ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೦ ಮಾಡಿದ್ದು ಣೋ ಮಹಾರಾಯ, ಯಾದ ಸೀರೆಲ್ಲಾ ಅಂಗೈ ಅಂಗೈಯಗಲಕ್ಕೆ ಹರಿದು ತೂ ತುಬಿದ್ದು ಹೋಗಿತ್ತು. ಅದು ಹೊಸಘಟ್ಟ ಹೊಸಸೀರೆ, ತೆಗೆದುಕೊಂಡು ಸುಮಾರು ಒಂದು ತಿಂಗಳಾಗಿತ್ತು. ಎಂದು ಹುಂಚದಡಿಸೀರೆ ಬಹು ಚೆನ್ನಾಗಿತ್ತು, ಮಗಳಿಗೋಸ್ಕರ ನೌ ರುಮನೆಯಿಂದ ಕಳುಹಿಸಿದ್ದರು. ಅದರ ಅಗಲ ಮೊಳವೂ ವರ್ಣವೂ ಅಂಬೊ ಸೆರಗೂ ಎಲ್ಲಾ ಒಂದಕ್ಕೊಂದು ಹೊಂದ ವಣಿಗೆಯಾಗಿ ಬಹು ಧಡೂತಿಯಾಗಿತ್ತು. ಅದನ್ನು ಉಟ್ಟು ಕೊಂಡು ಅತ್ತೆಗೆ ಸೀತೆಯು ನಮಸ್ಕಾರ ಮಾಡಿದಾಗಿನಿಂದಲೂ ಈ ಮಹಾಮಾತೆಗೆ ಕಂಣು ಕೆಂಪಗಾಗಿಯೇ ಇತ್ತು. ಸಮು ಯ ಬಂದಾಗಲೆಲ್ಲಾ ನಿಮ್ಮ ಮೈ ನು- ಅಯ್ಯೋ ಅವಳಿಗೇನು ಬೇಕಾದ ಸೀರೆಯನ್ನು ತೌರುಮನೆಯಿಂದ ತರಿಸಿಕೊಳ್ಳುತಾಳೆ ಬೇಕಬೇಕಾದವರ ಕೈಲಿ ತರಿಸಿಕೊಳ್ಳುತಾಳೆ. ಬೇಕು ಎಂದರೆ ಇನ್ನೂ ಭಾರಿ ಸೀರೆಗಳೆಲ್ಲಾ ಅವಳಿಗೆ ಬರುತ್ತೆ. ನನ್ನ ಯಾ ರು ಕೇಳುತ್ತಾರೆ, ನನ್ನ ಯಾರು ಸೀಯುತಾರೆ? ಅವರಪ್ಪ ನಿಗೂ ಅಜ್ಜನಿಗೂ ದೊರೆ ಬೇಕಾದ್ದನ್ನು ಕೊಟ್ಟಿದ್ದಾನೆ. ನ ಮೃ ಹೃ ಬಡವ. ಇಂಥಾ ಐಶ್ವರ್ಯವೆಲ್ಲಾ ನನಗೆ ಬಾ ಎಂ ದರ ಎಲ್ಲಿಂದ ಬಂದೀತು ? ಹೀಗೆ ನಾನಾ ವಿಧದಲ್ಲಿ ನೆವನೆನ ದಲ್ಲಿ ಸೊಸೆಯನ್ನು ಅನ್ನುತಾ - ಹಳಿಯುತಾಲೇ ಇದ್ದಳು. ತಿಮ್ಮುವಿಗೆ ಈ ಸೀರೆಯ ಮೇಲೆ ಬಹುವಾಗಿ ಕಂಣು ಇತ್ತು. ಹೇಗೋ ಏನೋ ಎಂತೋ ಸೀರೆಯಲ್ಲಾ ಅಂಗೈ ಅಂಗೈಅಗ ಅಕ್ಕೆ ತಾ ತಾತ್ತಾಗಿತ್ತು. ಇದನ್ನು ಉಟ್ಟು ಕೊಳ್ಳುವುದಕ್ಕೆ ಆಗದು, ಬೇರೆ ಮಡಿಸೀರೆ ಇಲ್ಲ. ಸೀರೆ ಉಟ್ಟುಕೊಂಡು