ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

පෙළ ಮಾಡಿದ್ದು ಸ್ಪೂ ಮಹಾರಾಯ, ಯದೆ ಹೆಣದಮೇಲೆ ಬಿಟ್ಟುಬಿಟ್ಟರು. ಅಗ್ನಿ ಪ್ರವೇಶವಾಯಿತು. ಕಟ್ಟಿಗೆ ಸ್ವಲ್ಪ ಹಸಿಯಾಗಿತ್ತು. ಹತ್ತುವುದು ತಡವಾಯಿತು. ಎಲ್ಲರೂ ಸ್ವಲ್ಪ ಹೊತ್ತು ಇದ್ದು ಇನ್ನೇನು ಹತ್ತಿಕೊಳ್ಳುತ್ತ ಎಂದುಕೊಂಡು ಹೊರಟುಹೋದರು. • ಆಗ ರಾತ್ರಿ ಹತ್ತುಗ ಳಿಗೆಯಾಗಿತ್ತು. ಕೊಯಮುತ್ತೂರು ಮೊದಲಾದ ಪ್ರಾಂತ್ಯಕ್ಕೆ ಹೋಗು ನದಾರಿಯು, ಈ ನದೀ ತೀರದಲ್ಲಿ ಸ್ಮಶಾನಕ್ಕೆ ಸಮಾನವಾ ಗಿ ಇತ್ತು. ಕಣವೇಕೆಳಕ್ಕೆ ಹೋಗಿ ಅಲ್ಲಲ್ಲಿ ತಂಗಿ ಹಿಂದಿನ ಊರಿನಲ್ಲಿ ಸ್ವಲ್ಪ ಬಿಸಿಲ ತಂಪಿಸಿಕೊಂಡು ಹೊರಟ ಇಬ್ಬರು ಬ್ರಾಹ್ಮಣರು ಮಡಿಚೀಲದ ಗಂಟುಗಳನ್ನು ಹೆಗಲಿಗೆ ಸೇರಿಕೊಂ ಡು ಬೆಳದಿಂಗಳಲ್ಲಿ ಇಬ್ಬರೂ ಮಾತನಾಡಿಕೊಳ್ಳುತಾ ಬೀಸಿ ಕಾಲನ್ನು ಹಾಕುತಾ ಆ ದಾರಿಯಲ್ಲಿ ಬಂದರು. ಇವರಲ್ಲಿ ಒ ಬೃನು ಆಂಧ್ರದೇಶದವನು. ಅವನ ಹೆಸರು ಆನಂದ ಭಟಜಿ. ಇನ್ನೊಬ್ಬನು ಕರ್ಣಾಟಕ ಶ್ರೀರಂಗಪಟ್ಟಣದ ವಾಸಸ್ಥ. ಆ ವನ ಹೆಸರು ಗಿರಿಯಣ್ಣ, ಇವರಿಬ್ಬರೂ ಬಹುಕಾಲದಿಂದ ಸ್ನೇಹಿತರಾಗಿದ್ದರು. ಇವರಿಬ್ಬರೂ ಅಲ್ಲಿ ಬರುತಿರುವಾಗ ದೂ ರಕ್ಕೆ ಬೆಂಕಿಯ ಬೆಳಕು ಕಂಡಿತು. ಇನ್ನೂ ಹತ್ತರಕ್ಕೆ ಬಂದರು. ಮಷಾಣದ ಬೆಂಕಿ ಕಂಡಿತು. ಆಗ ಭಟಜಿಯು ದೂರದಿಂದಲೂ ಆ ಬೆಂಕಿಯನ್ನೆ ದೃಷ್ಟಿಸಿ ನೋಡಿಕೊಂಡೇ ಬರುತಾ ಸ್ವಲ್ಪ ಹೊತ್ತು ಗಿರಿಯಣ್ಮನ ಸಂಗಡ ಯಾವ ಮಾ ತನ್ನೂ ಆಡದೆ ಅವನು ಕೇಳಿದ್ದಕ್ಕೆ ಯಾವ ಉತ್ತರವನ್ನೂ ಕೊಡದೆ ಹೋಗುತಾ ತಟ್ಟನೆ