ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಐ ಣ" ಮಾಡಿದ್ದುಣೋ ಮಹಾರಾಯ, ವಿರಲಿಲ್ಲ, ಬೆಳಗ್ಗೆ ಹೊತ್ತಿಗೆ ಮುಂಚೆ ಪಾರಣೆಯಾಯಿತು. ಹೆಂಗಸರೆಲ್ಲಾ ಗಾನ ಪ್ರದಕ್ಷಣೆಯನ್ನು ಮಾಡಿಕೊಂಡುಬಂದರು. ತಿಮ್ಮಮ್ಮ, ವೆಂಕಮ್ಮ, ವಾಗೃತಮ್ಮ, ನೆರೆಮನೇ ಸುಬ್ಬಕ್ಕ, ಹೊ ಶಮನೇ ರಾಧಾಬಾಯಿ ಇವರೇ ಮೊದಲಾಗಿ ಮೂರನೇ ಜಾವ ಕೈ ಜೋಯಿಸರ ಮನೇ ಹಜಾರದಲ್ಲಿ ಸೇರಿದರು. ಮುತ್ತಗದ ಎಲೆಯನ್ನು ತಂದುಹಾಕಿಕೊಂಡಿದ್ದರು. ಎಲ್ಲರೂ ಊಟದೆಲೆಯ ನ್ನು ಹತ್ತಿಸುತಾ ಮುನ್ನಾ ದಿವಸದ ಪುರಾಣ ಬಹುಚೆನ್ನಾಗಿ ತೆಂತಲೂ, ಪತಿವ್ರತಾ ಧರ್ಮವನ್ನೂ ಪತಿವ್ರತೆಯರ ಚರಿತ್ರೆ ಯನ್ನೂ ದೀಕ್ಷಿತರು ಬಹುಚೆನ್ನಾಗಿ ಹೇಳಿದರಂತಲೂ ಮಾತ ನಾಡಿಕೊಳ್ಳುತಿದ್ದರು. ಅದರಲ್ಲಿ ಒಬ್ಬರು ಇದ್ದರೆ ಹಾಗೆ ಇರ ಬೇಕು. ಇಲ್ಲದಿದ್ದರೆ ಈ ಹಾಳ ಜನ ವನ್ನು ಎತ್ತಲೇ ಬಾರದು. ನಾಲ್ಕು ಜನರಲ್ಲಿ ಸರಿ ಎನ್ನಿಸಿಕೊಳ್ಳದಮೇಲೆ ಅದು ಎಂಥಾ ಬಾಳು ಎಂದಳು. ಇನ್ನೊಬ್ಬ ಆಕೆಯು ಎಲ್ಲರಿಗೂ ಅಂಧಾ ಮ ಹಾತ್ಮರ ಗುಣಧಿಸೀತೆ ? ಹಾಗೆಕೊಟ್ಟರೆ ದರ ಇದ್ದರೆ ಶಾಪ ಎನ್ನುವಂಧಾ ಪುಣ್ಯಾತ್ಮರು ಯಾರೂ ಕಾಣಿಸಲೂ ಇಲ್ಲ. ಅಧ ವಾ ಇದ್ದರೂ ಈಗ ಅದೆಲ್ಲಾ ನಡೆಯುವುದೂ ಇಲ್ಲ, ಎಂದಳು. ಇನ್ನೊಬ್ಬಳು ಅದೆಲ ನಡೆಯುವುದಿಲ್ಲ ಎನ್ನ ಕೂಡದು, ಇದು ಕಲಿಯುಗ, ಇಂಧನ ಇ೦ಥಾ ಯುಗದಲ್ಲಿ ಜನರನಡತೆ ಹೀಗೆ ಯೇ ಇರುವುದೆಂದು ಯುಗಧರ್ಮವನ್ನು ಹೇಳುವಾಗ ದೀಕ್ಷೆ ತರು ಹೇಳಿದರು. ಈ ಕಲಿಯುಗದಲ್ಲಿ ಹೇಗೆ ಇರಬೇಕೋ ಹಾಗೆ ಇದ್ದರೆ ಸಾಕು. ಆ ಕಾಲದಲ್ಲಿ ಜರಗಿದ್ದೆಲ್ಲಾ ಈಗ ಆಗಬೇಕಾ ದರೆ ಕಷ್ಟ ಎಂದಳು. ಇನ್ನೊಬ್ಬ ಸ್ತ್ರೀಯು ಮುಖ್ಯವಾಗಿ ಹಿಂದಿ