ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಮಾಡಿದ್ದು ಣೋ ಮಹಾರಾಯ, ವರವೇ ಕಾಧ್ಯಕಾರಿಯಾದ್ದು. ಆಗ ತಿಮ್ಮಣ್ಣ ಶಾಸ್ತ್ರಿಗಳೆಂ ಬುವರು ರಾಜರಲ್ಲಿ ಆಪ್ತರಾಗಿ ನಿಂತು ಅರಿಯದವರ ಬಾಯಿ ಯಲ್ಲಿ, ಮಂತ್ರಿ ಎಂಬ ಹೆಸರನ್ನು ಸಂಪಾದಿಸುತ್ತಾ ಇದ್ದರು. ಅರ ಮನೇ ವೆಚ್ಚವನ್ನು ಕಡಮೆಮಾಡಿ ದೊರೆಗೆ ಊಟಮಾಡುತೇ| ನೆಂದು ನಟಿಸುತ್ತಾ ಇದ್ದ ಈ ಶಾಸ್ತ್ರೀಯು ಅಪ್ರಣೆಯಾಗಿದ್ದ ಅನಾ ಮಿನಲ್ಲಿ ಅರ್ಧವನ್ನು ಮಾತ್ರ ಸದಾಶಿವ ದೀಕ್ಷಿತನಿಗೆ ಕೊಡಿಸಿದನು, ಸಂಜನಾಡಿಯಲ್ಲಿ ಮದುವೆ ಬೆಳೆಯಿತು. ಸಂಜನಾಡಿ ಜೋಯಿಸರಿಗೆ ಹೆಚ್ಚಾದ ಭೂಸ್ಥಿತಿ ಮೊದಲಾದ್ದು ಇತ್ತು. ಕಾಲಕ್ಕೆ ೨೦೦ ಕಂಡಗ ದವಸ ಬರುತಿತ್ತು. .ಸಂವತ್ಸ ರಕ್ಕೆ ೫೦೦ ರವಾ ರೊಕ್ಕವಾಗಿ ಬರುವ ಒಂದು ಸರ್ವನಾ ನ್ಯವಿತ್ತು. ಚೀಟಿ ವಾಟಗಳು ಎರಡು ಮೂರು ಸಾವಿರ ರೂಪಾ ಬಾಳುವಮಟ್ಟಿಗೂ ಇತ್ತು. ಚಾತಕ ಭಾಗದಲ್ಲಿ ಪ್ರಶ್ನೆ ಭಾಗ ದಲ್ಲಿ ನಾಲ್ಕು ಗಾವುದ ಸುತ್ತಲೂ ಈತನನ್ನು ನಿವಾರಿಸಿದವರು ಯಾರೂ ಇರಲಿಲ್ಲ. ಕೃಷ್ಣರಾಜ ಒಡೆಯರವರವರೆಗೂ ಈತನ ಹೆಸರು ಮುಟ್ಟಿತ್ತು. ಕಾಮರಾಜನಗರಕ್ಕೆ ಬಂದಾಗ ಸಂಜ ವಾಡಿಯ ನೀಲಕಂರಟೋಯಿಸರನ್ನು ಕರೆಯಿಸಿಕೊಂಡು ತನ್ನ ಚಾತಕವನ್ನು ತೋರಿಸುವುದು, ಪ್ರಶ್ನೆ ಮೊದಲಾದ್ದನ್ನು ಕೇಳುವುದು ಹೀಗೆ ರಾಜರು ಮಾಡುತ್ತಾ ಇದ್ದರು. ಜಾತಕ ಭಾಗವನ್ನು ಕೃಷ್ಣ ರಾಜ ಒಡೆಯರು ಸ್ವಯಂ ಚೆನ್ನಾಗಿ ತಿಳಿದಿದ್ದರು. ಪುಡಿಟೋಯಿ ಸರುಗಳೆಲ್ಲರೂ ಅವರೆದುರಿಗೆ ಹೋಗಲು ಹೆದರುತ್ತಿದ್ದರು. ಪದೇ ಪದೇ ರಾಜರು ಕರೆಯಿಸಿ ಜ್ಯೋತಿಷ ವಿಚಾರವನ್ನು ಚರ್ಚಿಸುತಾ ಇರಬೇಕಾದರೆ, ನೀಲಕಂಠಜೋಯಿಸನ ಯೋಗ್ಯತೆಯು ಸಾಧಾರಣ ಯೋಗ್ಯತೆ ಎನ್ನಿಸುವುದಿಲ್ಲ.