ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಗ್ರಂಥವು ಸ್ತ್ರೀಯರಿಗೂ ಪಠನಯೋಗ್ಯವಾಗಿರಬೇಕೆಂಬ ಉದ್ದೇಶದಿಂದ ಇದರಲ್ಲಿ ಮಹಾಕಾವ್ಯಲಕ್ಷಣಾನುಸಾರವಾದ ಅಷ್ಟಾದಶವರ್ಣನೆಗಳೂ ಶೃಂಗಾ ರಾದಿ ನವರಸಗಳೂ ಮಿತವಾಗಿಯೂ ಗಂಭೀರವಾಗಿಯೂ ಇರುವುವು. ಈ ಗ್ರಂಥದಲ್ಲಿ ಶಬ್ದಾನುಶಾಸನಕಾರನ ನವೀನಮತವನ್ನೂ ಗಿರಿಜಾಕಲ್ಯಾ ಣಾದಿಪ್ರಾಚೀನಗ್ರಂಥಗಳ ಪ್ರಯೋಗವನ್ನೂ ಪ್ರಮಾಣೀಕರಿಸಿ ವಿಶೇಷವಾಗಿ ಶ್ರುತಿ ವೈಗುಣ್ಯವಿಲ್ಲದುದರಿಂದ ಸುಖಬೋಧೆಗಾಗಿ ಕುಕುಳಕ್ಷಳಲಕಾರಗಳ ಮತ್ತು ರೇಫಕಾರಗಳ ಪರಸ್ಪರಪ್ರಾಸನಿಯಮವು ಅನುಸರಿಸಲ್ಪಟ್ಟಿರುವುದು, ಮತ್ತು ಅಕಾರವೂ ಆಕಾರವೂ ಬರುವಸ್ಥಳಗಳಲ್ಲಿ ಚಿಕಾರಕ್ಕೆ ಆಕಾರವೂ ಆಕಾರಕ್ಕೆ ರೇಫವೂ ಉಪಯೋಗಿಸಲ್ಪಟ್ಟಿರುವುವು. ಈ ಗ್ರಂಥದಲ್ಲಿ ಮೊದಲಿಂದ ಅಯು ಆಶ್ವಾಸಗಳನ್ನು ಮೈಸೂರು ರವರ ವೆಂಟ್ ಕನ್ನಡ ಸ್ಕೂಲ್ ಹೆಡ್ಕಾಸ್ಟರಾಗಿದ್ದ ಮ|| ರಾ|| ಬಿ. ಮಲ್ಲಪ್ಪನವರೂ ಅಲ್ಲಿಂದ ಮುಂದೆ ಅಯ್ತು ಆಶ್ವಾಸಗಳನ್ನು ವೆಸ್ಲಿರ್ಯ ಎರ್ಷ ಸ್ಕೂಲ್ ಕನ್ನಡ ಪಂಡಿತರೂ ಆಸ್ಥಾನಪಂಡಿತರೂ ಆಗಿದ್ದ ವೇ|| ಲಕ್ಷ್ಮೀನರಸಿಂಹ ಶಾಸ್ತ್ರಿಗಳೂ ಅಲ್ಲಿಂದ ಮುಂದೆ ಎರಡು ಆಶ್ವಾಸಗಳನ್ನು ಮೈಸೂರು ನಾಲ್ಕಲ್‌ಸ್ಕೂಲ್ ಕನ್ನಡ ಪಂಡಿತರಾಗಿರುವ ವೇ| ತಿಮ್ಮಪ್ಪಶಾಸ್ತ್ರಿಗಳೂ ಶೋಧಿಸಿ ನೋಡಿ ಸಮ್ಮತಿಸಿರುವುದ ಕ್ಕಾಗಿ ಕೃತಜ್ಞನಾಗಿರುವೆನು. ನಳಸಂವತ್ಸರ ಚೈತ್ರಮಾಸ, ) ಕವಿತಾ ವಿಲಾಸಂ ಸೋಸಲೆ, ಅಯ್ಯಶಾಸ್ತ್ರಿ) ಮೈಸೂರು.