ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೯ ಮಾಡಿದ್ದು ಣೋ ಮಹಾರಾಯ, ಹಿತನು ಊರಿಗೆ ಬಂದಮೇಲೆಯೂ ಹಟ್ಟಿಯಲ್ಲಿ ಮಲಗಿದ್ದ ಸೀತಮ್ಮ ನ ಸ್ಥಿತಿ ಏಕರೀತಿಯಾಗಿತ್ತು. ಆ ಮಧ್ಯೆ ಕಿಟ್ಟ ಚೋಯಿನನು ನಸ್ಯದ ಆಶೆಗೋಸ್ಕರ ಅಮ್ಮನಗುಡಿಯ ಗುಂಪಿ ಗೆ ಹೋಗಿ ಕೂತುಕೊಂಡು ಹರಸೀಬಡಿಯುತಿರುವಾಗ, ಪೂಜಾ ರಿ ಅವಾಜಿಯು ಲೋಕಾಭಿರಾಮವಾಗಿ ಯಾವ ದೋ ಮಾತ ನಾಡುತಾ-ನಿನುಕಿಟ್ಟಪ್ಪ, Tಕ್ಷಿತರು ಮೈಸೂರಿಗೆ ಹೋಗಿ ಬಂದರಲ್ಲ, ಯಾರಾದರೂ ಸಿಕ್ಕಿದರೆ ? ಸಿನ್ನು ಮಹಾದೇವನ ಹೆಂಡತಿಗೆ ಏನಮಾಡಿಸಿದರು ? ಎಂದನು. ಅದಕ್ಕೆ ಆಟೋ ಯಿಸನು-ನಮ್ಮ ಭಾವ ಮೈಸೂರಿಗೆ ಹೋಗಿಬಂದರು, ದೊಡ್ಡ ಮಂತ್ರವಾದಿ ೩-೪- ದಿವಸದಲ್ಲಿ ಬರುತ್ತಾನೆ, ಅದು ಎಂಧಾ ರೋಗನೇ ಆಗಲಿ ಭೀತಿಶಂಕೆಯೇ ಆಗು ನರಕುಶಲ ವಾದರೂ ಸರಿಯೆ ಮನುಷ್ಯರ ಕಡೆಯದಾದರೂ ಸರಿಯ, ಒ೦ದು ದಿವಸದಲ್ಲಿ ಗುಣಮಾಡುತಾನೆ. ನೀನು ನನಾಡಲಾರದೇ ಹೋದೆ ; ಇನ್ನೆನುಮಾಡುವುದು ? ಯಾರನ ದರೂ ಕರೆದು ತಂದು ಎನಾದರೂ ಮಾಡಿಸಲೇಬೇಕು, ಎಂದು ಐಿಲಾಗಿ ನೆಸ್ಸದ ಸಿಂಬಳವನ್ನು ಮೇಲಿನ ತುದಿಯಿಂದ ಬಾಯಿಗೆ ಹರಿ ಸಿಕೊಳ್ಳುತಾ ಅದನ್ನು ಆಗಾಗ್ಗೆ ತೆಗೆದು ಬಳಿಗೆ ಒರಿಸಿಕೊ ಳ್ಳುತಾ ಮಾತನಾಡಿದನು. ಈ ಮಾತ ಕೇಳಿದಕೂಡಲೆ ಆವಾ ಜಿಯ ಮನಸ್ಸಿನಲ್ಲಿ ಬಹಳ ಕಳವಳವಾಯಿತು. ದೊಡ್ಡ ಸಂಸ್ಥಾನದಿಂದ ಬರತಕ್ಕ ಮಂತ್ರವಾದಿಯ ಹೆಸರುವಾಸಿಯು ಎಷ್ಟಾದರೂ ದೊಡ್ಡದಾಗಿಯೇ ಇರುತ್ತೆ ? ಅವನು ಬಂದ ಮೇಲೆ ಏನಾದರೂ ಮಾಡಿಯಮಾಡುತಾನೆ ಎಂಬ ದಿಗಲು (1)