ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಮಾಡಿದ್ದು ಸ್ಪೂ ಮಹಾರಾಯ, ಅವಳ ತಲೆಯನ್ನು ತಡವರಿಸುತಾ- ಅಮ್ಮಾ, ನೀನು ನಮ್ಮ ಲ್ಲರನ್ನೂ ಬಿಟ್ಟು ಎಲ್ಲಿ ಹೋಗಿದ್ದೆ ತಾಯಿ ? ಹೇಗೆ ಬದುಕಿ ಬಂದೆ ? ಇದೇನಾಶ್ಚರ್ಯ ! ನಿನಗೆ ಏನಾಯಿತು ? ಯಾ ಮದುರ್ಮಾರ್ಗರು ಏನಮಾಡಿದರೆ ? ನಿನ್ನ ಭಾಗದ ರಾವು ಲಕ್ಷ್ಮಣರ ಹಾಗೆ ಬಂದು ಈ ಪುಣ್ಯಾತ್ಮ ರು ಕಾವಾಡಿದರೆ ಅನ್ನು ? ಪುನಃ ತಾಯಿಹೊಟ್ಟೆಯಲ್ಲಿ ಹುಟ್ಟಿದೆಯ, ಗಂದ ನಿಗೆ ಹೆಂಡತಿಯಾದೆಯ, ಮಗುವಿಗೆ ತಾಯಾದೆಯ ? ಎಂದು ಹಲವು ಬಗೆಯಲ್ಲಿ ಹಂಬಲಿಸಿದಳು. ಎಲ್ಲರಿಗೂ ಆನಂದಬಾಷ್ಪ ಸುರಿಯಿತು. ದೀಕ್ಷಿತನು ಎದ್ದು ಬ್ರಾಹ್ಮಣರಿಬ್ಬರಿಗೂ ನಮ ಸ್ಕಾರಮಾಡಿ-- ಸ್ವಾಮಿ ಎಂದೆಂದಿಗೂ ಇಲ್ಲದ ಈ ಆಶ್ಚಯ್ಯ ಕ್ಕೆ ಕಾರಣವೇನು, ಅಪ್ಪಣೆಯಾಗಲಿ, ಎಂದು ಎರಡು ಕೈ ಗಳನ್ನೂ ಮುಗಿದು ಕೇಳಿಕೊಂಡನು. ಅದಕ್ಕೆ ಭಟಟಿಯುಸೀತಮ್ಮನೇ ಹಿಂದಿನ ವೃತ್ತಾಂತವನ್ನು ಹೇಳಲಿ, ಎಂದನು. ಆಗ ಸೀತಮ್ಮ ನು ಪರಮ ನೀಚನಾದ ಅಮ್ಮ ನಗುಡಿ ಸಿದ್ದ ಮಾಡಿದ ಅಕೃತ್ಯವನ್ನು ತಾನು ತಿಳಿದಮಟ್ಟಿಗೆ ವಿವರಿಸಿ ತಾ ನು ಮೊದಲು ಹಿತ್ತಲಿಬಾಗಿಲಿನಿಂದ ಬರುತಾ ಇರುವಾಗ್ಯ ಜ್ಞಾನ ತಪ್ಪಿ ಬಿದ್ದು ಹೋಗುವ ತನಕ ನಡೆದ ವೃತ್ತಾಂತವ ನೈಲಾ' ಸ್ಪಷ್ಟವಾಗಿ ವಿವರಿಸಿದಳು. ಆ ತರುವಾಯ ಗಿರಿ ಯಂಣನು ಸ್ಮಶಾನದಲ್ಲಿ ನಡೆದ ಸಂಗತಿಗಳನ್ನೂ ಸಿದ್ಧ ಮಾ ಟದ ಬೊಂಬೆ ಕಿತ್ತು ತಂದು ಬೆಂಕಿಯಲ್ಲಿ ಸುದ್ದ, ಅವನ ಹಲ್ಲುಗಳೆಲ್ಲಾ ಉದುರಿ ಹೋದನ್ನೂ ಅವನು ರಕ್ತ ಕಾರಿಕೊಂಡು ಅಳುತಾ ಊರಿಗೆ ಓಡಿಹೋದ್ದನ್ನೂ ತಾ ವುಗಳು ಊರಿಗೆ ಬಂದದ್ದನ್ನೂ ಸವಿಸ್ತಾರವಾಗಿ ಹೇಳಿದನು.