ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಮಹಾರಾಯ, S೯೭ ಆಗ ಸದಾಶಿವ ದೀಕ್ಷಿತನು ಭ್ರಮೆಯಿಂದ, ಅವರಲ್ಲಿ ಒಬ್ಬನು ಪಶುಪತಿ ಸಾಂಬಶಾಹಿಯಾಗಿರಬಹುದೆಂದು ತಿಳಿದು, ದೀಕ್ಷಿತ-ಯಾರು, ಮಾವಯ್ಯನೆ ? ಭಟಜಿ- ಸ್ವಾಮಿ, ನಾವು ಕೊಯಿಮುತ್ತೂರು ಪ್ರಾಂತ್ಯದಿಂ ದ ಬಂದೆವು. ಹಗಲು ಬಿಸಿಲು, ಆದಕಾರಣ ರಾತೆ ಯೆಲ್ಲಾ ನಡೆದುಕೊಂಡು ಬಂದೆವು. ಬಹು ಆಯಾಸ ವಾಗಿದೆ. ಈ ಊರಲ್ಲಿ ಇನ್ನು ಎಲ್ಲಿಯೂ ಇಳಿಯು ವುದಕ್ಕೆ ಸ್ಥಳ ದೊರೆಯಲಿಲ್ಲ. ಎಲ್ಲಿ ವಿಚಾರಿಸಿದರೂ ಜೋಯಿಸರ ಮನೆಗೆ ಹೋಗಿ ಎಂದು ಹೇಳುತ ಬಂ ದರು. ತಮ್ಮ ಖ್ಯಾತಿಯನ್ನು ಕೇಳಿ ಇಲ್ಲಿಗೆ ಬಂ ದೆವು. ನಾಳೆ ಸಾಯಂಕಾಲದವರೆಗೂ ಇಲ್ಲಿದು ಸುಧಾ ರಿಸಿಕೊಂಡು ಮುಂದಕ್ಕೆ ಹೋಗುತ್ತೇವೆ. ದೀಕ್ಷಿತ-ಸೌಮಿ, ತಾವು ಇನ್ನು ಯಾರಮನೆಗಾದರೂ ಹೋ ಗಿ ಇಳಿದುಕೊಳ್ಳಿ. ಕತ್ತಲೆಯಲ್ಲಿ ಕಾಣಿಸಲಿಲ್ಲ. ಮೈಸೂರಿಂದ ಬಂದ ನನ್ನು ಬಂಧುಗಳಿರಬಹುದೆಂದು ತಿಳಿದುಕೊಂಡಿದ್ದೆವು. ನೀವು ಮೈಸೂರಿನವರಲ್ಲವೆಂದು ತಿಳಿದಿದ್ದರೆ ಬಾಗಿಲ ತೆಗೆಯುತಿರಲಿಲ್ಲ. ನಮಗೆಲ್ಲಾ ಆಶೌಚ, ಬೇರೆ ದಯಮಾಡಿಸಿ, ಭಟಜಿ-ತನುಗೆ ಎಂಧಾ ಆಶೌಚ ? ದೀಕ್ಷಿ-ನನಗೆ ಮೃತಾಶೌಚ. ಭಟಜಿ-ಕಾರಣವೇನು ? ದೀಕಿ-ನಮ್ಮ ಸೊಸೆ ಸತ್ತು ಹೋದಳು. ಸ್ಮಶಾನಕ್ಕೆ ಕೊಂಡು ಹೋಗಿ ದಹನಮಾಡಿ ಬಂದು ಜಾವ ಹೊತ್ತಾಯಿತು. 38