ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ, ಶ್ರೀಮತ್ಕಲ್ದಾಟದೇಶಾವತಂಸ ಮಹಿಶೂರರಾಜಧಾನಿರತ್ನ ಸಿಂಹಾಸನಾಧೀಶ್ವ ರರಾಗಿದ್ದ ಲೇಟ್ ಮಹಾರಾಜರು ಶ್ರೀಚಾಮರಾಜೇಂದ್ರ ಒಡೆಯರ್ ಬಹದೂರ್ ಜಿ.ಸಿ. ಎಸ್. ವಿ. ಯವರು ತಮಗೆ ಸಂಸ್ಕೃತೋಪಾಧ್ಯಾಯರ ಆಸ್ಥಾನ ಮಹಾ ವಿದ್ವಾಂಸರೂ ಆಗಿದ್ದ ನಮ್ಮ ತಂದೆಗಳಾದ ಸೋಸಲೆ, ಗರಳ ಪರೀಶಶಾಸ್ತ್ರಿಗಳವರ ಕಾಲದಿಂದಲೂ ನನ್ನಲ್ಲಿ ಸಾಭಿಮಾನರಾಗಿ ನಮ್ಮ ತಂದೆಗಳನಂತರ ತಮ್ಮ ಕುಮಾರಿ ಯರ ಮತ್ತು ಕುಮಾರರ ಸಂಸ್ಕೃತಕಾಟಭಾಷಾಪಾರಕ್ಕೆ ನನ್ನನ್ನೇ ನೇಮಿಸಿದರು. ಈ ಕೃತಜ್ಞತೆಯಿಂದ ನಾನು ಅವರ ಚರಿತ್ರೆಯನ್ನು ಒಂದಚಂಪೂಗ್ರಂಥವಾಗಿ ರಚಿಸ ಬೇಕೆಂದು ಉದ್ದೇಶಿಸಿದ್ದನು. ಹೀಗಿರುವಲ್ಲಿ ದರ್ಬಾರ್‌ಬಕ್ಷಿಯರಾಗಿದ್ದ ರಾಯ ಬಹದೂರ್ ಮ|| ರಾ|| ವಿ. ನರಸಿಂಹಯ್ಯಂಗಾರರೂ ಸಹ ಲೇಟ್' ಮಹಾರಾಜರವರ ಕಾಲಾನಂತರ ನನ್ನನ್ನು ಕುರಿತು ಲೇಟ್ ಮಹಾರಾಜರವರ ಚರಿತ್ರೆಯನ್ನು ನೀವೊಂದು ಗ್ರಂಥವಾಗಿ ಬರೆದರೆ ಚೆನ್ನಾಗಿರುವುದೆಂದು ”” ಪ್ರೋತ್ಸಾಹಗೊಳಿಸಿ ದ್ದರು. ಅಲ್ಲಿಂದ ಮುಂದೆ ಮಹಾಮಾತೃಶ್ರೀಯವರಾದ ಶ್ರೀಮದ್ವಾಣೀವಿಲಾಸ ಮಹಾರಾಣಿ ರೀಚಂಟ್ ಸಿ.ಐ.ಯವರೂ ಶ್ರೀಮನ್ಮಹಾರಾಜರವರಾದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಬಹದೂರ್ ಜಿ.ಸಿ.ಎಸ್, ಐಯವರೂ ಸಹ ಲೇಟ್ ಮಹಾ ರಾಜರವರಂತೆಯೇ ಪೂರಾಭಿಮಾನವಿಟ್ಟು ನನ್ನನ್ನು ಗೌರವದಿಂದ ಪುರಸ್ಕರಿಸುತ್ತಿರು ವುದಕ್ಕಾಗಿಯೂ ನಾನು ಬಹಳ ಕೃತಜ್ಞನಾಗಿ ಇವರುಗಳ ವರಮಾನಕಾಲಿಕವಾದ ಚರಿತ್ರೆಯನ್ನೂ ಅದರೊಡನೆಯೇ ಸೇರಿಸಿ ಬರೆಯಬೇಕೆಂದೂ ಹೀಗೆ ಬರೆಯುವದರಲ್ಲಿ ಈ ಮಹಾರಾಜವಂಶದ ಪೂರೈ ಚರಿತ್ರೆಯ ಮುಖ್ಯಾಂಶಗಳನ್ನೂ ಸೇರಿಸಿದರೆ ಚೆನ್ನಾಗಿ ರುವುದೆಂದೂ ಯೋಚಿಸಿ, ಆದಿಯದುರಾಯರು ಮಹಿಶೂರಸಂಸ್ಥಾನಕ್ಕೆ ಬಂದುದು ಮೊದಲುಗೊಂಡು ಮುಮ್ಮಡಿ ಕೃಷ್ಣರಾಜ ಒಡೆಯರು ಪುತ್ರ ಸ್ವೀಕಾರಮಾಡಿಕೊಂಡ ವರೆಗೆ ಶ್ರೀಮನ್ಮಹಾರಾಜ ಚಾಮರಾಜೇಂದ್ರ ಒಡೆಯರವರ ವಂಶರತ್ತಾ ಕರದಲ್ಲಿರು ಸಂತೆಯ ಅಲ್ಲಿಂದ ಮುಂದೆ ನಾನು ಪ್ರತ್ಯಕ್ಷವಾಗಿ ನೋಡಿ ತಿಳಿದಿರುವಂತೆಯ ಅವರಿವರ ಮುಖದಿಂದ ಕೇಳಿ ತಿಳಿದಿರುವಂತೆಯ ಈ ಮಹಾರಾಜರ ಚರಿತ್ರೆಯನ್ನು ಕರಾಟ ಚಂಪೂಗ್ರಂಥವಾಗಿ ರಚಿಸಿರುವೆನು. ಗುಳ್ಳ ಕಪಕ್ಷಪಾತಿಗಳು ಇದರಲ್ಲೇನಾದರೂ ದೋಷವಿದ್ದರೆ ಅದನ್ನು ಗಣ ನೆಗೆ ತಾಕಣೆ ಕ್ಷಮಿಸುವರೆಂದು ನಂಬುತ್ತೇನೆ.