ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧ ಮಾಡಿದ್ದುಣೋ ಮಹಾರಾಯ, ಆ ದಿವಸ ಮಾಡಬೇಕಾದ ಮಡಿಕೆಲಸ ಬೇರೆ ಇತ್ತು. ಆದ ನ್ನು ಮಾಡದಿದ್ದರೆ ಅತ್ತೆಯ ಆಗ್ರಹಶಿಖಿಯು ಆಕಾಶಕ್ಕೂ ಭೂ ಮಿಗೂ ಏಕವಾಗುವುದು. ತನಗಾದ ಅವಸ್ಥೆಯನ್ನು ಹೇಳಿ ದರೂ ಕಷ್ಟ, ಹೇಳದಿದ್ದರೂ ಕಷ್ಟ, ಏನಮಾಡಬೇಕು? ಹಾಗೆ ಯೇ ತಾನು ಉಟ್ಟಿದ ಒದ್ದೆ ಸೀರೆಯನ್ನೆ ಚೆನ್ನಾಗಿ ಹಿಂ ಡಿ ಉಟ್ಟು ಕೊಂಡು ಒಳಕ್ಕೆ ಹೋದಳು. ಮಡಿಕೆಲಸವೆಲ್ಲಾ ಮುಗಿದಮೇಲೆ ಬೇರೆ ಮೈಲಿಗೆಯನ್ನುಟ್ಟು ಈ ಒದ್ದೆಯನ್ನು ಒಣಗಿಸಿಕೊಂಡಳು. ಹರಕು ಸೀರೆಯನ್ನು ಬೇರೇ ಕಟ್ಟಿ ಇರಿ ಸಿ ಯಾರಸಂಗಡಲೂ ಹೇಳದೆ ಆ ದುಃಖವನ್ನು ತಾನೇ ಸಹಿ ಸಿಕೊಂಡು ಸುಮ್ಮನಾದಳು. ಇನ್ನೊಂದು ದಿವಸ ಏನೋ ಹಬ್ಬವಾಯಿತು. ಸೀತ ನ್ನು ನು ಮಡಿ ಉಟ್ಟುಕೊಳ್ಳುವಾಗ ತಾನು ಹಾಕಿಕೊಂಡಿದ್ದ ಚಿನ್ನದ ಡಾ ಬನ್ನೂ ಕತ್ತಿಗೆ ಹಾಕಿದ್ದ ಕರಾಣಿಯನ್ನೂ ತೆಗೆ ದು ಉಪ್ಪು ಮೆಣಸಿನ ಗೂಡಿನಲ್ಲಿರಿಸಿ ಬಚ್ಚಲಮನೆಗೆ ಹೋ ದಳು. ಈ ಎರಡು ಆಭರಣಗಳೂ ತಾರುಮನೆಯಲ್ಲಿ ಸೀತೆ ಗೆ ಕೊಟ್ಟಿದ್ದರು. ಮೈ ತೊಳೆದುಕೊಂಡು ಹೋಗಿ ಉಪ್ಪು ಮೆಣಸಿನ ಗೂಡಿನಲ್ಲಿ ನೋಡಿದರೆ ಏಳುಎಳೆ ಕಠಾಣೆಯಲ್ಲಿ ನಾಲ್ಕು ಎಳೆ ಇದೆ ನರಳೆ ಇಲ್ಲ. ಚಿನ್ನದ ಡಾಬು ಎರಡು ತುಂಡಾಗಿ ಅಲ್ಲಿ ಇರಿಸಿತ್ತು. ಅದನ್ನು ತೆಗೆದು ನೋಡುವಲ್ಲಿ ಸೀತಮ್ಮ ನ ಸೊಂಟದ ಅಳತೆಗೆ ನಾಲ್ಕು ಬೆಟ್ಟು ಉದ್ದ ಕಡಮೆಯಾಗಿತ್ತು. ಇದನ್ನು ಕಂಡು ಸೀತೆಗೆ ಬಹಳ ದುಃಖ ಬಂತು. ಬಂದರೇನು ? ಇವಳು ಯಾರನ್ನೇನು ಮಾಡುವಹಾ