ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಮಾಡಿದ್ದು ಮಹಾರಾಯ. ಹೊಡೆದಾಟದಲ್ಲಿ ಸೀತೆಯ ಮೂಗಿನಮೇಲೆಯೂ ಒಂದೇ ದುಬಿತ್ತು, ಮೂಗಬಟ್ಟಿನ ಕಾವು ಮೂಗಿನ ಹೊ ಕೈಗೆ ಚುಚ್ಚಿ ಕೊಂಡು ರಕ್ತಬಂತು. ಸೀತಮ್ಮ ನು ಯಾ ವಮಾತನ್ನೂ ಆಡದೆ ಒಳಕ್ಕೆ ಎದ್ದು ಹೋದಳು. ಹೀಗೆಯೇ ಸ್ವಲ್ಪ ಮಾತಿಗೆಲ್ಲಾ ಸೀತಮ್ಮ ನನ್ನು ತಿನ್ನ ಮೃ ನು ಹೀನಮಾನವಾಗಿ ಬೈಯುತಾ ಹಂಗಿಸುತಾ ಹೀಯಾ ಳಿಸುತಾ ಇದ್ದಳು. ಈರೀತಿಯಲ್ಲಿ ಕಾಲಕಳೆಯುತಾ ಇರು ವಾಗ್ಗೆ, ವೆಂಕಮ್ಮ ವಾರ್ವತಮ್ಮ ಈ ಇಬ್ಬರು ಮುದುಕ ರಲ್ಲಿ ಯಾರಾದರೂ ಒಬ್ಬರು ಹಗಲಿನ ಅಡಿಗೆಯನ್ನು ಮಾಡಿ ಇರಿಸುತಿದ್ದರು. ಒಂದೊಂದು ದಿವಸ ಆ ಮುದುಕಿಯರಲ್ಲಿ ಯಾರಾದರೂ ಎದ್ದು ಬಡಿಸುವುದು, ಯಾವಾಗಲಾದರೂ ತಿಮ್ಮ ನೇ ಎದ್ದು ಬಡಿಸುವುದು, ಹೀಗೆ ಇತ್ತು. ತಿನ್ನು ಮೃ ನು ಸ್ವಂತವಾಗಿ ಅಡಿಗೆ ಮಾಡುತ್ತಿರಲಿಲ್ಲ. ಅಥವಾ ಸಮ ಯತಪ್ಪಿ ಯಾವಾಗಲಾದರೂ ಇವಳು ಅಡಿಗೇ ಒಲೇ ಮುಂ ದಕ್ಕೆ ಹೋದರೆ, ಅನ್ನ ಮುಗಳಕ್ಕಿಯೋ ಇಲ್ಲ ಮಿಡೆಯೋ ಆಗುತಿತ್ತು. ಹುಳಗೆ ಉಪ್ಪು ಹೆಚ್ಚು ಎಸರಿಗೆ ಹುಳಿಹೆಚ್ಚು ಒಗ್ಗರಣೆ ಇಲ್ಲದೆ ತಾಳಿದ, ಹೀಗೆಲ್ಲಾ ಮಾಡುತಿದ್ದಾಗ್ಯೂ, ನಾಲ್ಕು ಜನ ಇವಳ ಸುತ್ತ ಕಲಸಕ್ಕೆ ನಿಂತುಕೊಂಡಿರಬೇಕು. ಉಪ್ಪು ಇಷ್ಟು ಹಾಕು, ಹುಳಿ ಅಷ್ಟುಹಾಕು, ಕಾರ ಇದಕ್ಕೆ ಹೆಚ್ಚು ಅದಕ್ಕೆ ಕಡಮೆ, ಎಂದು ಹೇಳತಕ್ಕವರು ನಿಂತೇ ಇರಬೇಕು. ಈ ಪೈಕಿ ಯಾರಾದರೂ ಅತ್ತ ಇತ್ತ ಅಡ್ಡಾಡಿ ಹೋದರೆ, ಕೂಗಿಕೊಳ್ಳುವುದೆಷ್ಟೊ, ಆಲಿ ಅಬ್ಬರಿಸುವುದೆಷ್ಟೋ