ಪಲವುಂ ತೆರದ ಮಂಗಳವರೆಗಳೆರಸುಂ ರಾಜಯೋಗ್ಯವಾದನರ್ಫುರತ್ನಾಭರಣಾಂಬ ರಾದಿಗಳ್ಳರಸು “ ರಾಜಗಜದೇವ ” ಎಂಬ ಬಿರುದಿನಲೇಖನನಂತು ಗೌರ ವಾತಿಶಯನಂ ಸೂಚಿಸುವರಾಜಮುದ್ರೆಯುಮಂ ಸಂತಸಂಮಿಗೆ ಸಮುಚಿತ ರಾಜಮಯ್ಯಾದೆಯಿಂ ಕಲ್ಗೊಂಡೊಡೋಲಗದೊಳ್ಳಟ್ಟರಿಂ * ಶ್ರೀಮನ್ಮಹಾ ರಾಸ ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪಾವ್ರತಿಮಜಗದೇಕ ವೀರ ಭುವನೈಕಶೂರ ರಾಗದ್ವೇಷರಹಿತ ದುಷ್ಟನಿಗ್ರಾಹಕ ಶಿಷ್ಟಪರಿಪಾಲಕ ಬೃಹಸ್ಪತಿಸಮನಧಿಷಣ ಮಹೇಂದ್ರಸವವಿಕ್ರಮ ಮಹೇಶ್ವರಸಮಾನವ ಹಾಪ್ರತಾಪ ತಾರತಮ್ಯವೇದನವಿಚಕ್ಷಣ ಧುರೀಣ ರಾಜಸತಾಮಸಸಾತ್ವಿಕ ಜನಿಗುಣ್ಯ ಪರಿಜ್ಞಾನಪಟುತನ ಹಸ್ತತಾಳಪಟಹಭೇರೀಮೃದಂಗಶಂಖ ಕಾಹಳೀವೀಣಾವೇಣತಂತ್ರಿಗುಣಲಕ್ಷಣಪ್ರಜ್ಞಾನ ವೀರನರಪತಿ ಶೂರಾ ಗ್ರಗಣ್ಯ ಮಲೆವರಗಂಡ ಅರಿಹರಿಭೇರುಂಡ ಕರ್ಣಾಟದೇಶಮುಂಡನ ಮ ಹಿರನಗರಾಧಿರಾಜವಂಶೋತ್ತಂಸ ಅರ್ಥಿಜನಕಲ್ಪಶಾಖಿ ಪ್ರತ್ಯರ್ಥಿವ ಜಪ ರ್ವತಪಕ್ಷವಜ ರಾಜಕುಲಾಬಿ ಶಶಾಂಕ ಧರಣೇವರಾಹಾದಿಬಿರುದಾಂಕ ಅಭಯಪ್ರತಾಪಾಧೀಶರ ” ಎಂಬುದ್ದಂಡಬಿರುದಾವಳಿಯಿಂ ಪೊಗಳಿಸಿಕೊ ಳುತ್ತು ಮಾಯಿಳೆಯಾಂ ಕಾವೇರಿಯಿತ್ತಡಿಯೊಳಂ ಚಿಕ್ಕದೇವರಾಜಸಾಗ ರಮೆಂದುಂ ದೇವನಾಲೆಯೆಂದುಂ ನಿಜನಾಮಾಂಕಿತಂಗಳ ಪೆರಡುಂಪರಿಕಲ್ಲ ಳಂ ತೆಗೆಯಿಸಿ ಬಹುದೂರಂಬರಂ ಜಲಸಮೃದ್ಧಿಯನಾಗಿಸೆ ||ve||