ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೆ ಮಾಡಿದ್ದು ಮಹಾರಾಯ, ಳ್ಳುತಾ ಶವವನ್ನು ಮೇಲಕ್ಕೆ ಎತ್ತಲೀಸದ ಪ್ರಲಾಪಿಸುತಿದ್ದಳು. ಇವಳ ದುಃಖವನ್ನು ನೋಡಿ ಅಲ್ಲಿ ನೆರೆದಿದ್ದ ಜನರೆಲ್ಲಾ ಗೊಳೋ ಎಂದು ಅತ್ತರು. ಶವವನ್ನು ಎತ್ತಿಕೊಂಡು ವಾಹ ಕರು ಹೊರಟರು. ದಾರಿಯಲ್ಲಿ ಆ ಹೆಣದಮೇಲೆ ಅರಿಶಿನ ಎರೆ ಚಿದವರು, ಕುಂಕುಮ ಎರೆಚಿದವರು, ಹೂ ಎರೆಚಿದವರು, ಹೀಗೆಲ್ಲಾ ಆಯಿತು. ನಮ್ಮ ರ ಲಕ್ಷ್ಮಿ ಹೊರಟು ಹೋದಳು ಎಂದು ಗುಂಪಲ್ಲಾ ಒಟ್ಟಿಗೆ ಅತ್ತುಬಿಟ್ಟಿತು. ಊರಿಗೆ ಸ್ಮಶಾನವು ಬಹಳ ದೂರವಾಗಿರಲಿಲ್ಲ. ನದೀ ತೀರದಲ್ಲಿ ಎರಡು ಮೂರು ಕಲ್ಲು ಎಸೆಗೇ ದೂರದಲ್ಲಿತ್ತು, ಹೆಣವನ್ನು ತೆಗೆದುಕೊಂಡು ಹೋಗಿ ಅಲ್ಲಿಳುಕಿದರು. ಸದಾ ಶಿವದೀಕ್ಷಿತನೇ ಬೆಂಕಿಯನ್ನು ಹಿಡಿದು ಕೊಂಡು ಹೋದನು. ಮುಂಚಿತವಾಗಿಯೇ ಚಿತಿ ಒಡಿತ್ತು. ಕಾಡು ಸಮಾಜದಲ್ಲಿ ದ್ದ ಕಾರಣ ಬೇಕಾದಷ್ಟು ಸೌದೆಯನ್ನು ಒಡ್ಡಿದರು. ನಗು ವಾದ ಕೃಷ್ಣಸ್ವಾಮಿಯ ಹೆಸರಿನಮೇಲೆ ಸದಾಶಿವದೀಕ್ಷಿತನೇ ಮಂತ್ರಾಗಿಯನ್ನು ಹಾಕಿದನು. ಶವಕ್ಕೆ ಉಡಿಸಿದ್ದ ಬಟ್ಟೆಯ ನ್ನು ಶಾರೀತ್ಯಾ ತೆಗೆದು ಹಾಕಲು ಪುರೋಹಿತನು ಮಂ ಇಹೇಳಿದಾಗ ವಾಹಕರು ಹೆಣದ ಮೈ ಮೇಲಿದ್ದ ಸೀರೆಯನ್ನು ಬಿಚ್ಚುವುದಕ್ಕೆ ಹೋದರು. ಆಗ ದೀಕ್ಷಿತನು- ಕಂಣಿನಲ್ಲಿ ತುಂಬಾ ನೀರಸುರಿಸುತಾ ಬಿಕ್ಕಳಿಸಿ ಬಿಕ್ಕಳಿಸಿ ಅಳುತಾನಮ್ಮ ಸೀತಮ್ಮ ಬಹು ಮಾನಿಷ್ಕಳು. ಆ ಸೀರೆಯನ್ನು ಬಿಚ್ಚಬೇಡಿ, ಕರ್ನು ಲೋಪವಾದರೆ ಪ್ರಾಯಶ್ಚಿತ್ತ ಮಾಡಿಬಿ ಡೋಣ, ಎಂದು ಹೇಳಿದನು. ಅದರಂತೆ ಸೀರೆಯನ್ನು ತೆಗೆ